Kisan Credit Card Loan – 2025ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಮಹತ್ವದ ಘೋಷಣೆ ಮಾಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರವನ್ನು ಬಲಪಡಿಸಲು ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅದರ ಭಾಗವಾಗಿ, ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಬಜೆಟ್‌ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ಹೆಚ್ಚಿಸಲಾಗಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ನೀಡುವ ಸಾಲದ ಪ್ರಮಾಣವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಿದ್ದು ರೈತರಿಗೆ ಶುಭ ಸುದ್ದಿಯಾಗಿದೆ.
Kisan Credit Card Loan – ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಎಂದರೇನು?
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲವನ್ನು ನೀಡುವ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯನ್ನು 1998ರಲ್ಲಿ ಭಾರತ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ನಾಬಾರ್ಡ್ ಸಹಯೋಗದೊಂದಿಗೆ ಪ್ರಾರಂಭಿಸಿತು. ಈ ಕಾರ್ಡ್‌ನ ಮೂಲಕ ರೈತರು ಬಿತ್ತನೆ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಇತರ ಕೃಷಿ ಅಗತ್ಯಗಳನ್ನು ಪೂರೈಸಬಹುದಾಗಿದೆ.
Kisan Credit Card Loan – ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಯಾರು ಅರ್ಹರು?
- ಎಲ್ಲಾ ರೈತರು, ಒಂಟಿಯಾಗಿ ಬೇಸಾಯ ಮಾಡುವವರಿಂದ ಹಿಡಿದು, ಜಂಟಿ ಬೇಸಾಯದವರವರೆಗೆ.
- ಭೂಮಿಯ ಮಾಲೀಕರು, ಗೇಣಿದಾರರು, ಮೌಖಿಕ ಗುತ್ತಿಗೆದಾರರು ಕೂಡ ಅರ್ಹರು.
- ಸ್ವಸಹಾಯ ಗುಂಪು (SHG) ಅಥವಾ JLG ಕೃಷಿ ಮಾಡುವ ರೈತರು ಅರ್ಹತೆ ಪಡೆಯಬಹುದು.
Kisan Credit Card Loan – ಕಿಸಾನ್ ಕ್ರೆಡಿಟ್ ಕಾರ್ಡ್ ವಿಶೇಷ:
- ಕೃಷಿ ಆದಾಯ ನೇರ ಖಾತೆಗೆ: ಬೆಳೆ ಮಾರಾಟದ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ.
- ಎಲ್ಲಾ ATMಗಳಲ್ಲಿ ಕಾರ್ಯ: ಮ್ಯಾಗ್ನೆಟಿಕ್ ಸ್ಟ್ರೈಪ್ ಮತ್ತು PIN ಸಹಿತ, ಯಾವುದೇ ಬ್ಯಾಂಕ್ ATMನಿಂದ ಹಣ ತೆಗೆಯಬಹುದು.
- ಸುರಕ್ಷಿತ: ಆಧಾರ್-ಲಿಂಕ್ ಮತ್ತು ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಸುರಕ್ಷಿತ ವ್ಯವಹಾರ.
- ವಿಶ್ವಸ್ತತೆ: ವೀಸಾ, ಮಾಸ್ಟರ್ಕಾರ್ಡ್ ನೆಟ್ವರ್ಕ್ ಮೂಲಕ ದೇಶ-ವಿದೇಶಗಳಲ್ಲಿ ಬಳಕೆ ಸಾಧ್ಯ.
- ಆಧಾರ್ ಲಿಂಕ್ಡ್ ಬ್ಯಾಂಕಿಂಗ್ ವ್ಯವಸ್ಥೆಯಡಿ, ಕೆಲವು ಬ್ಯಾಂಕ್‌ಗಳಲ್ಲಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಡೆಬಿಟ್ ಕಾರ್ಡ್‌ಗಳನ್ನು ಸಹ ನೀಡಲಾಗುತ್ತದೆ.
Kisan Credit Card Loan – ಈ ಯೋಜನೆಯ ಲಾಭಗಳು:
- ರೈತರಿಗೆ ಆರ್ಥಿಕ ಸಹಾಯ – ಶೀಘ್ರ ಸಾಲ ಮಂಜೂರು
- ಕೃಷಿ ಉತ್ಪಾದನೆಯಲ್ಲಿ ವೃದ್ಧಿ – ಸಮರ್ಥ ಬೆಳೆ ನಿರ್ವಹಣೆ
- ಬಡ್ಡಿ ರಿಯಾಯಿತಿ – ಸರಳ ಸಾಲ ಮರುಪಾವತಿ ಆಯ್ಕೆ