ಹೈಕೋರ್ಟ್ ವಕೀಲೆ ಹಾಗೂ ಕೆ.ಎಸ್.ಎಸ್ ಅಧಿಕಾರಿ ಪತ್ನಿ ಚೈತ್ರಾ ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಜಯ್ ನಗರ ಬಳಿಯಿರುವ ಅಣ್ಣಯ್ಯ ಲೇಔಟ್ ನಲ್ಲಿ ನಡೆದಿದೆ. ಕೆಐಎಡಿಬಿನಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡುತ್ತಿರುವ ಶಿವಕುಮಾರ್ ರವರ ಪತ್ನಿಯೇ ಮೃತ ಚೈತ್ರಾ ಎನ್ನಲಾಗಿದೆ. ಮೃತ ದುರ್ದೈವಿ ಸಂಜಯ್ ನಗರದ ಬಳಿಯಿರುವ ಅಣ್ಣಯ್ಯ ಲೇಔಟ್ ನಲ್ಲಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಚೈತ್ರಾ ತಮ್ಮ ಸ್ವಂತ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದಾಳೆ. ಕುಟುಂಬಸ್ಥರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಚೈತ್ರಾ ಮನೆಯಲ್ಲಿ ಯಾರೂ ಇಲ್ಲದೇ ಸಮಯದಲ್ಲಿ ನೇಣಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮನೆಯಲ್ಲಿ ಹೋಗಿ ನೋಡಿದಾಗ ವಿಚಾರ ತಿಳಿದಿದೆ. ಬಳಿಕ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿದ್ದಾರೆ ಎನ್ನಲಾಗಿದೆ. ಇನ್ನೂ ಚೈತ್ರಾ ಹೈಕೋರ್ಟ್ ವಕೀಲೆಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅದರ ಜೊತೆಗೆ ಮಾಡಲಿಂಗ್ ಹಾಗೂ ಕ್ರೀಡೆಯಲ್ಲೂ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
ಇನ್ನೂ ಚೈತ್ರಾ ಸಾವಿಗೆ ಆಕೆಯ ಪತಿ ಶಿವಕುಮಾರ್ ರವರೇ ಕಾರಣವೆಂದು ಆಕೆ ಸಹೋದರ ಕೊಟ್ಟ ದೂರಿನ ಮೇರೆಗೆ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ. ಚೈತ್ರಾ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಸಹ ಸಿಕ್ಕಿದೆ. ಈ ಪತ್ರದಲ್ಲಿ ನನಗೆ ಈ ಜೀವನ ಸಾಕಾಗಿದೆ. I am just leaving ಎಂದು ಬರೆದಿದ್ದಾಳೆ ಎಂದು ತಿಳಿದುಬಂದಿದೆ.