ಬಾಗೇಪಲ್ಲಿ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎನ್.ನಾರಾಯಣಗೌಡ ರವರ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಕರವೇ ತಾಲೂಕು ಸಮಿತಿವಿತಿಯ ಕಾರ್ಯಕರ್ತರು ಹಣ್ಣು ಹಂಪಲು, ಬ್ರೆಡ್ ವಿತರಿಸುವ ಮೂಲಕ ಕರವೇ ರಾಜ್ಯಾಧ್ಯಕ್ಷ ಟಿ.ಎನ್.ನಾರಾಯಣಗೌಡ ರವರ ಹುಟ್ಟು ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಮಾತನಾಡಿ ಕನ್ನಡ ಭಾಷೆ, ನಾಡು ನುಡಿ, ನೆಲ, ಜಲ, ಕನ್ನಡ ಕಲೆ, ಸಂಸ್ಕøತಿ ಇತ್ಯಾಧಿಗಳಿಗೆ ಧಕ್ಕೆ ಉಂಟಾದಾಗ ದಿಟ್ಟತನದಿಂದ ಹೋರಾಟಗಳ ಮೂಲಕಸಂರಕ್ಷಣೆ ಮಾಡುವುದೇ ರಕ್ಷಣಾ ವೇಧಿಕೆ ಮುಖ್ಯ ಉದ್ದೇವಾಗಿದೆ ಎಂದ ಅವರು ಗೌಡರ ಹುಟ್ಟುಹಬ್ವನ್ನು ಪ್ರತಿ ವರ್ಷ ರಕ್ತಧಾನ ಶಿಬಿರ, ಗಿಡ ನೆಡುವ, ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ವಿವಿಧ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸುತ್ತಾ ಬಂದಿರುವುದಾಗಿ ತಿಳಿಸಿದರು.
ಈ ವರ್ಷದ ಹುಟ್ಟುಹಬ್ಬವನ್ನು ಗೌಡರ ಹೆಸರಿನಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಪಟ್ಟಣದ ಕರವೇ ಕಚೇರಿಯಲ್ಲಿ ಕೇಕ್ ಕತ್ತರಿಸಿ, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಹಣ್ಣು ಮತ್ತು ಬ್ರೆಡ್ ವಿತರಿಸುವ ಮೂಲಕ ಗೌಡರ ಹುಟ್ಟು ಹಬ್ಬವನ್ನು ಆಚರಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಶಕ್ತಿವೇಲ್, ಡಾ.ರಾಜಶೇಖರ್, ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ರಿಯಾಜ್‍ವುಲ್ಲಾ, ಉಪಾಧ್ಯಕ್ಷ ಅಲೀಮ್, ಸಂಚಾಲಕ ಶಿವಕುಮಾರ್, ಖಜಾಂಚಿ ನಾರಾಯಣಸ್ವಾಮಿ, ಮುಖಂಡರಾದ ಮಂಜುನಾಥ್, ಸುಜಾತಮ್ಮ, ಶ್ರೀನಿವಾಸ್, ರಾಮಿರೆಡ್ಡಿ, ಗಂಗರಾಜು, ಚಾಂದ್ ಭಾಷಾ, ನರಸಿಂಹಮೂರ್ತಿ, ನವೀನ್, ಶಾಂತಕುಮಾರ್ ಮತ್ತಿತರರು ಇದ್ದರು.