ಬಾಗೇಪಲ್ಲಿ: ನಿಯಮಗಳನ್ನು ಉಲ್ಲಂಘಿಸಿ ಆಕ್ರಮವಾಗಿ ಅತ್ಯಧಿಕ ಭಾರದ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದ 3 ಲಾರಿಗಳನ್ನು ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ನಯಾಜ್ ಬೇಗ್ ನೇತೃತ್ವದಲ್ಲಿ ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಗೇಪಲ್ಲಿ-ಗೂಳೂರು ರಸ್ತೆಯಲ್ಲಿ ಪ್ರತಿನಿತ್ಯ ಹತ್ತಾರು ಲಾರಿಗಳಲ್ಲಿ ಅತ್ಯಧಿಕ ಭಾರದ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದು ರಸ್ತೆಗಳು ಹಾಳಾಗಲು ಕಾರಣವಾಗಿತ್ತು. ಲಾರಿಗಳಲ್ಲಿ ಅಧಿಕ ಭಾರದ ಗ್ರಾನೈಟ್ ಸಾಗಿಸಲಾಗುತ್ತಿದೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ರವರಿಗೆ ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಮೂರು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತ ಲಾರಿಗಳನ್ನು ವಶಕ್ಕೆ ಪಡೆಯುತ್ತಿದ್ದಂತೆ ಹಿಂದೆ ಅಧಿಕ ಭಾರದ ಗ್ರಾನೈಟ್ ದಿಮ್ಮಿಗಳನ್ನು ಹೊತ್ತು ಬರುತ್ತಿದ್ದ ಇನ್ನೂ 3 ಲಾರಿಗಳು ಇನ್ಸ್ ಪೆಕ್ಟರ್ ಕೈಗೆ ಸಿಗದಂತೆ ಪೊಲೀಸ್ ಸಿಬ್ಬಂದಿ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು. ನಾವು 6ಲಾರಿಗಳಲ್ಲಿ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿರುವ ಮಾಹಿತಿಯನ್ನು ನೀಡಿದ್ದರು ಇಲ್ಲಿನ ಪೊಲೀಸ್ ಸಿಬ್ಬಂದಿಯ ಪಿತೂರಿಯಿಂದ 3 ಲಾರಿಗಳು ನಾಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಸಂಚಾರಿ ನಿಯಮಗಳು ಮತ್ತು ಪರ್ಮಿನ್ ನಿಯಮಗಳನ್ನು ಉಲ್ಲಂಘಿಸಿ ಅಧಿಕ ಭಾರದ ಗ್ರಾನೈಟ್ ಕಲ್ಲುಗಳನ್ನು ಸಾಗಿಸಲಾಗುತ್ತಿತ್ತು. 65, 55 ಮತ್ತು 54 ಟನ್ ಭಾರವಿರುವುದು ಪರಿಶೀಲಿಸಿದ ಸಂದರ್ಭದಲ್ಲಿ ಕಂಡು ಬಂದಿದ್ದು. ಆರ್.ಟಿ.ಓ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲನೆಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ತಿಳಿಸಿದರು.