ಕ್ಷೌರಿಕನ ಆಸೆ ಈಡೇರಿಸಿದ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ

ಬಾಗೇಪಲ್ಲಿ: ಶಾಸಕರಿಗೆ ಕ್ಷೌರ ಮಾಡಬೇಕು ಎನ್ನುವ ಒರ್ವ ಸಾಮಾನ್ಯ ಕ್ಷೌರಿಕನ ಹಲವು ವರ್ಷಗಳ ಬಯಕೆಗೆ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಒಪ್ಪಿಗೆ ಸೂಚಿಸಿದ ಪರಿಣಾಮ ಶಾಸಕರ ಬಾಗೇಪಲ್ಲಿ ಗೃಹಕಚೇರಿ ಆವರಣದಲ್ಲಿಯೇ ಸರಳವಾಗಿ ಕ್ಷೌರ ಮಾಡುವ ಮೂಲಕ ತಮ್ಮ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿತ್ತು.

ಪ್ರತಿ ಬುಧವಾರ ಶಾಸಕರ ನಿವಾಸದಲ್ಲಿ ನಡೆಯುವ ಜನತಾ ದರ್ಶನದಲ್ಲಿ ಸಾರ್ವಜನಿಕರು ತಮ್ಮ  ಬೇಡಿಕೆ,ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು ಈಡೇರಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಅದರಂತೆ  ಪಟ್ಟಣದ ಜಿಲ್ಲಾ ಪಂಚಾಯತಿ ತಾಂತ್ರಿಕ ವಿಭಾಗದ ಕಚೇರಿಯ ಮುಂಭಾಗದಲ್ಲಿ ರಾಮಾಂಜಿ ಎನ್ನುವವರು ಒಂದು ಸಣ್ಣ ಅಂಗಡಿಯನ್ನು ಇಟ್ಟುಕೊಂಡು ಕ್ಷೌರಿಕ ವೃತ್ತಿಯಿಂದ ಜೀವನ ನಡೆಸುತ್ತಿರುವ ಓರ್ವ ಸಾಮಾನ್ಯ ವ್ಯಕ್ತಿ. ಶಾಸಕರಿಗೆ  ಜೀವನದಲ್ಲಿ ಒಮ್ಮೆಯಾದರೂ ಕಟಿಂಗ್ ಮತ್ತು ಶೇವಿಂಗ್ ಮಾಡಬೇಕೆಂಬ ಆಸೆ ಹೊಂದಿದ್ದರು.

ಕಳೆದ ಹಲವಾರು ವರ್ಷಗಳಿಂದ ಮನಸ್ಸಿನಲ್ಲಿಯೇ ಇದ್ದ ಬಯಕೆಯನ್ನು ಒಮ್ಮೆ ಜನತಾ ದರ್ಶನದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಬಳಿ ತನ್ನ ಮನದಾಸೆಯನ್ನು ವ್ಯಕ್ತಪಡಿಸಿದ್ದರು ಅದಕ್ಕೆ ಶಾಸಕರು  ಮುಗುಳ್ನಗೆ ನಕ್ಕಿದ್ದರು. ಇದರಿಂದ ಶಾಸಕರಿಗೆ  ಕ್ಷೌರ ಮಾಡಲು ಕಾತುರದಿಂದ  ರಾಮಾಂಜಿ ಎದುರು ನೋಡುತ್ತಿದ್ದರು. ಎನ್.ಎನ್.ಸುಬ್ಬಾರೆಡ್ಡಿ ರವರು ಶಾಸಕ ಮಾತ್ರವಲ್ಲದೆ ಬೆಂಗಳೂರು ಮಹಾನಗರದಲ್ಲಿ ಉದ್ಯಮಿ ಯಾಗಿ ಗುರ್ತಿಸಿಕೊಂಡಿರುವ ವ್ಯಕ್ತಿ ಇದರೊಂದಿಗೆ ಅಧಿಕಾರ  ಹಾಗೂ ಹಣವಂತರು ಇಂತಹವರು ಸಾಮಾನ್ಯವಾಗಿ  ಬೆಂಗಳೂರಿನ ಪ್ರತಿಷ್ಠಿತ ಸ್ಪಾಗಳಲ್ಲಿ ಕಟಿಂಗ್ ಮಾಡಿಸಿಕೊಳ್ಳುತ್ತಾರೆ.

ಅಲ್ಲಿ ಹವಾನಿಯಂತ್ರಿತ ವ್ಯವಸ್ಥೆಗಳು, ಆಧುನಿಕ ಸಲಕರಣೆಗಳು, ನುರಿತ ಕೆಲಸಗಾರರು ಇರುತ್ತಾರೆ.  ತನ್ನಂತಹಾ ಸಾಮಾನ್ಯನಿಂದ  ಕ್ಷೌರ ಮಾಡಿಸಿಕೊಳ್ಳುತ್ತಾರಾ? ಇದು  ಕನಸಿನ ಮಾತೇ  ಆಗಿದೆ  ಎಂಬುದು ಸಹಜ ಆದರೆ  ಸಾಮಾನ್ಯವಾಗಿ ಬೆಂಗಳೂರಿನಿಂದ ಬೆಳಿಗ್ಗೆ 10-11 ಗಂಟೆಗೆ ಬಾಗೇಪಲ್ಲಿಗೆ ಆಗಮಿಸುವ ಶಾಸಕರು ಶನಿವಾರ ರಾತ್ರಿ ಇಲ್ಲಿಯೇ ವಾಸ್ತವ್ಯ ಮಾಡಿ ಬೆಳಗ್ಗೆಯೇ ತಮ್ಮ ಅಭಿಮಾನಿ ಕ್ಷೌರಿಕ ರಾಮಾಂಜಿಗೆ ಪೋನ್ ಮಾಡಿ ಕಟಿಂಗ್ ಮಾಡಲು ಬರುವಂತೆ ತಿಳಿಸಿದ್ದಾರೆ. ಪಟ್ಟಣದ ತಮ್ಮ ಮನೆಯ ಆವರಣದಲ್ಲಿಯೇ ಕುರ್ಚಿ ಹಾಕಿಕೊಂಡು ನಸುನಗುತ್ತಾ ತಮಗೆ ಕಟಿಂಗ್ ಮಾಡುವಂತೆ ಹೇಳಿದ್ದಾರೆ.

ಇದು ಕನಸೋ ನನಸೋ ಎಂಬಂತಾಗಿ ರಾಮಾಂಜಿಗೆ ಕೆಲ ಹೊತ್ತು ತನಗೆ ತಾನೇ ನಂಬಲಾರದ ಸ್ಥಿತಿ ಎದುರಾಗಿತ್ತು. ತಮ್ಮಲ್ಲಿರುವ ಅಲ್ಪಸ್ವಲ್ಪ ಸಲಕರಣೆಗಳ ಸಹಾಯದಿಂದಲೇ ಕ್ಷೌರವನ್ನು ಮಾಡಿಮುಗಿಸುತ್ತಿದ್ದಂತೆ ಕ್ಷೌರಿಕ ರಾಮಾಂಜಿಯ ಮುಖದಲ್ಲಿ ಸಂತಸ ಮೂಡಿದ್ದು ಕಂಡುಬಂದಿತು. ಈ ಸಂಬಂಧ ತನ್ನ ಅನಿಸಿಕೆಯನ್ನು ಹಂಚಿಕೊಂಡ ರಾಮಾಂಜಿ  ಇದು ನನ್ನ ಜೀವನದ ಅದ್ಭುತ ಕ್ಷಣ. ಶಾಸಕರು ಎಂದರೆ ತುಂಬಾ ದೊಡ್ಡವರು, ಬೆಂಗಳೂರಲ್ಲಿ ದೊಡ್ಡ ಸ್ಪಾಗಳಲ್ಲಿ ಕಟಿಂಗ್ ಮಾಡಿಸಿಕೊಳ್ಳುತ್ತಾರೆ ಎಂದುಕೊಂಡಿದ್ದೆ. ಅದೆಲ್ಲಾ ಸುಳ್ಳು ಎಂದು ಇಂದು ನನಗೆ ತಿಳಿಯಿತು. ಚೆನ್ನಾಗಿ ಮಾಡಿದೀಯ ಎಂದರು. ಇದು ನನ್ನ ಜೀವಮಾನದಲ್ಲಿಯೇ ಮರೆಯಲಾರದ ದಿನ ಎಂದರು.

Leave a Reply

Your email address will not be published. Required fields are marked *

Next Post

ಬಾಗೇಪಲ್ಲಿ: ಅಧಿಕ ಭಾರ ಗ್ರಾನೈಟ್ ಸಾಗಿಸುತ್ತಿದ್ದ 3 ಲಾರಿಗಳ ವಶ

Tue Jun 11 , 2024
ಬಾಗೇಪಲ್ಲಿ: ನಿಯಮಗಳನ್ನು ಉಲ್ಲಂಘಿಸಿ  ಆಕ್ರಮವಾಗಿ ಅತ್ಯಧಿಕ ಭಾರದ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದ  3 ಲಾರಿಗಳನ್ನು ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ನಯಾಜ್ ಬೇಗ್ ನೇತೃತ್ವದಲ್ಲಿ ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಗೇಪಲ್ಲಿ-ಗೂಳೂರು ರಸ್ತೆಯಲ್ಲಿ ಪ್ರತಿನಿತ್ಯ ಹತ್ತಾರು ಲಾರಿಗಳಲ್ಲಿ ಅತ್ಯಧಿಕ ಭಾರದ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದು ರಸ್ತೆಗಳು ಹಾಳಾಗಲು ಕಾರಣವಾಗಿತ್ತು.  ಲಾರಿಗಳಲ್ಲಿ ಅಧಿಕ ಭಾರದ ಗ್ರಾನೈಟ್ ಸಾಗಿಸಲಾಗುತ್ತಿದೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ರವರಿಗೆ ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಕಾರ್ಯಾಚರಣೆಯನ್ನು ನಡೆಸಿ […]
over tunage lari
error: Content is protected !!