ಚಂದನವನದಲ್ಲಿ ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಪೂಜಾ ಗಾಂಧಿ ಸಹ ಒಬ್ಬರಾಗಿದ್ದಾರೆ. ಮುಂಗಾರು ಮಳೆ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡ ಈಕೆಯನ್ನು ಮಳೆ ಹುಡುಗಿ ಎಂತಲೇ ಕರೆಯಲು ಶುರು ಮಾಡಿದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ತನ್ನ ಪ್ರಿಯಕರ ವಿಜಯ್ ಘೋರ್ಪಡೆ ಎಂಬ ಉದ್ಯಮಿಯನ್ನು ಕುವೆಂಪು ರವರ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸದ್ಯ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿರುವಂತಹ ನಟಿ ಪೂಜಾ ಗಾಂಧಿ ಸದ್ಯ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಪೂಜಾ ಗಾಂಧಿ ವರ್ಕೌಟ್ ಮಾಡಿದ್ದಂತಹ ವಿಡಿಯೋ ಹಾಗೂ ಪೊಟೋಗಳನ್ನು ಆಕೆ ಎಲ್ಲೂ ಹಂಚಿಕೊಂಡಿಲ್ಲ. ಮದುವೆ ಆದಮೇಲೆ ಪೂಜಾ ಜಿಮ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ದೇಹದ ತೂಕ ಇಳಿಸಿಕೊಳ್ಳುವ ಮತ್ತು ಬಾಡಿ ಟೋನ್ ಮಾಡಿಕೊಳ್ಳುವಂತಹ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಮನೆಯಲ್ಲಿಯೇ ಪೂಜಾ ಗಾಂಧಿ ಯೋಗ ಮಾಡುತ್ತಿದ್ದರು. ಆದರೆ ಜಿಮ್ ನಲ್ಲಿ ಹೆಚ್ಚು ಸಮಯವನ್ನು ಇದೀಗ ಕಳೆಯುತ್ತಿದ್ದಾರೆ. ದೇಹದ ತೂಕ ಇಳಿಸುವ ನಿಟ್ಟಿನಲ್ಲಿ ಆಕೆ ವರ್ಕೌಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಡಂಬಲ್ಸ್, ಕೇಬಲ್ ಪುಲ್ಲಿಂಗ್, ಪ್ಲೇಟ್ಸ್, ವೇಟ್ ಲಿಫ್ಟಿಂಗ್ ಬಾರ್ ಎಲ್ಲ ಕಸರತ್ತುಗಳನ್ನು ಮಾಡುತ್ತಿದ್ದಾರೆ.
ಇನ್ನೂ ನಟಿ ಪೂಜಾ ಗಾಂಧಿ ಮದುವೆಯಾದ ಮೇಲೆ ಆಕೆಯ ದೇಹದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದೇ ಹೇಳಬಹುದು. ಇದೀಗ ಆಕೆ ಸ್ಲಿಮ್ ಆಗಲು ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಆಕೆ ಸಿನೆಮಾಗಳಿಗಾಗಿ ವರ್ಕೌಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೆ ಆಕೆ ಮುಂಗಾರು ಮಳೆ ನಂದಿನಿಯಂತೆ ಮತ್ತೆ ಸ್ಲಿಮ್ ಲುಕ್ಸ್ ನಲ್ಲಿ ಕಾಣಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಇದೀಗ ಆಕೆ ಹಂಚಿಕೊಂಡ ವರ್ಕೌಟ್ ವಿಡಿಯೋಗೆ ಮಾತ್ರ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಖತ್ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಆಕೆ ಸಿನೆಮಾಗಳಲ್ಲಿ ಕಾಣಬೇಕು ಎಂದು ಅಭಿಮಾನಿಗಳು ಆಶಯವಾಗಿದೆ.
ಇನ್ನೂ ಪೂಜಾ ಗಾಂಧಿ ಹಂಚಿಕೊಂಡ ವರ್ಕೌಟ್ ವಿಡಿಯೋಗೆ ಭಾರಿ ವೀಕ್ಷಣೆ ಕಂಡಿದೆ. ಈ ವಿಡಿಯೋಗೆ ಓರ್ವ ಜಿಮ್ ಟ್ರೈನರ್ ಮೇಡಂ ನೀವು ವರ್ಕೌಟ್ ಮಾಡುತ್ತಿರುವ ಫಾರ್ಮಾಟ್ ಸರಿಯಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಕೊನೆಯದಾಗಿ ಆಕೆ 2022 ರಲ್ಲಿ ಸಂಹಾರಿಣಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ನೇರವಾಗಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು.