ಬಾಗೇಪಲ್ಲಿ: ನಿಖಿರವಾಗಿ ಬೆಳೆ ಸಮೀಕ್ಷೆ ಮಾಡುವುದರಿಂದ ಅರ್ಹ ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲು ಸಹಕಾರಿಯಾಗುತ್ತೆ ಇದರಿಂದ ಅಧಿಕಾರಿಗಳು ಕ್ಷೇತ್ರಗಳಿಗೆ ಬೇಟಿ ನೀಡಿ ನಿಖರವಾದ ಬೆಳೆ ಸಮೀಕ್ಷೆ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಂಟಿ ಕೃಷಿ ನಿರ್ದೇಶಕಿ ಜಾವೀದ್ ನಸೀಮಾ ಖಾನಂ ಸೂಚನೆ ನೀಡಿದರು.
ಪಟ್ಟಣದ ತಾ.ಪಂ ಸಭಾಂಗಾಣದಲ್ಲಿ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ನಡೆದ ಬೆಳೆ ಕಟಾವು ಪ್ರಯೋಗಗಳ ಮಾಹಿತಿ ಸಂಗ್ರಹ ಸಭೆಯಲ್ಲಿ ಬೆಳೆ ವಿಮೆಯನ್ನು ರೈತರಿಂದ ಕಟ್ಟಿಸಿಕೊಳ್ಳುವ ವೇಳೆ ನಮೋಧಿಸಿದ ಬೆಳೆಯ ಬದಲಿಗೆ ಬೇರೆ ಬೆಳೆಯನ್ನು ಅದಲು ಬದಲು ಮಾಡಿರುವುದು ಹಾಗೂ ಕೆವೆಡೆ ಅಧಿಕಾರಿಗಳು ಬೆಳೆ ಸಮೀಕ್ಷೆಯನ್ನು ಕಾಟಾಚಾರಕ್ಕೆ ಮಾಡಿ ತಪ್ಪು ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಷ್ಟ ಮತ್ತು ನೈಜ ಮಾಹಿತಿಗಾಗಿ ಬೆಳೆ ನಷ್ಠದ ಮಾಹಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಸಮಿತಿಯನ್ನು ರಚಿಸಿದ್ದು ಅದರಂತೆ ಜಂಟಿ ಕೃಷಿ ನಿದೇರ್ಶಶಕಿ ಜಾವಿದ್ ನಸೀಮ್ ಖಾನಂ ರವರು ಈ ಸಭೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಬೆಳೆ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ಬೆಳೆ ಕಟಾವು ಆಗಿರುತ್ತೆ, ಹಲವು ಕಡೆಗಳಲ್ಲಿ ಬಿತ್ತನೆಯೇ ಆಗಿರುವುದಿಲ್ಲ ಇದರಿಂದ ಅರ್ಹ ರೈತರು ಬೆಳೆ ಸಮೀಕ್ಷೆಯಿಂದ ಹೊರಗೆ ಉಳಿಯಬೇಕಾಗುವ ಸಾಧ್ಯತೆ ಹೆಚ್ಚಾಗಿರುತ್ತೆ ಇದರಿಂದ ಕ್ಷೇತ್ರಕ್ಕೆ ಬೇಟಿ ನೀಡುವ ಅಧಿಕಾರಿಗಳು ವೈಜ್ಞಾನಿಕವಾಗಿ ಬೆಳೆ ಸಮೀಕ್ಷೆ ಮಾಡಿ ಅರ್ಹ ರೈತರಿಗೆ ವಿಮೆ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬೆಳೆ ವಿಮೆ ಮಾಡಿಸಿದ್ದನ್ನು ಅಧಿಕಾರಿಗಳು ಮತ್ತು ಬೆಳೆ ವಿಮೆ ಕಂಪನಿಗಳು ಪ್ರಾಮಾಣಿಕವಾಗಿ ದಾಖಲಿಸದ ಪರಿಣಾ ರೈತರಿಗೆ ಸಕಾಲದಲ್ಲಿ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ಉಗ್ರಾಣಂಪಲ್ಲಿ ನರಸಿಂಹರೆಡ್ಡಿ ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಪ್ರಶಾಂತ್ ಕೆ.ಪಾಟಿಲ್, ತಾ.ಪಂ ಇಒ ರಮೇಶ್, ಸಹಾಯಕ ಕೃಷಿ ನಿರ್ದೇಶಕಿ ಲಕ್ಷ್ಮೀ, ಗುಡಿಬಂಡೆ ಕೃಷಿ ನಿರ್ದೇಶಕ ಅಮರನಾರಾಯಣರೆಡ್ಡಿ ಮತ್ತಿತರರು ಇದ್ದರು.