HomeStateISRO Recruitment 2024: ಬೆಂಗಳೂರಿನ ಇಸ್ರೋದಲ್ಲಿದೆ 103 ಹುದ್ದೆಗಳು, ಅ.9 ಕೊನೆಯ ದಿನಾಂಕ….!

ISRO Recruitment 2024: ಬೆಂಗಳೂರಿನ ಇಸ್ರೋದಲ್ಲಿದೆ 103 ಹುದ್ದೆಗಳು, ಅ.9 ಕೊನೆಯ ದಿನಾಂಕ….!

ಇಸ್ರೋದಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.  ಬೆಂಗಳೂರಿನ ಇಸ್ರೋದಲ್ಲಿ (ISRO Recruitment 2024) ನೇಮಕಾತಿ ಯ ಅಧಿಸೂಚನೆಯನ್ನು ಹೊರಡಿಸಿದ್ದು, ಒಟ್ಟು 103 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಧಿಸೂಚನೆಯಲ್ಲಿ ಏನೆಲ್ಲಾ ಅರ್ಹತೆಗಳನ್ನು ಪೂರೈಸಬೇಕು, ಹುದ್ದೆಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವೇತನ ಸೇರಿದಂತೆ ಮತಷ್ಟು ಉಪಯುಕ್ತ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಅಂದಹಾಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.9 ಕೊನೆಯ ದಿನಾಂಕವಾಗಿರುತ್ತದೆ.

ISRO Recruitment 2024 103 post 2

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation – ISRO) ಯಲ್ಲಿ 103 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇಸ್ರೋದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೆ ಅನನ್ಯ ಅವಕಾಶವನ್ನು ಒದಗಿಸುತ್ತದೆ. ಅಧಿಸೂಚನೆಯಲ್ಲಿ (ISRO Recruitment 2024) ತಿಳಿಸಿರುವಂತೆ ವೈದ್ಯಕೀಯ ಅಧಿಕಾರಿ-ಎಸ್‌ಡಿ, ವೈದ್ಯಕೀಯ ಅಧಿಕಾರಿ-ಎಸ್‌ಸಿ, ಸೈಂಟಿಸ್ಟ್ ಇಂಜಿನಿಯರ್-ಎಸ್‌ಸಿ, ತಾಂತ್ರಿಕ ಸಹಾಯಕ, ವಿಜ್ಞಾನಿ ಸಹಾಯಕ, ತಂತ್ರಜ್ಞ-ಬಿ, ಡ್ರಾಫ್ಟ್ಸ್​​​​ಮನ್-ಬಿ ಮತ್ತು ಸಹಾಯಕ (ಅಧಿಕೃತ ಭಾಷೆ) ಹುದ್ದೆಗಳಿವೆ. ಆಸಕ್ತ ಅಭ್ಯರ್ಥಿಗಳು (ISRO Recruitment 2024)ಇಸ್ರೋದ ಅಧಿಕೃತ ವೆಬ್‌ಸೈಟ್ isro.gov.in ಗೆ ಭೇಟಿ ನೀಡಿ ಮೂಲಕ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9 ಅಕ್ಟೋಬರ್ ದಿನಾಂಕವಾಗಿದೆ.

ISRO Recruitment 2024 103 post 0

ಇನ್ನೂ ಅಧಿಸೂಚನೆಯಲ್ಲಿ ತಿಳಿಸಿದ ಹುದ್ದೆಗಳಿಗೆ (ISRO Recruitment 2024) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ಹಾಗೂ ಗರಿಷ್ಟ 35 ವರ್ಷ ವಯಸ್ಸಾಗಿರಬೇಕು (ವಿಜ್ಞಾನಿ ಇಂಜಿನಿಯರ್ (SC): 18 ರಿಂದ 30 ವರ್ಷಗಳು, ಸಹಾಯಕ (ಅಧಿಕೃತ ಭಾಷೆ): 18 ರಿಂದ 28 ವರ್ಷಗಳು). ಜೊತೆಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆಯಿದೆ. (ISRO Recruitment 2024) ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಸಂಬಂಧಪಟ್ಟಂತೆ 21,700-2,08,700 ರೂಪಾಯಿಗಳವರೆಗೆ ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ISRO ವೆಬ್‌ಸೈಟ್‌ಗೆ ಭೇಟಿ https://www.isro.gov.in/Careers.html ನೀಡಿ ಮಾಹಿತಿ ಪಡೆಯಬಹುದಾಗಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular