Instagram Update – ಸೋಷಿಯಲ್ ಮಿಡಿಯಾದ ರಂಗದಲ್ಲಿ ದೈತ್ಯ ಸಂಸ್ಥೆ ಎಂದೇ ಕರೆಯಲಾಗುವ ಇನ್ಸ್ಟಾಗ್ರಾಂ (Instagram Update) ಆಪ್ ಬಳಸದೇ ಇರುವವರು ತುಂಬಾನೆ ಕಡಿಮೆ ಎಂದು ಹೇಳಬಹುದು. ಈ ಸೋಷಿಯಲ್ ಮಿಡಿಯಾ ಫ್ಲಾಟ್ ಫಾರಂ ಮೂಲಕವೇ ಹಣ ಸಂಪಾದನೆ ಸಹ ಮಾಡುತ್ತಿರುತ್ತಾರೆ. ಇನ್ಸ್ಟಾಗ್ರಾಂ ಸಹ ತನ್ನ ಬಳಕೆದಾರರಿಗಾಗಿ ಆಗಾಗ ಕೆಲವೊಂದು ಫೀಚರ್ ಗಳನ್ನು ನೀಡುತ್ತಾ ಬರುತ್ತಿದೆ. ಇದೀಗ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ (Instagram Update) ಒಂದನ್ನು ನೀಡಿದೆ. ಪೊಟೋಗಳನ್ನು ಅಪ್ಲೋಡ್ ಮಾಡುವಂತ ಯೂಸರ್ ಗಳಿಗೆ ಈ ಅಪ್ಡೇಟ್ ತುಂಬಾನೆ ಅನುಕೂಲ ಎನ್ನಬಹುದು.
ಇನ್ಸ್ಟಾಗ್ರಾಂನಲ್ಲಿ (Instagram Update) ಇಲ್ಲಿಯವರೆಗೂ ಕೇವಲ 10 ಪೊಟೋಗಳು ಅಥವಾ ವಿಡಿಯೋಗಳನ್ನು ಮಾತ್ರ ಅಪ್ಲೋಡ್ ಮಾಡಬಹುದಾಗಿತ್ತು. ಇದೀಗ ಈ ಸಂಖ್ಯೆಯನ್ನು ಇನ್ಸ್ಟಾ ಏರಿಕೆ ಮಾಡಿದೆ. ಹೊಸ ಅಪ್ಡೇಟ್ ನಂತೆ ಇನ್ಸ್ಟಾ ಯೂಸರ್ ಗಳು ತಮ್ಮ ಖಾತೆಯಲ್ಲಿ ಸಿಂಗಲ್ ಪೋಸ್ಟ್ ನಲ್ಲಿ 20 ಪೊಟೋಗಳನ್ನು ಅಥವಾ ವಿಡಿಯೋಗಳನ್ನು ಹಂಚಿಕೊಳ್ಳಬಹುದಾಗಿದೆ. ಒಂದೇ ಪೋಸ್ಟ್ ನಲ್ಲಿ ಹೆಚ್ಚು ಪೊಟೊಗಳನ್ನು (Instagram Update) ಹಂಚಿಕೊಳ್ಳಬೇಕು ಎನ್ನುವವರಿಗೆ ಇದು ತುಂಬಾನೆ ಉಪಯುಕ್ತ ಎನ್ನಬಹುದಾಗಿದೆ.
ಇನ್ನೂ ಇನ್ಸ್ಟಾಗ್ರಾಂ (Instagram Update) ತಂದುಕೊಟ್ಟ ಈ ಹೊಸ ಅಪ್ಡೇಟ್ ಸಹಾಯದಿಂದ ಕ್ರಿಯೇಟಿವಿಟಿ ರೀಚ್ ಕಂಟೆಂಟ್ ಶೇರ್ ಮಾಡೋಕೆ ಉತ್ತಮ ಅವಕಾಶವಾಗಿದೆ ಎನ್ನಬಹುದಾಗಿದೆ. ಜೊತೆಗೆ ಯೂಸರ್ ಗಳಿಗೆ ಬೇಸರ ಸಹ ಆಗಬಹುದು. ಒಂದೇ ಪೋಸ್ಟ್ ನಲ್ಲಿ (Instagram Update) ತುಂಬಾ ಪೊಟೋಗಳನ್ನು ನೋಡಲು ಬೇಸರ ಆಗಬಹುದು ಎಂಬ ಅಭಿಪ್ರಾಯಗಳೂ ಸಹ ವ್ಯಕ್ತವಾಗುತ್ತಿದೆ. ಪೊಟೋಗಳು ಹೆಚ್ಚಾಗಿ ಅಪ್ಲೋಡ್ ಮಾಡುವುದರಿಂದ ಫಾಲೋವರ್ಸ್‌ಗಳಿಗೆ ಕಿರಿಕಿರಿಯಾಗಬಹುದು ಎಂದು ಹೇಳಬಹುದಾಗಿದೆ. ಈ ಹೊಸ (Instagram Update) ಫೀಚರ್ ಯೂಸರ್ ಗಳನ್ನು ಯಾವ ರೀತಿಯಲ್ಲಿ ಆಕರ್ಷಣೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.