HomeStateCrime - ಆಂಧ್ರ ಬಸ್ ಪಲ್ಟಿ; 13ಕ್ಕೂ ಅಧಿಕ‌ ಪ್ರಯಾಣಿಕರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

Crime – ಆಂಧ್ರ ಬಸ್ ಪಲ್ಟಿ; 13ಕ್ಕೂ ಅಧಿಕ‌ ಪ್ರಯಾಣಿಕರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರು – ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರ ಚೆಂಡೂರು ಕ್ರಾಸ್ ಬಳಿ  ಚಾಲಕನ ನಿಯಂತ್ರಣ ತಪ್ಪಿ ಆಂದ್ರಪ್ರದೇಶದ ಬಸ್ ಪಲ್ಟಿಯಾದ ಪರಿಣಾಮ 13 ಅಧಿಕ‌ ಪ್ರಯಾಣಿಕರು ಗಾಯಗೊಂಡು ಇಬ್ಬರು ಗಂಭೀರವಾಗಿರುವ ಘಟನೆ ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಡೆದಿದೆ.
ಬೆಂಗಳೂರಿಂದ ಪುಟ್ಟಪರ್ತಿ ಕಡೆಗೆ ಪ್ಎಯಾಣಿಸುತ್ತಿದ್ದ ಆಂದ್ರಪ್ರದೇಶದ ಬಸ್ ಗುಡಿಬಂಡೆ ತಾಲ್ಲೂಕಿನ ಚೆಂಡೂರ್ ಕ್ರಾಸ್ ಬಳಿ ಪಲ್ಟಿಯಾಗಿದೆ. ಬಸ್ ನಲ್ಲಿ ಸುಮಾರು 30 ಜನ ಪ್ರಯಾಣಿಸುತ್ತಿದ್ದು ಇದರಲ್ಲಿ  ಚಾಲಕ ಮತ್ತು ನಿರ್ವಾಹಕ ಸೇರಿದಂತೆ 13 ಜನರು ಗಾಯಕೊಂಡಿದ್ದಾರೆ. ಇಬ್ಬರು ಸ್ಥಿತಿ ಗಂಭೀರವಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಆಸತ್ರೆ  ಗೆ ರವಾನಿಸಲಾಗಿದೆ. ಉಳಿದವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಗುಡಿಬಂಡೆ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt