ಸದ್ಯ ಪ್ರತಿಯೊಬ್ಬರ ಜೀವನದಲ್ಲಿ ಆಧಾರ್ ಕಾರ್ಡ್ ಬಹುಮುಖ್ಯ ಪಾತ್ರವನ್ನು ವಹಿಸುತ್ತಿದ್ದೆ. ಆಧಾರ್ ಕಾರ್ಡ್ ಇಲ್ಲದೇ ಸರ್ಕಾರ ಯೋಜನೆಗಳು, ಸೌಲಭ್ಯಗಳನ್ನು ಪಡೆಯಲು ಆಗುವುದಿಲ್ಲ. ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಂತೂ ತುಂಬಾನೆ ಪ್ರಾಮುಖ್ಯತೆ ಹೊಂದಿದೆ ಎಂದೇ ಹೇಳಬಹುದಾಗಿದೆ. ಇದೀಗ ಈ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬೇಕಿದೆ. ಅಂದರೇ ಕಳೆದ 10 ವರ್ಷಗಳಲ್ಲಿ ಎಲ್ಲೂ ನಿಮ್ಮ ಆಧಾರ್ ಕಾರ್ಡ್ ನವೀಕರಿಸದೇ ಇರುವಂತವರು ಅಪ್ಡೇಟ್ ಮಾಡಿಕೊಳ್ಳಬೇಕಿದೆ. ಮಾಡಿಕೊಳ್ಳದೇ ಇದ್ದರೇ ಏನಾಗುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ..
ಸಾಮಾನ್ಯವಾಗಿ ಕೆಲವರು ಸುಳ್ಳು ಸುದ್ದಿಗಳನ್ನು ಬೇಗನೇ ನಂಬಿ ಬಿಡುತ್ತಾರೆ. ಕೆಲವು ಸುಳ್ಳು ಸುದ್ದಿಗಳನ್ನು ನಂಬಿ ಜನರು ಪರಾಡುತ್ತಿರುತ್ತಾರೆ. ಅದರಲ್ಲೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಜನರು ಏನೆಲ್ಲಾ ಸಂಕಷ್ಟಗಳನ್ನು ಪಡುತ್ತಾರೆ ಎಂಬುದನ್ನು ನೋಡಿದ್ದೇವೆ. ಆಧಾರ್ ಕಾರ್ಡ್ ಬಗ್ಗೆ ಸಹ ಅಂತಹ ಅನೇಕ ಸುಳ್ಳು ಸುದ್ದಿಗಳು ಹರಿದಾಡಿತ್ತು. ಇದೀಗ ಕಳೆದ 10 ವರ್ಷಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ನವೀಕರಣ ಮಾಡದಿದ್ದರೇ, ಜೂನ್ 14, 2024 ರ ಬಳಿಕ ಅದು ಅಮಾನ್ಯವಾಗುತ್ತದೆ ಎಂಬ ಸುದ್ದಿಗಳು ತುಂಬಾನೆ ವೈರಲ್ ಆಗುತ್ತಿದೆ. ಅನೇಕರು ಈ ಸುದ್ದಿಯನ್ನು ನಂಬಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಆಧಾರ್ ಕೇಂದ್ರಗಳತ್ತ ಜಮಾಯಿಸುತ್ತಿದ್ದಾರೆ. ಆದರೆ ಈ ಸುದ್ದಿ ಸುಳ್ಳು ಸುದ್ದಿಯಾಗಿದೆ.
ಆದರೆ ಇಲ್ಲೊಂದು ನಿಜಾಂಶವಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತೆ ಹಲವಾರು ನವೀಕರಣಗಳನ್ನು ಈಗಾಗಲೇ ಒದಗಿಸಿದೆ. UIDIA ಪ್ರಕಾರ ನೀವು ಕಳೆದ 10 ವರ್ಷಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ನವೀಕರಿಸದೇ ಇದ್ದರೇ UIDIA ಅಧಿಕೃತ ವೆಬ್ ಸೈಟ್ ಮೂಲಕ ಜೂನ್ 14 ರವರೆಗೆ ಉಚಿತವಾಗಿ ನವೀಕರಸಿಬಹುದಾಗಿದೆ. ಆನ್ ಲೈನ್ ಅಥವಾ ನೊಂದಣಿ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದಾಗಿದೆ. ಸದ್ಯ ಈ ಸೇವೆ ಉಚಿತವಾಗಿದೆ ಅಂದರೇ ಆನ್ ಲೈನ್ ಮೂಲಕ ತಾವು ಉಚಿತವಾಗಿ ನವೀಕರಿಸಿಕೊಳ್ಳಬಹುದಾಗಿದೆ. ಆದರೆ ಆಧಾರ್ ಕೇಂದ್ರದಲ್ಲಿ ನಿಗದಿತ ಶುಲ್ಕ ಪಾವತಿಸಬೇಕಿದೆ. ಯಾವುದೇ ಕಾರಣಕ್ಕೂ ಜೂನ್ 14ರ ಬಳಿಕ ಯಾವುದೇ ಕಾರಣಕ್ಕೂ ನಿಮ್ಮ ಆಧಾರ್ ಕಾರ್ಡ್ ಅಮಾನ್ಯವಾಗುವುದಿಲ್ಲ ಎಂದು UIDIA ಸ್ಪಷ್ಟಪಡಿಸಿದೆ.
ಆದರೆ ಇಲ್ಲೋಂದು ಬದಲಾವಣೆ ಏನು ಅಂದರೇ, ಜೂನ್ 14ರ ಬಳಿಕ ಉಚಿತ ಅಪ್ಡೇಟ್ ಸೌಲಭ್ಯವಿರುವುದಿಲ್ಲ. ತಾವು ಆನ್ ಲೈನ್ ಮೂಲಕ ಅಪ್ಡೇಟ್ ಮಾಡಿಕೊಳ್ಳಲು ನಿಗಧಿತ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನಲಾಗಿದೆ. ಈ ದಿನಾಂಕಕ್ಕೂ ಮುಂಚೆ ಮಾ.14 ರವರೆಗೆ ಈ ಅವಕಾಶ ನೀಡಿತ್ತು. ಬಳಿಕ ಉಚಿತ ಆನ್ ಲೈನ್ ಡಾಕ್ಯುಮೆಂಟ್ ಅಪ್ಡೇಟ್ ಗಾಗಿ ಜೂ.14 ರವರೆಗೆ ವಿಸ್ತರಣೆ ಮಾಡಿತ್ತು. ಆದ್ದರಿಂದ ಯಾರೂ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ನಂಬಬೇಡಿ. ಅಧಿಕೃತವಾಗಿ ಸರ್ಕಾರದಿಂದ ಬಂದಂತಹ ಮಾಹಿತಿಯನ್ನು ಮಾತ್ರ ಜನರು ನಂಬುವುದು ಸೂಕ್ತವಾಗಿದೆ.