Social Media: ಸೋಷಿಯಲ್ ಮಿಡಿಯಾ ಬಳಕೆ ಮಾಡುತ್ತಿದ್ದ ಪತ್ನಿಯನ್ನೆ ಕೊಲೆ ಮಾಡಿದ ಪತಿ…!

ಇಂದಿನ ಸ್ಮಾರ್ಟ್ ಪೋನ್ ಯುಗದಲ್ಲಿ ಸೋಷಿಯಲ್ ಮಿಡಿಯಾದ (Social Media) ಬಳಸದೇ ಇರುವವರು ಕಡಿಮೆ ಎಂದು ಹೇಳಬಹುದು. ಈ ಸೋಷಿಯಲ್ ಮಿಡಿಯಾ ಅನೇಕರಿಗೆ ಉದ್ಯೋಗವಾಗಿದ್ದರೇ, ಮತ್ತೆ ಕೆಲವರಿಗೆ ಗೀಳಾಗಿ ಪರಿಣಮಿಸಿದೆ. ಕೆಲವೊಂದು ಪ್ರಕರಣಗಳಲ್ಲಿ ಸೋಷಿಯಲ್ ಮಿಡಿಯಾ (Social Media) ಬಳಕೆಯಿಂದ ಗಲಾಟೆ, ಕೊಲೆಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನ ಪತ್ನಿ ಸೋಷಿಯಲ್ ಮಿಡಿಯಾ (Social Media) ಬಳಸುತ್ತಿದ್ದಾಳೆ ಎಂದು ಕೋಪಕೊಂಡ ಪತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

husband killed wife for using social media 1

ಈ ಘಟನೆ ದೆಹಲಿಯ ರಾಜಾಪುರ ಪ್ರದೇಶದ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಆರೋಪಿಯನ್ನು 33 ವರ್ಷದ ರಾಮ್ ಕುಮಾರ್ ಎಂದು ಗುರ್ತಿಸಲಾಗಿದೆ. ತನ್ನ ಪತ್ನಿ ಸೋಷಿಯಲ್ ಮಿಡಿಯಾವನ್ನು (Social Media) ಬಳಸಿದ್ದಕ್ಕಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಸೋಷಿಯಲ್ ಮಿಡಿಯಾದಲ್ಲೇ ಮೃತ ಮಹಿಳೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಳಂತೆ. ಈ ಕಾರಣದಿಂದ ದಂಪತಿಯ ನಡುವೆ ಗಲಾಟೆಯಾಗಿತ್ತಂತೆ. ಜಗಳ ತಾರಕ್ಕೇರಿದ್ದು, (Social Media) ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಇನ್ನೂ ಈ ಕುರಿತು ರೋಹಿಣಿಯ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಪಂಕಜ್ ಕುಮಾರ್‍ ಈ ಕುರಿತು ಮಾಹಿತಿ ನೀಡಿದ್ದಾರೆ. ದೆಹಲಿಯ ಪ್ರಶಾಂತ್ ವಿಹಾರದಲ್ಲಿ ಕೊಲೆ ಪ್ರಕರಣ ವರದಿಯಾಗಿದೆ. (Social Media) ರಜಾಪುರದ ನಿವಾಸಿ 33 ವರ್ಷದ ರಾಮ್ ಕುಮಾರ್‍ ಎಂಬಾತ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ (Social Media) ಮಾಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

Scroll to Top