ನಮ್ಮ ದೇಶದಲ್ಲಿ ಇಂದಿಗೂ ಅನೇಕ ಗ್ರಾಮಗಳಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುವಂತಹ ಪರಿಸ್ಥಿತಿಗಳು ತುಂಬಾನೆ ಇದೆ. ಕೆಲವೊಂದು ಗ್ರಾಮಗಳಲ್ಲಿ ಅಭಿವೃದ್ದಿಯಾದರೂ ಅದೆಷ್ಟೊ ಗ್ರಾಮಗಳು ಮಾತ್ರ ಇನ್ನೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಹೇಳಬಹುದಾಗಿದೆ. ಇದೀಗ ಅಂತಹುದೇ (Heart touching video) ಗ್ರಾಮವೊಂದರ ಬಗ್ಗೆ ಹೇಳಲಾಗಿದೆ. ಅಗತ್ಯ ಸೇವೆಗಳು ಅದರಲ್ಲೂ ವೈದ್ಯಕೀಯ ಸೇವೆ ಪಡೆಯಲು ಹರಸಾಹಸ ಪಟ್ಟು ಕಲ್ಲು ಮುಳ್ಳುಗಳ ಹಾದಿ ಯಲ್ಲಿ ಹೋಗಬೇಕಾದ ದುಸ್ಥಿತಿಯಿದೆ. ಇದಕ್ಕೆ ವೈರಲ್ ಆಗುತ್ತಿರುವ ಈ ವಿಡಿಯೋ ಒಳ್ಳೆಯ ಉದಾಹರಣೆ ಎಂದೇ ಹೇಳಬಹುದಾಗಿದೆ.
ಅಂದಾಹಗೆ ಈ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಅಡ್ಡತೀಗಾಲ ಮಂಡಲದ ಪಿಂಜಾರ ಕೊಂಡ ಎಂಬ ತಾಂಡದಲ್ಲಿ (Heart touching video) ನಡೆದಿದೆ. ಈ ತಾಂಡದಲ್ಲಿ ಜನರು ವೈದ್ಯಕೀಯ ಸೇವೆ ಸೇರಿದಂತೆ ಇತರೆ ಸೇವೆಗಳನ್ನು ಪಡೆದುಕೊಳ್ಳಲು ತುಂಬಿ ಹರಿಯುವಂತಹ ಹೊಳೆಯನ್ನು ದಾಟಿ ಹೋಗಬೇಕಿದೆ. ಈ ರೀತಿಯ ಹಲವು ಹಳ್ಳಿಗಳು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿವೆ. ಸರಿಯಾದ ರಸ್ತೆ ವ್ಯವಸ್ಥೆಯಾಗಲಿ, ಹರಿಯುವಂತಹ ನದಿಗಳಿಗೆ ಸೇತುವೆಯಾಗಲಿ ಇರಲ್ಲ. ಅದರಲ್ಲೂ ಮಳೆಗಾಲದಲ್ಲಿ ಅವರ ಸಮಸ್ಯೆ ಮತಷ್ಟು ಹೆಚ್ಚಾಗುತ್ತದೆ. ಮಳೆಗಾದಲ್ಲಿ ನೀರು ಉಕ್ಕಿ ಹರಿಯುತ್ತಿದ್ದರೂ ಆ ಹೊಳೆಯ ನೀರಿನ ಮೂಲಕವೇ ಸಂಚರಿಸಬೇಕಾಗದ ಪರಿಸ್ಥಿತಿ ಉದ್ಬವಿಸುತ್ತದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/PavanJourno/status/1839590776269078838
ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಕಥೆಗೆ ಬಂದರೇ, ಆಂಧ್ರದ ಪಿಂಜಾರಕೊಂಡ ಗ್ರಾಮದ ಬುಡಕಟ್ಟು ಮಹಿಳೆ ವೆಲುಗಳ ಜ್ಯೋತಿಕಾ ರೆಡ್ಡಿ ಎಂಬಾಕೆ ಕಳೆದ ಮೂರು ದಿನಗಳ ಹಿಂದೆಯಷ್ಟೆ ಕಾಕಿನಾಡ ಜಿಲ್ಲೆಯ ಯಲೇಶ್ವರಂ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಸದ್ಯ ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. (Heart touching video)ಆಸ್ಪತ್ರೆಯಿಂದಲೂ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆ ಭಾಗದ ಹಳ್ಳಕೊಳ್ಳಗಳು ತುಂಬಿ ಉಕ್ಕಿ ಹರಿಯುತ್ತಿವೆ. ಇದೇ ಮಾರ್ಗದಲ್ಲೇ ಅವರು ಸಾಗಬೇಕಿತ್ತು. ಉಕ್ಕಿ ಹರಿಯುತ್ತಿರುವ ನೀರಿನಲ್ಲೇ ಬಾಣಂತಿಯ ಕುಟುಂಬಸ್ಥರು ಸಾಗಿದ್ದಾರೆ. ನೀರಿನಲ್ಲಿ ಬಾಣಂತಿ ಮಹಿಳೆಯನ್ನು ಹೊತ್ತು ಮನೆಗೆ ಹೋಗಿದ್ದಾರೆ.
ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಾಣಂತಿಯನ್ನು ಓರ್ವ ವ್ಯಕ್ತಿ ತನ್ನ ಹೆಗಲ ಮೇಲೆ ಹೊತ್ತು ದಾಟುತ್ತಿದ್ದರೇ, ಮತ್ತೋರ್ವ (Heart touching video) ವ್ಯಕ್ತಿ ಮಗುವನ್ನು ಹೊತ್ತು ಉಕ್ಕಿ ಹರಿಯುತ್ತಿರುವ ಹೊಳೆಯನ್ನು ದಾಟುತ್ತಿದ್ದಾರೆ. ಈ ದೃಶ್ಯ ನೋಡಿದರೇ ಒಮ್ಮೆ ಎದೆ ಝಲ್ ಎನ್ನಿಸುತ್ತದೆ ಎಂದು ಹೇಳಬಹುದಾಗಿದೆ.