Health Camp – ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಧರ್ಮಿಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಭಿರಗಳಂತಹ ಕಾರ್ಯಕ್ರಮಗಳ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಮಾಜದಲ್ಲಿ ಶಾಂತಿ ಸೌಹರ್ದತೆಯ ಸಂಕೇತವಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಬಾಗೇಪಲ್ಲಿ ಪಟ್ಟಣದ ನುರಾನಿ ಮಸೀದಿ ಕಮಿಟಿ, ವೈದೇಹಿ ಆಸ್ಪತ್ರೆ, ಆರೋಗ್ಯ ಇಲಾಖೆ, ಆಯುಶ್ಮಾನ್ ಆರೋಗ್ಯ ಕೇಂದ್ರ ಬಾಗೇಪಲ್ಲಿ ಇವರ ಸಂಯುಕ್ತಾಶ್ರಮದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೆಲವು ತಿಂಗಳ ಹಿಂದೆ ಮಸೀದಿಗೆ ಸರ್ವ ಧರ್ಮೀಯರಿಗೂ ಮುಕ್ತ ಪ್ರವೇಶ ನೀಡಿ ಒಳ್ಳೆಯ ಸಂದೇಶವನ್ನು ನೀಡುವ ಮೂಲಕ ಸಮಾಜದಲ್ಲಿ ಸೌಹಾರ್ದಯುತವಾದ ವಾತಾವರಣ ನಿರ್ಮಾಣ ಮಾಡುವಂತಹ ಕೆಲಸಕ್ಕೆ ಮುಂದಾಗಿದ್ದರು. ಇಂದು ಅಲ್ಪಸಂಖ್ಯಾತರು ತಮ್ಮ ಧಾರ್ಮಿಕ ಕೇಂದ್ರದಲ್ಲಿ ಬಡವರ ಆರೋಗ್ಯ ದೃಷ್ಠಿಯಿಂದ ಆರೋಗ್ಯ ತಪಾಸಣೆ ಶಿಭಿರವನ್ನು ಆಯೋಜಿಸಿರುವ ಮೂಲಕ ಸಮಾಜಮುಖಿಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರು ತಮ್ಮ ಮಕ್ಕಳ ಶೈಕ್ಞಣಿಕ ಅಭಿವೃದ್ದಿಯ ದೃಷ್ಟಿಯಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾದ ಅಗತ್ಯವಿದೆ ಎಂದ ಅವರು ಇಂದು ಆಯೋಜಿಸಿರುವ ಆರೋಗ್ಯ ತಪಾಸಣೆ ಶಿಬಿರ ಬಡವರಿಗೆ ಉಪಯೋಗವಾಗುತ್ತದೆ. ಇಂತಹ ಪುಣ್ಯದ ಕಾರ್ಯಗಳನ್ನು ಮುಂದುವರೆಸುವಂತೆ ನೂರಾನಿ ಮಸೀದಿ ಕಮಿಟಿ ಪದಾಧಿಕಾರಿಗಳಿಗೆ ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ಮಹಮದ್ ಎಸ್ ನೂರುಲ್ಲಾ ಮಾತನಾಡಿ, ಸಮಾಜದಲ್ಲಿ ನೆಲೆಸಿದ್ದ ಶಾಂತಿಯ ವಾತಾವರಣ ಇತ್ತೀಚಿನ ವರ್ಷಗಳಲ್ಲಿ ಕದಡುತ್ತಿದ್ದು ಅದಕ್ಕೆ ಮುಕ್ತಿ ಕಾಣಿಸಬೇಕು ಎಂಬ ಕಾರಣದಿಂದ ಮಸೀದಿ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡು ಸರ್ವಧರ್ಮೀಯರಿಗೆ ಮುಕ್ತ ಅವಕಾಶವನ್ನು ಕಲ್ಪಿಸಿದ್ದಿವಿ. ಎಲ್ಲಾ ಜಾತಿ-ಧರ್ಮದವರು ಮಸೀದಿಗೆ ಬೇಟಿ ನೀಡಿದ್ದು ಐತಿಹಾಸಿಕ ಎಂದ ಅವರು ಎಲ್ಲಾ ಧಾರ್ಮಿಯ ಬಡವರ ಹಿತದೃಷ್ಠಿಯಿಂದ ಇಂತಹ ಆರೋಗ್ಯ ತಪಾಸಣೆ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಮುಂದುವರೆಸುವುದಾಗಿ ತಿಳಿಸಿದರು.

ಆರೋಗ್ಯ ತಪಾಸಣೆ ಶಿಬಿರದಲ್ಲಿ 500 ಕ್ಕೂ ಹೆಚ್ಚಿನ ರೋಗಿಗಳು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ನರೇಂದ್ರ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಿಜಾಮುದ್ದೀನ್ ಬಾಬು, ಪೊಲೀಸ್ ಇನ್ಸ್‍ಪೆಕ್ಟರ್ ಪ್ರಶಾಂತ್ ವರ್ಣಿ, ಮುಖಂಡರಾದ ಜೆಸಿಬಿ ಮಂಜುನಾಥರೆಡ್ಡಿ, ನರಸಿಂಹಪ್ಪ, ಜಭೀವುಲ್ಲಾ, ನೂರಾನು ಮಸೀದಿ ಸಮಿತಿ ಅಧ್ಯಕ್ಷ ಶಬ್ಬೀರ್ ಅಹಮದ್, ರಿಜ್ವಾನ್, ಡಾ.ಮುಭಾರಕ್, ಧರ್ಮಗುರು ಮೌಲಾನ ಇದ್ದಿರಿಸ್, ಹೈದರ್ ವಲಿ, ಇಮಾಂಸಾಬ್, ಮೆಹಬೂಬ್ ಬಾಷ, ಮುಜಬುರ್ ರೆಹಮಾನ್, ಮುಶ್ತಾಕ್, ಜಭಿವುಲ್ಲಾ, ಮುಶ್ತಾಕ್ ಅಹಮದ್, ಫಕೃದ್ಧೀನ್, ವೈದೇಹಿ ಮೆಡಿಕಲ್ ಕಾಲೇಜಿನ ಸಂಯೋಜಕ ಮಹೇಶ್ ಗೌಡ ಮತ್ತಿತರರು ಇದ್ದರು.