Saalumarada Thimmakka: ಲಕ್ಷಾಂತರ ಮರ ನೆಟ್ಟು ವೃಕ್ಷ ಮಾತೆ ಎಂದೇ ಖ್ಯಾತಿಯಾಗಿರೋ 113 ವರ್ಷದ ಸಾಲು ಮರದ ತಿಮ್ಮಕ್ಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುರೋ ಇವರನ್ನು ಚಿಕಿತ್ಸೆಗಾಗಿ ನಿನ್ನೆ ಬೆಂಗಳೂರಿನ ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಾಗಿಸಿದ್ದು, ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಪರಿಸರ ಪ್ರೇಮಿ, ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಪರಿಸರ ಪ್ರೇಮ ಅನೇಕರಿಗೆ ಮಾದರಿಯಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಪರಿಸರ ಮೇಲಿನ ಕಾಳಜಿಯಿಂದಲೇ ರಾಜ್ಯ ಸೇರಿದಂತೆ ದೇಶದಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವುದರ ಜೊತೆಗೆ ಅವುಗಳ ಪೋಷಣೆ ಸಹ ಮಾಡಿ ಮಕ್ಕಳಂತೆ ಬೆಳೆಸಿದ್ದಾರೆ. ಸಾವಿರಾರು ಮರಗಳಿಗೆ ಜೀವ ನೀಡಿ ಸಾಲು ಮರದ ತಿಮ್ಮಕ್ಕ ಎಂಬ ಖ್ಯಾತಿ ಸಹ ಪಡೆದುಕೊಂಡರು. ಕಳೆದು 17 ದಿನಗಳಿಂದ ತಿಮ್ಮಕ್ಕನವರಿಗೆ ಉಸಿರಾಟದ ಸಮಸ್ಯೆಯಿತ್ತು. ಈ ಕಾರಣದಿಂದ ಅವರನ್ನು ಜಯನಗರದ ಅಪೋಲೊ ಆಸ್ಪ್ರತೆಗೆ ದಾಖಲಾಗಿಸಿದ್ದು, ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಇನ್ನೂ ವೃಕ್ಷಮಾತೆ ತಿಮ್ಮಕ್ಕ ಕಳೆದ ಅಕ್ಟೋಬರ್ ಮಾಹೆಯಲ್ಲೂ ಸಹ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅದಕ್ಕೂ ಮುನ್ನಾ ಬೇಲೂರಿನಲ್ಲಿ ಸಹ ಚಿಕಿತ್ಸೆ ಪಡೆದು ಬಳಿಕ ಸೆಪ್ಟೆಂಬರ್ 27 ರಂದು ಬೆಂಗಳೂರಿಗೆ ವಾಪಸ್ಸಾಗಿದ್ದರು. ಇದೀಗ ಮತ್ತೆ ಅವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ತಿಮ್ಮಕ್ಕನವರ ಮಗ ಉಮೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಲು ಮರದ ತಿಮ್ಮಕ್ಕ ಅವರ ಆರೋಗ್ಯ ಸುಧಾರಿಸಿದೆ. ಎರಡು ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.