CWC – ಕೇಂದ್ರ ಸರ್ಕಾರದ ಕೇಂದ್ರೀಯ ಉಗ್ರಾಣ ನಿಗಮ (CWC) ಯಲ್ಲಿ ಖಾಲಿಯಿರುವ ಹಲವು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಆಯ್ಕೆಯಾದವರನ್ನು ದೇಶದ ವಿವಿಧ ಕಡೆ ನೇಮಕ ಮಾಡಲಾಗುತ್ತದೆ.
ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೊರೇಷನ್ ನಲ್ಲಿ ಖಾಲಿಯಿರುವ ಒಟ್ಟು 179 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮ್ಯಾನೇಜ್‌ಮೆಂಟ್ ಟ್ರೈನಿ, ಅಕೌಂಟೆಂಟ್, ಸೂಪರಿಂಟೆಂಡೆಂಟ್ ಮತ್ತು ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಈ ನೇಮಕಾತಿ ನಡೆಯಲಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಡಿ.14 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಜನವರಿ 12, 2025 ಕೊನೆಯ ದಿನಾಂಕವಾಗಿದ್ದು, ಆಸಕ್ತರು ಕೇಂದ್ರೀಯ ಉಗ್ರಾಣ ನಿಗಮ (CWC)ದ ಅಧಿಕೃತ ವೆಬ್ ಸೈಟ್ www.cewacor.nic.in ಮೂಲಕ ಅರ್ಜಿ ಸಲ್ಲಿಸಬೇಕಿದೆ.
CWC Recruitment 2024: Post details
- Management Trainee (General) – 40 posts
- Management Trainee (Technical) – 13 posts
- Accountant – 09 posts
- Superintendent (G) – 22 posts
- Junior Technical Assistant – 81 posts
- Superintendent (G) – SRD (NE) – 02 posts
- Junior Technical Assistant – SRD (NE) – 10 posts
- Junior Technical Assistant – SRD (UT of Ladakh) – 2 posts
ವೇತನ ಶ್ರೇಣಿ ಹಾಗೂ ವಯೋಮಿತಿ: ಆಯಾ ಹುದ್ದೆಗಳಿಗೆ ತಕ್ಕಂತೆ 29000 ದಿಂದ 180000 ರೂಪಾಯಿಗಳನ್ನು ನಿಗಧಿಪಡಿಸಲಾಗಿದೆ. ಆಯಾ ಹುದ್ದೆಗಳಿಗೆ 28-30 ವರ್ಷ ವಯೋಮಿತಿಯನ್ನು ನಿಗಧಿಪಡಿಸಲಾಗಿದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14-12-2024
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 12-01-2025
ಪ್ರಮುಖ ಲಿಂಕ್’ಗಳು:
- ಅಧಿಸೂಚನೆ: ಡೌನ್’ಲೋಡ್
- ಆನ್ಲೈನ್ ಅರ್ಜಿ: Apply ಮಾಡಿ