Hassanamba Ustava: ವರ್ಷಕ್ಕೊಮ್ಮೆ ನಡೆಯುವ ಹಾಸನಾಂಬ ಉತ್ಸವಕ್ಕೆ ಕ್ಷಣಗಣನೆ, ಜಿಲ್ಲಾ ಖಜಾನೆಯಿಂದ ದೇವಾಯಲಕ್ಕೆ ಬಂದ ಆಭರಣಗಳು….!

Hassanamba Ustava – ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನದ ಹಾಸನಾಂಬೆ ದರ್ಶನಕ್ಕೆ ದಿನಾಂಕ ಘೋಷಣೆಯಾಗಿದ್ದು, ಅಕ್ಟೋಬರ್​ 24 ರಿಂದ ನವೆಂಬರ್ 3ರ ತನಕ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ಮೊದಲ ಮತ್ತು ಕೊನೆ ದಿನ ಹೊರತುಪಡಿಸಿ ಉಳಿದ 9 ದಿನಗಳಲ್ಲಿ 24 ಗಂಟೆಗಳ ಕಾಲವೂ ಬಾಗಿಲು ತೆರೆದಿರುತ್ತದೆ. ಜಾತ್ರೆಯ ಪೂರ್ವ ಸಿದ್ಧತಾ ಕಾರ್ಯ ಬಹುತೇಕ ಮುಗಿದಿವೆ. ಒಂದು ವರ್ಷದಿಂದ ಜಿಲ್ಲಾ ಖಜಾನೆಯಲ್ಲಿ ಭದ್ರಪಡಿಸಿದ್ದ ಒಡವೆಗಳನ್ನು ಇಂದು ಬಿಗಿ ಪೊಲೀಸ್ ಭದ್ರತೆಯ ನಡುವೆ ದೇವಾಲಯಕ್ಕೆ (Hassanamba Ustava) ತರಲಾಯಿತು.

Hassanamba Devi ustava 0

ಹಾಸನಾಂಬೆಯ ಆಭರಣಗಳನ್ನು ತರುವ ಮುನ್ನಾ ಖಜಾನೆಯ ಅರ್ಚಕರು ಪೂಜೆ ನೆರವೇರಿಸಿದರು. ನಂತರ ಒಡವೆಗಳನ್ನು ಪಲ್ಲಕಿಯ ಮೇಲಿಟ್ಟು ಬೆಳ್ಳಿ ರಥದ ಮೂಲಕ ಮೆರವಣಿಗೆ ಮಾಡಿಕೊಂಡು (Hassanamba Ustava)  ದೇವಾಲಯಕ್ಕೆ ತೆಗೆದುಕೊಂಡು ಬರಲಾಯಿತು. ಮೆರವಣಿಗೆಗೂ ಮುನ್ನಾ ಹಾಸನಾಂಬ (Hassanamba Ustava)  ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಹಾಗೂ ಉಪವಿಭಾಗಾಧಿಕಾರಿಗಲು, ತಹಸೀಲ್ದಾರ್‍ ರವರುಗಳ ಸಮ್ಮುಖದಲ್ಲಿ ದೇವಿಯ ಆಭರಣಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆಭರಣಗಳ ಮೆರವಣಿಗೆ ವೇಳೆ ಪೊಲೀಸ್ ಇಲಾಖೆಯ ವತಿಯಿಂದ ಸೂಕ್ತ ಭದ್ರತೆ ಒದಗಿಸಲಾಯಿತು.

ಇನ್ನೂ ಕಳೆದ ವರ್ಷ (Hassanamba Ustava)  ನವೆಂಬರ್‍ 2 ರಿಂದ ನವೆಂಬರ್‍ 15 ರವರೆಗೆ ದೇವಾಲಯದ ಬಾಗಿಲು ತೆರೆಯಲಾಗಿತ್ತು. 14 ದಿನಗಳ ಕಾಲ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. (Hassanamba Ustava)  ಮೊದಲ ಹಾಗೂ ಕೊನೆಯ ದಿನ ಬಿಟ್ಟು ಉಳಿದ 12 ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇನ್ನೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲಾ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಇನ್ನೂ (Hassanamba Ustava)  ಹಾಸನಾಂಬೆಯ ಭಕ್ತರೂ ಸಹ ಕಾತುರದಿಂದ ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇವಿಯ ದರ್ಶನ, ಟಿಕೆಟ್ ಖರೀದಿ ಸೇರಿ ಪ್ರಮುಖ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಹಾಸನಾಂಬ ಹೆಸರಿನಲ್ಲಿ ಆಪ್ ಒಂದನ್ನು ಸಹ ತೆರೆಯಲಾಗಿದೆ. ಈ (Hassanamba Ustava)  ಆಪ್ ಮೂಲಕ ಹಾಸನಾಂಬೆ ಉತ್ಸವದ ಪ್ರತಿಯೊಂದು ಮಾಹಿತಿ ದೊರೆಯಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Next Post

Trending News: ವೀಲ್ ಚೇರ್ ನಲ್ಲಿ ಪುಡ್ ಡೆಲಿವರಿ, ಝೋಮ್ಯಾಟೋ ಡೆಲಿವರಿ ಏಜೆಂಟ್ ನ ಛಲಕ್ಕೆ ಫಿದಾ ಸಲಾಂ ಹೊಡೆದ ನೆಟ್ಟಿಗರು…!

Mon Oct 21 , 2024
ಇಂದಿನ ಕಾಲದಲ್ಲಿ ಆನ್ ಲೈನ್ ಮೂಲಕ ಆಹಾರವನ್ನು ಬುಕ್ ಮಾಡುವುದು ಹೆಚ್ಚಾಗಿದೆ. ಅನೇಕರಿಗೆ ಈ ಪುಡ್ ಡೆಲವರಿ ಆಪ್ ಗಳು ಜೀವನೋಪಾಯ ಕಲ್ಪಿಸಿದೆ. ಈ ಪುಡ್ ಡೆಲವರಿ ಆಪ್ ಗಳಲ್ಲಿ ಕಡಿಮೆ ಓದಿದವರಿಂದ ಹಿಡಿದು PHD ಮಾಡಿದವರೂ ಸಹ ಕೆಲಸ ಮಾಡುತ್ತಿದ್ದಾರೆ. ಇದೀಗ ಅಂಗವಿಕಲತೆ ಎಂಬುದು ದೇಹಕ್ಕೆ ಮಾತ್ರ, ಮನಸ್ಸಿಗೆ ಮಾತ್ರ ಅಂಗವಿಕಲತೆ ಇಲ್ಲ ಎಂಬುದಕ್ಕೆ ಸಾಕ್ಷಿಯೆಂಬಂತೆ ವಿಕಲಚೇತನನೋರ್ವ (Trending News) ವೀಲ್ ಚೇರ್‍ ನಲ್ಲಿ ಪುಡ್ ಡೆಲಿವರಿ ಮಾಡುತ್ತಿದ್ದಾನೆ. […]
zomato food delivery physical challenged person
error: Content is protected !!