Monday, October 27, 2025
HomeSpecialಗ್ಯಾಸ್ ಸಿಲಂಡರ್ ಮೇಲೆ ನಿಂತು, ತಲೆ ಮೇಲೆ ಮತ್ತೊಂದು ಸಿಲಂಡರ್ ಇಟ್ಟುಕೊಂಡು ಬ್ಯಾಲೆನ್ಸ್ ಮಾಡಿದ ಮಹಿಳೆ,...

ಗ್ಯಾಸ್ ಸಿಲಂಡರ್ ಮೇಲೆ ನಿಂತು, ತಲೆ ಮೇಲೆ ಮತ್ತೊಂದು ಸಿಲಂಡರ್ ಇಟ್ಟುಕೊಂಡು ಬ್ಯಾಲೆನ್ಸ್ ಮಾಡಿದ ಮಹಿಳೆ, ವೈರಲ್ ಆದ ವಿಡಿಯೋ….!

ಇಂದಿನ ಸೋಷಿಯಲ್ ಮಿಡಿಯಾ ಕಾಲದಲ್ಲಿ ರೀಲ್ಸ್ ಗಳ ಹಾವಳಿ ಜೋರಾಗಿಯೇ ಇದೆ. ವಿವಿಧ ರೀತಿಯ ರೀಲ್ಸ್ ಗಳನ್ನು ನೋಡುತ್ತಿರುತ್ತೇವೆ. ವಿವಿಧ ಪ್ರದೇಶಗಳಲ್ಲಿ, ವಿವಿಧ ವಸ್ತುಗಳನ್ನು ಬಳಸಿಕೊಂಡು ರೀಲ್ಸ್ ಮಾಡುತ್ತಿರುತ್ತಾರೆ. ಕೆಲವರು ಈ ರೀಲ್ಸ್ ಮೂಲಕವೇ ತುಂಬಾನೆ ಪಾಪ್ಯುಲರ್‍ ಆಗುತ್ತಾರೆ. ಇದೀಗ ಮಹಿಳೆಯೊಬ್ಬರು ಸಿಲಂಡರ್‍ ಮೇಲೆ ನಿಂತು, ತಲೆಯ ಮೇಲೊಂದು ಸಿಲಂಡರ್‍ ಬ್ಯಾಲೆನ್ಸ್ ಮಾಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Haryana women stunt 1

ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗುವ ನಿಟ್ಟಿನಲ್ಲಿ ಅನೇಕರು ತಮ್ಮಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಹೊರಹಾಕುತ್ತಿರುತ್ತಾರೆ. ಕೆಲವರಂತೂ ಗ್ಲಾಮರ್‍ ಹೊರಹಾಕುತ್ತಾ ವಿಚಿತ್ರವಾಗಿ ಆಡುತ್ತಿರುತ್ತಾರೆ. ವ್ಯೂಸ್ ಹೆಚ್ಚಾಗಲು ಏನಾದರೂ ಮಾಡಲು ಸಿದ್ದರಾಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಹೊಸ ಸ್ಟಂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಹರ್ಯಾಣ ಮೂಲದ ಮಹಿಳೆ ಡೇರಿಂಗ್ ಸ್ಟಂಟ್ ಮಾಡಿ ಎಲ್ಲರನ್ನೂ ಆಶ್ಚರ್ಯಗೊಳಿಸುತ್ತಿದ್ದಾಳೆ. ಈ ಮಹಿಳೆ ಕಂಟೆಂಟ್ ಕ್ರಿಯೇಟರ್‍ ಆಗಿದ್ದು, ನಿತೂ ಎಂಬ ಇನ್ಸ್ಟಾಗ್ರಾಂ ಪೇಜ್ ಹೊಂದಿದ್ದಾಳೆ. ಈ ಪೇಜ್ ನಲ್ಲಿ ಆಕೆ ಜನವರಿಯಲ್ಲಿ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದರು.  ಈ ವಿಡಿಯೋ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆ ಮನೆಯಲ್ಲಿದ್ದ ಸಿಲಂಡರ್‍ ಬಳಸಿ ಸ್ಟಂಟ್ ಮಾಡಿದ್ದಾಳೆ.

ವಿಡಿಯೋ ನೋಡಲು ಈ ಲಿಂಕ್ ಓಪೆನ್ ಮಾಡಿ: https://www.instagram.com/p/C2NH9ViSMo6/

ಸಿಲಂಡರ್‍ ಮೇಳೆ ನಿಂತುಕೊಂಡು, ಮತ್ತೊಂದು ಸಿಲಂಡರ್‍ ಅನ್ನು ತಲೆಯ ಮೇಲಿಟ್ಟುಕೊಂಡು ಬ್ಯಾಲೆನ್ಸ್ ಮಾಡುತ್ತಾ, ಯಾವುದೇ ಸಪೋರ್ಟ್ ಇಲ್ಲದೇ ನಿಂತುಕೊಂಡಿದ್ದಾಳೆ. ಅದರಲ್ಲೂ ತಲೆಯ ಮೇಲೆ ಸಿಲಂಡರ್‍ ಇಟ್ಟುಕೊಂಡು ಸಿಲಂಡರ್‍ ಅನ್ನು ಕೈಯಲ್ಲಿಟ್ಟುಕೊಳ್ಳದೇ ಸ್ಟಂಟ್ ಮಾಡಿದ್ದಾಳೆ. ಮೊದಲಿಗೆ ತಲೆಯ ಮೇಲೆ ಗಾಜಿನ ಗ್ಲಾಸ್ ಇಟ್ಟುಕೊಂಡು ಅದರ ಮೇಲೆ ಸಿಲಂಡರ್‍ ಇಟ್ಟುಕೊಂಡಿದ್ದಾಳೆ. ನೆಲದ ಮೇಲಿರುವ ಸಿಲಂಡರ್‍ ಮೇಲೆ ನಿಂತುಕೊಂಡು ಎರಡೂ ಕೈಯಲ್ಲಿ ನಮಸ್ಕಾರ ಭಂಗಿಮದಲ್ಲಿ ನಿಂತುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಕೆಲವರು ಸಿಲಂಡರ್‍ ಮುಟ್ಟಿಕೊಳ್ಳದೇ ಬ್ಯಾಲೆನ್ಸ್ ಮಾಡಿದ ಸ್ಟಂಟ್ ಗೆ ಶಾಕ್ ಆಗಿದ್ದು, ಲೈಕ್ ಗಳು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular