ಬಾಗೇಪಲ್ಲಿ: ಇಡೀ ವಿಶ್ವದಲ್ಲಿ ಮಾನವನ ಜೀವಮಾನದ ಭವಿಷ್ಯವನ್ನು ರೂಪಿಸುವ ಶಕ್ತಿ ಒಬ್ಬ ವಿದ್ಯೆ ಕಲಿಸಿದ ಗುರುವಿಗೆ ಮಾತ್ರ ಸಾದ್ಯ (Guru Purnima) ಎಂದು ಗಂಗಮ್ಮ ದೇವಿ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಹಾಗೂ ಶ್ರೀ ಯೋಗಿ ನಾರೇಯಣ ಬಲಿಜ ಟ್ರಸ್ಟ್ ಅಧ್ಯಕ್ಷ ಎ.ಜಿ.ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರು ಪೌರ್ಣಿಮೆ (Guru Purnima) ಅಂಗವಾಗಿ ಶ್ರೀ ಯೋಗಿ ನಾರೇಯಣ ಬಲಿಜ ಟ್ರಸ್ಟ್‍ವತಿಯಿಂದ ಪಟ್ಟಣದ ಗ್ರಾಮದೇವತೆ ಗಂಗಮ್ಮ ದೇವಾಲಯದಲ್ಲಿ ಅಯೋಜಿಸಲಾಗಿದ್ದ ಕಾಲಜ್ಞಾನಿ ಶ್ರೀ ಯೋಗಿ ಅಮರನಾರಾಯಣ(ಕೈವಾರ ತಾತಯ್ಯ) ರವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಾವು ಗಳಿಸಿದ ಸಂಪತ್ತು ಕಸಿದುಕೊಳ್ಳಬಹುದು ಆದರೆ ಗುರುಗಳು ಕಲಿಸಿದ ವಿದ್ಯೆ ಮಾತ್ರ ಯಾರಿಂದಲ್ಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದ ಅವರು ಇಡೀ ವಿಶ್ವದಲ್ಲಿ ಮಹತ್ವದ ಸ್ಥಾನ ನೀಡಿ ಗೌರವಿಸಲ್ಪಡುವ ಏಕೈಕ ವ್ಯಕ್ತಿ ವಿದ್ಯೆ ಕಲಿಸಿದ ಗುರುಗಳು (Guru Purnima) ಮಾತ್ರ.
(Guru Purnima) ಗುರು ಕಲಿಸಿದ ವಿದ್ಯೆಯಿಂದ ಮನುಷ್ಯನ ಜೀವನದ ಭವಿಷ್ಯವನ್ನು ರೂಪಿಸುವ ಶಕ್ತಿ ಇದೆ ಎಂದ ಅವರು ಗುರು ಸ್ಥಾನವನ್ನು ಅಲಂಕರಿಸಿದವರಿಗೆ ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಶ್ರದ್ದಾಭಕ್ತಿಯಿಮದ ಪೂಜಿಸಿ ಗೌರವಿಸಬೇಕೆಂದರು. ಈ ಸಂದರ್ಭದಲ್ಲಿ ವಿ.ನಾರಾಯಣಪ್ಪ, ಕೆ.ಆರ್.ಅಂಜಿನಪ್ಪ, ಬಿ.ಎಸ್.ನಾರಾಯಣಸ್ವಾಮಿ, ಟಿ.ರಘುನಾಥರೆಡ್ಡಿ, ಬಿ.ಎಸ್.ನಾಗಭೂಷಣ್ ಮತ್ತಿತರರು ಗುರು ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.