Viral Video – ಇಂದಿನ ಕಾಲದಲ್ಲಿ ಸ್ಮಾರ್ಟ್ ಪೋನ್ ಬಳಸುವ ಬಹುತೇಕರು ಸೋಷಿಯಲ್ ಮಿಡಿಯಾ ಖಾತೆಗಳನ್ನು ಬಳಸುತ್ತಾರೆ. ಈ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಕೆಲವೊಂದು ವಿಡಿಯೋಗಳು ತುಂಬಾನೆ ವೈರಲ್ ಆಗುತ್ತಿರುತ್ತದೆ. ಇದೀಗ ವಿಡಿಯೋ ಒಂದು ತುಂಬಾನೆ ಸದ್ದು ಮಾಡುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತನಗೆ ಮೋಸ ಮಾಡಿ ಬೇರೊಬ್ಬಳನ್ನು ಮದುವೆಯಾಗುತ್ತಿದ್ದ ಪ್ರಿಯಕರನಿಗೆ ಮದುವೆ ಮಂಟಪದಲ್ಲೇ ಮನಸೋಇಚ್ಚೆ ಥಳಿಸಿದ್ದಾಳೆ. ಈ ಸಂಬಂಧ ವಿಡಿಯೋ ಒಂದು (Viral Video) ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಈ ದೃಶ್ಯವನ್ನು ನೋಡಿದ ಕುಟುಂಬಸ್ಥರು ಸಹ ಶಾಕ್ ಆಗಿದ್ದಾರೆ.
ಇತ್ತೀಚಿಗೆ ಕೆಲವೊಂದು ಮದುವೆಗಳಲ್ಲಿ ಹಳದಿ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತಾರೆ. ಈ ಸಮಯದಲ್ಲಿ ನೃತ್ಯಗಳನ್ನು ಆಡುತ್ತಾ ಸಂಭ್ರಮಿಸುತ್ತಾರೆ. ಈ ಸಮಯದಲ್ಲಿ ಕೆಲವೊಂದು ನಡೆಯಬಾರದ ಘಟನೆಗಳ ನಡೆಯುತ್ತಿರುತ್ತವೆ. ಮದುವೆ ಮಂಟಪದಲ್ಲಿ ನಡೆಯುವಂತಹ ಕೆಲವೊಂದು ಘಟನೆಗಳ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವೊಂದು ಘಟನೆಗಳ ಕಾರಣದಿಂದ ಮದುವೆಗಳೂ ಸಹ ಮುರಿದುಬಿದ್ದಿದ್ದು ಇದೆ. ಅದೇ ರೀತಿಯ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ಅನೇಕರು ಶಾಕ್ ಆಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಸದ್ಯ ವೈರಲ್ ಆಗುತ್ತಿರುವ ವಿಡಿಯೋವನ್ನು @sonukumargiri396 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮದುವೆಯ ಸಂಭ್ರಮವೊಂದು ನಡೆಯುತ್ತಿರುತ್ತದೆ. ಈ ಮದುವೆಯಲ್ಲಿ ವಧು ವರರು ಕೊರಳಿಗೆ ಹಾರ ಹಾಕಿಕೊಳ್ಳುತ್ತಿರುತ್ತಾರೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಯುವತಿಯೊಬ್ಬಳು ವೇದಿಕೆಯ ಮೇಲೆ ಬರುತ್ತಾಳೆ. ಬಂದ ಕೂಡಲೇ ಏಕಾಏಕಿ ಆ ಯುವತಿ ಮಧುಮಗನಿಗೆ ಥಳಿಸಲು ಶುರು ಮಾಡುತ್ತಾಳೆ. ಈ ಸಮಯದಲ್ಲಿ ವರ ಕೊಂಚ ದೂರ ಹೋಗಿ ಬೀಳುತ್ತಾಳೆ. ಯುವತಿ ಕೂಡಲೇ ವರನನ್ನು ಎಬ್ಬಿಸಿ ಮತ್ತೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ. ಇದನ್ನು ನೋಡಿ ಅಲ್ಲಿದ್ದವರೆಲ್ಲಾ ಶಾಕ್ ಆಗಿದ್ದಾರೆ. ಮದುವೆಯ ವೇದಿಕೆಯಲ್ಲೇ ವರನ ಮೇಲೆ ಹಲ್ಲೆ ನಡೆಸುತ್ತಿದ್ದನ್ನು ನೋಡಿದ ವಧು ಆ ಮಹಿಳೆಯೊಂದಿಗೆ ವಾಗ್ವಾದಕ್ಕಿಳಿದಿದ್ದಾಳೆ. ಈ ಸಮಯದಲ್ಲಿ ಯುವತಿಯೂ ವಧುವಿನೊಂದಿಗೆ ವಾಗ್ವಾದಕ್ಕಿಳಿದಿದ್ದಾಳೆ.