Girl Dance Reel in Temple : ದೇವಸ್ಥಾನದ ಕ್ಯೂನಲ್ಲೇ ರೀಲ್ಸ್ ಹುಚ್ಚಾಟ, ಯುವತಿಗೆ ಕ್ಲಾಸ್ ತಗೊಂಡ ಖಡಕ್ ಪೊಲೀಸ್, ವಿಡಿಯೋ ವೈರಲ್!

ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಹತ್ತಾರು ಲೈಕ್ಸ್ ಮತ್ತು ವೀವ್ಸ್ ಪಡೆಯಲು ಇಂದಿನ ಯುವ ಪೀಳಿಗೆ ಯಾವ ಮಟ್ಟಕ್ಕೆ ಇಳಿಯುತ್ತಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಸಾರ್ವಜನಿಕ ಸ್ಥಳಗಳಲ್ಲಿ ಅಶಿಸ್ತು (Girl Dance Reel in Temple) ಮೆರೆಯುವುದು ಒಂದೆಡೆಯಾದರೆ, ಇದೀಗ ಭಕ್ತಿಯ ಭಾವವಿರಬೇಕಾದ ಪವಿತ್ರ ಧಾರ್ಮಿಕ ಕ್ಷೇತ್ರಗಳೂ ಈ ರೀಲ್ಸ್ ಹುಚ್ಚಾಟಕ್ಕೆ ಬಲಿಯಾಗುತ್ತಿವೆ. ದೇವರ ದರ್ಶನದ ಭರದಲ್ಲಿದ್ದ ಭಕ್ತರ ನಡುವೆಯೇ ಯುವತಿಯೊಬ್ಬಳು ಕ್ಯಾಮೆರಾ ಮುಂದೆ ಸೊಂಟ ಬಳುಕಿಸಿದ್ದು, ಅದನ್ನು ಕಂಡ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಇನ್‌ಸ್ಟಂಟ್ ಆಗಿ ಆಕೆಗೆ ಖಡಕ್ ವಾರ್ನಿಂಗ್ ನೀಡಿರುವ ವಿಡಿಯೋ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

Girl Dance Reel in Temple Goes Viral After Police Warning

Girl Dance Reel in Temple – ದೇವಸ್ಥಾನದ ಸರತಿ ಸಾಲಿನಲ್ಲಿ ಯುವತಿಯ ಡ್ಯಾನ್ಸ್!

ಇನ್‌ಸ್ಟಾಗ್ರಾಮ್ ರೀಲ್ಸ್ (Instagram Reels) ಹುಚ್ಚು ಯಾವ ಮಟ್ಟಿಗೆ ಹೋಗಿದೆ ಅಂದ್ರೆ, ದೇವಸ್ಥಾನದ ಒಳಗೆ ವಿಡಿಯೋ ಚಿತ್ರೀಕರಣ ನಿಷೇಧಿಸಲಾಗಿದೆ ಎಂಬ ಬೋರ್ಡ್ ಇದ್ದರೂ ಕೆಲವರು ಕ್ಯಾರೇ ಎನ್ನುತ್ತಿಲ್ಲ. ವೈರಲ್ ಆಗಿರುವ ಈ ಹೊಸ ವಿಡಿಯೋದಲ್ಲಿ, ಯುವತಿಯೊಬ್ಬಳು ದೇವಸ್ಥಾನದ ಕ್ಯೂನಲ್ಲಿ ನಿಂತು ಹಾಡೊಂದಕ್ಕೆ ಸ್ಟೆಪ್ಸ್ ಹಾಕುತ್ತಿದ್ದಾಳೆ. ಆಕೆಯ ಜೊತೆ ಬಂದಿದ್ದ ವ್ಯಕ್ತಿ ಮೊಬೈಲ್‌ನಲ್ಲಿ ಇದನ್ನೆಲ್ಲಾ ಶೂಟ್ ಮಾಡ್ತಿದ್ದಾನೆ. Read this also : ರೀಲ್ಸ್ ಮಾಡೋಕೆ ಹೋಗಿ ಎಡವಟ್ಟು ಮಾಡ್ಕೊಂಡ ಯುವತಿ, ರೀಲ್ಸ್ ಮಾಡುತ್ತಾ ಮುಗ್ಗರಿಸಿ ಬಿದ್ದ ಯುವತಿ….!

ನಿಯಮ ಉಲ್ಲಂಘಿಸಿದ ರೀಲರ್ಸ್; ತಕ್ಷಣ ಎಂಟ್ರಿ ಕೊಟ್ಟ ಕಾಪ್ಸ್

ಯುವತಿ ಭಕ್ತರ ನಡುವೆ ಡ್ಯಾನ್ಸ್ ಮಾಡುತ್ತಾ ಇನ್ ಸ್ಟಾಗ್ರಾಮ್ ವಿಡಿಯೋ (Girl Dance Reel in Temple) ಮಾಡುವುದನ್ನು ಅಲ್ಲೇ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಗಮನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿ, ರೀಲ್ಸ್ ಮಾಡುವುದನ್ನು ತಡೆದಿದ್ದಲ್ಲದೆ, ಆ ಜಾಗದಿಂದ ತಕ್ಷಣವೇ ಹೊರಡುವಂತೆ ಯುವತಿಗೆ ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ. ಸದ್ಯ ಈ ಘಟನೆ ಯಾವ ದೇವಸ್ಥಾನದಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲವಾದರೂ, ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.

ಪೊಲೀಸ್ ಅಧಿಕಾರಿಯ ಕರ್ತವ್ಯ ನಿಷ್ಠೆಗೆ ನೆಟ್ಟಿಗರ ಜೈಕಾರ!

ಈ ವಿಡಿಯೋ (Viral Video Link Here) ನೋಡಿದ ನೆಟ್ಟಿಗರು ಯುವತಿಯ ಬೇಜವಾಬ್ದಾರಿ ನಡವಳಿಕೆ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸ್ ಅಧಿಕಾರಿ ತಮ್ಮ ಜವಾಬ್ದಾರಿಯನ್ನು ಅತ್ಯಂತ ಸರಿಯಾಗಿ ನಿಭಾಯಿಸಿದ್ದಾರೆ ಮತ್ತು ಇಂತಹ ಹುಚ್ಚಾಟ ಆಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಮುಕ್ತವಾಗಿ ಶ್ಲಾಘಿಸಿದ್ದಾರೆ.

Girl Dance Reel in Temple Goes Viral After Police Warning

ದೇವಸ್ಥಾನಗಳ ಒಳಗೆ ಮೊಬೈಲ್ ಮತ್ತು (Girl Dance Reel in Temple) ಕ್ಯಾಮೆರಾಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ಆಗ ಇಂತಹ ಪ್ರಚಾರದ ಹುಚ್ಚು ತಾವಾಗಿಯೇ ನಿಲ್ಲುತ್ತದೆ ಮತ್ತು ಭಕ್ತರ ಜನಸಂದಣಿಯೂ ನಿಯಂತ್ರಣಕ್ಕೆ ಬರುತ್ತದೆ ಎಂದು ಕೆಲವು ಬಳಕೆದಾರರು ತೀವ್ರವಾಗಿ ಸಲಹೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿ ಎಂಬ ಆಕ್ರೋಶ

ಇನ್ನು ಕೆಲವು ನೆಟ್ಟಿಗರು ಒಂದು ಹೆಜ್ಜೆ ಮುಂದೆ ಹೋಗಿ, ಇಂತಹ ಘಟನೆಗಳಿಗೆ ಸಂಪೂರ್ಣ ಬ್ರೇಕ್ ಬೀಳಬೇಕಾದರೆ ಮೊದಲು ಈ ಸೋಶಿಯಲ್ ಮೀಡಿಯಾಗಳನ್ನೇ ಬ್ಯಾನ್ ಮಾಡಬೇಕು (Girl Dance Reel in Temple) ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಲೈಕ್ಸ್ ಹಪಾಹಪಿಗೆ ಬಿದ್ದು ಪವಿತ್ರ ಸ್ಥಳಗಳ ಮರ್ಯಾದೆ ತೆಗೆಯುವ ಇಂತಹ ರೀಲ್ಸ್ ಕ್ರೇಜ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ.

Leave a Comment

Your email address will not be published. Required fields are marked *

Scroll to Top