ಸಾಮಾನ್ಯವಾಗಿ ಹಾವು ಎಂದರೆ ಎಂಥವರಿಗಾದರೂ ಒಮ್ಮೆ ಮೈ ಜುಮ್ ಎನ್ನುತ್ತದೆ. ಇನ್ನು ಬೃಹತ್ ಗಾತ್ರದ ಹೆಬ್ಬಾವು ಎದುರಿಗೆ ಬಂದರೆ ಪರಿಸ್ಥಿತಿ ಹೇಗಿರಬೇಡ? ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ತೆರೆದರೆ ಸಾಕು, ಇಂತಹ ಬೆಚ್ಚಿಬೀಳಿಸುವ ಹಾವುಗಳ (Giant Python Swallows Goat) ವಿಡಿಯೋಗಳೇ ಹೆಚ್ಚಾಗಿ ಕಣ್ಣಿಗೆ ಬೀಳುತ್ತಿವೆ.
ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬರುತ್ತಿರುವ 8 ರಿಂದ 12 ಅಡಿ ಉದ್ದದ ಈ ದೈತ್ಯ ಹೆಬ್ಬಾವುಗಳು, ಸಿಕ್ಕ ಪ್ರಾಣಿಗಳನ್ನು ಕಣ್ಣಿಮೆಯಾಕುವಷ್ಟರಲ್ಲಿ ಬಿಗಿದಪ್ಪಿ, ಉಸಿರುಗಟ್ಟಿಸಿ, ಮೂಳೆಪುಡಿ ಮಾಡಿ ಇಡೀದಾಗಿ ನುಂಗಿಬಿಡುತ್ತವೆ. ಇದೀಗ ಅಂಥದ್ದೇ ಒಂದು ರೋಮಹರ್ಷಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

Giant Python Swallows Goat – ಮೇಕೆಯನ್ನು ನುಂಗಿ ಸಿಕ್ಕಿಬಿದ್ದ ದೈತ್ಯ ಸರ್ಪ
ಹೆಬ್ಬಾವುಗಳು ಒಂದು ಬಾರಿ ದೊಡ್ಡ ಪ್ರಾಣಿಯನ್ನು ನುಂಗಿದರೆ, ಅದನ್ನು ಜೀರ್ಣಿಸಿಕೊಳ್ಳಲು ಹಲವು ದಿನಗಳೇ ಬೇಕಾಗುತ್ತವೆ. ಅಲ್ಲಿಯವರೆಗೆ ಹೊಟ್ಟೆ ಊದಿಕೊಂಡು ಅವುಗಳಿಗೆ ಕನಿಷ್ಠ ಕದಲಲು ಸಹ ಸಾಧ್ಯವಾಗುವುದಿಲ್ಲ. ಅಂತಹದ್ದೇ ಒಂದು ಶಾಕಿಂಗ್ ಘಟನೆಯ ವಿಡಿಯೋ ಈಗ ನೆಟ್ಟಿಗರ ನಿದ್ದೆ ಗೆಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ (Viral Video link here) ವಿಡಿಯೋದಲ್ಲಿ, ಕಾಡಿನ ಸಮೀಪವಿರುವ ಪ್ರದೇಶವೊಂದಕ್ಕೆ ನುಗ್ಗಿದ ಬೃಹತ್ ಗಾತ್ರದ ಹೆಬ್ಬಾವೊಂದು ಅಲ್ಲಿದ್ದ ಮೇಕೆ ಮರಿಯೊಂದನ್ನು ಅಮಾಂತವಾಗಿ ನುಂಗಿಬಿಟ್ಟಿದೆ. ಮೇಕೆಯನ್ನು ಹೊಟ್ಟೆಗೆ ಹಾಕಿಕೊಂಡ ತಕ್ಷಣ ಅದರ (Giant Python Swallows Goat) ಹೊಟ್ಟೆ ಬಲೂನಿನಂತೆ ಉಬ್ಬಿಕೊಂಡಿದೆ.
ಎತ್ತ ಸಾಗಲಾರದೆ ಹೆಬ್ಬಾವಿನ ಒದ್ದಾಟ
ಮೇಕೆಯನ್ನು ನುಂಗಿದ ನಂತರ ಹೊಟ್ಟೆ ವಿಪರೀತ ಭಾರವಾದ ಕಾರಣ ಅದಕ್ಕೆ ಒಂದಿಂಚು ಕೂಡ ಕದಲಲು ಸಾಧ್ಯವಾಗಿಲ್ಲ. ಒಂದೇ ಕಡೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹತ್ತಿರದಿಂದ ಪರಿಶೀಲಿಸಿದಾಗ, ಹೆಬ್ಬಾವು ತನ್ನ ಶಕ್ತಿ ಮೀರಿ ಅಧಿಕಾರಿಗಳ (Giant Python Swallows Goat) ಮೇಲೆಯೇ ದಾಳಿ ಮಾಡಲು ಯತ್ನಿಸಿದೆ. ಆದರೆ, ವಿಪರೀತ ಭಾರದಿಂದಾಗಿ ಅದಕ್ಕೆ ಮುಂದೆ ಹೋಗಲು ಅಥವಾ ಹಿಂದೆ ಬರಲು ಸಾಧ್ಯವಾಗದೆ ತೀವ್ರವಾಗಿ ಒದ್ದಾಡಿದೆ. Read this also : ಸತ್ತೇ ಹೋಯಿತು ಅಂದುಕೊಂಡಿದ್ದ ಹಾವಿಗೆ ಪೈಪ್ ಮೂಲಕ ಉಸಿರು ನೀಡಿ ಕಾಪಾಡಿದ ಯುವಕ! ಗೂಸ್ಬಂಪ್ಸ್ ತರಿಸುತ್ತೆ ಈ ವಿಡಿಯೋ

ಮಳೆಗಾಲದಲ್ಲಿ ಎಚ್ಚರ ಅಗತ್ಯ
ಸ್ಥಳದಲ್ಲಿದ್ದ ಮೇಕೆಯ ಕೂದಲುಗಳನ್ನು ಗಮನಿಸಿದ ಅರಣ್ಯ ಸಿಬ್ಬಂದಿ, ಆ ದೈತ್ಯ ಹೆಬ್ಬಾವು ಮೇಕೆ ಮರಿಯನ್ನೇ ನುಂಗಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಸದ್ಯ ಈ ಘಟನೆಯನ್ನು ಅಲ್ಲಿನವರು ಮೊಬೈಲ್ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. (Giant Python Swallows Goat) ಇದನ್ನು ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಮಳೆಗಾಲದಲ್ಲಿ ಇಂತಹ ಅಪಾಯಕಾರಿ ಜೀವಿಗಳು ಹೆಚ್ಚಾಗಿ ಹೊರಬರುವುದರಿಂದ ಮತ್ತು ಪೊದೆಗಳ ನಡುವೆ ಅವಿತುಕೊಳ್ಳುವ ಸಾಧ್ಯತೆ ಇರುವುದರಿಂದ, ಪ್ರತಿಯೊಬ್ಬರೂ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಎಚ್ಚರಿಕೆ ನೀಡುತ್ತಿದ್ದಾರೆ.
