Nandani Bosamiya Death case : ಬಾಡಿಗೆ ಮನೆಯಲ್ಲಿ ಆಪ್ ಮಾಜಿ ಅಭ್ಯರ್ಥಿ ನಂದಿನಿ ಶವ ಪತ್ತೆ: ಲೀವ್-ಇನ್ ರಿಲೇಶನ್‌ಶಿಪ್, ಕೊಲೆ ಹಾಗೂ ಲವ್ ಜಿಹಾದ್ ಶಂಕೆ?

ಇತ್ತೀಚಿನ ದಿನಗಳಲ್ಲಿ ಪ್ರೀತಿ, ಪ್ರೇಮ, ಮದುವೆ ಹಾಗೂ ಲೀವ್-ಇನ್ ರಿಲೇಶನ್‌ಶಿಪ್‌ಗಳ (Live-in Relationship) ಹೆಸರಿನಲ್ಲಿ ನಡೆಯುತ್ತಿರುವ ಅಪರಾಧ ಮತ್ತು ಕೊಲೆ ಪ್ರಕರಣಗಳು ಸಮಾಜವನ್ನು ಬೆಚ್ಚಿಬೀಳಿಸುತ್ತಿವೆ. ಇತ್ತೀಚೆಗಷ್ಟೇ ಪುಣೆಯ ಉದ್ಯಮಿ ಪುತ್ರನನ್ನು ಆತನ ಭಾವಿ ಪತ್ನಿಯೇ ಲೋಹಘಡ ಬೆಟ್ಟದಿಂದ ತಳ್ಳಿ ಕೊಲೆಗೈದ ಘಟನೆ ಮಾಸುವ ಮುನ್ನವೇ, ಇದೀಗ ಗುಜರಾತ್‌ನ ರಾಜ್‌ಕೋಟ್‌ ನಲ್ಲಿ (Rajkot Nandani Bosamiya Death case) ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

Former AAP candidate Nandani Bosamiya found dead in a rented house in Rajkot as police investigate the case.

ಆಮ್ ಆದ್ಮಿ ಪಕ್ಷದ (AAP) ಮಾಜಿ ಮುನ್ಸಿಪಲ್ ಚುನಾವಣಾ ಅಭ್ಯರ್ಥಿಯಾಗಿದ್ದ ಕೇವಲ 23 ವರ್ಷದ ನಂದಿನಿ ಬೊಸಮಿಯಾ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಈಕೆಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಆಕೆಯ ಪೋಷಕರು ಇದು ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬನ್ನಿ, ಈ ಪ್ರಕರಣದ ಸಂಪೂರ್ಣ ಹಿನ್ನೆಲೆ ಇಲ್ಲಿದೆ.

Rajkot Nandani Bosamiya Death case – ಯಾರು ಈ ನಂದಿನಿ ಮತ್ತು ಏನಿದು ಘಟನೆ?

ನಂದಿನಿ ಬೊಸಮಿಯಾ ರಾಜಕೀಯವಾಗಿ ಸಕ್ರಿಯಳಾಗಿದ್ದ ಯುವತಿ. ಆಮ್ ಆದ್ಮಿ ಪಕ್ಷದಿಂದ ಮುನ್ಸಿಪಲ್ ಚುನಾವಣೆಗೆ ಸ್ಪರ್ಧಿಸಿದ್ದ ಈಕೆ, ವೃತ್ತಿಯಲ್ಲಿ ಮೆಡಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಳು. ರಾಜ್‌ಕೋಟ್‌ನ ವಾವ್ದಿ ವಲಯದ ಬಾಡಿಗೆ ಮನೆಯೊಂದರಲ್ಲಿ ನಂದಿನಿಯ ಶವ ಪತ್ತೆಯಾಗಿದೆ. ಆಕೆಯು ಅಸ್ಲಂ ಸಾಮ (Aslam Sama) ಎಂಬಾತನ ಜೊತೆ ಕೆಲವು ವರ್ಷಗಳಿಂದ ಪರಿಚಯ ಹೊಂದಿದ್ದು, ಆತನೊಂದಿಗೇ ಲೀವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದಳು.

ಪ್ರೀತಿ, ಮನೆಯವರ ವಿರೋಧ ಮತ್ತು ನರಕಯಾತನೆ

ಮೆಡಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ನಂದಿನಿಗೆ ಮುಸ್ಲಿಂ ಸಮುದಾಯದ ಅಸ್ಲಂ ಸಾಮ ಪರಿಚಯವಾಗಿತ್ತು. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು. ಈ ಸಂಬಂಧಕ್ಕೆ ನಂದಿನಿ ಮನೆಯವರಿಂದ ತೀವ್ರ ವಿರೋಧವಿತ್ತು. ಆದರೂ, ವಿರೋಧದ ನಡುವೆಯೇ ಆಕೆ ಅಸ್ಲಂ ಜೊತೆ ಲೀವ್-ಇನ್ ರಿಲೇಶನ್‌ಶಿಪ್ ಮುಂದುವರೆಸಿದ್ದಳು. Read this also : ಕೈಯಾದರೂ ಹೇಗೆ ಬಂತಮ್ಮಾ? ಗಂಡನ ಮೇಲಿನ ಸಿಟ್ಟಿಗೆ ಇಬ್ಬರು ಮುದ್ದು ಮಕ್ಕಳನ್ನೇ ಬಲಿಪಡೆದ ತಾಯಿ!

ದಿನಕಳೆದಂತೆ ಅಸ್ಲಂನ ನೈಜ ಮುಖ ಬಯಲಾಗಿತ್ತು. ದೈಹಿಕ ಹಾಗೂ ಮಾನಸಿಕ ಹಲ್ಲೆಗಳಿಂದ ನಂದಿನಿ ಸಂಪೂರ್ಣವಾಗಿ ಕುಗ್ಗಿಹೋಗಿದ್ದಳು. ಇತ್ತ ಮನೆಯವರ ವಿರೋಧ ಕಟ್ಟಿಕೊಂಡು ತವರಿಗೆ ಮರಳಲಾಗದೆ, ಅತ್ತ ಅಸ್ಲಂನ ಕಿರುಕುಳ ಸಹಿಸಲಾಗದೆ ಆಕೆ ತೀವ್ರವಾಗಿ ಒದ್ದಾಡುತ್ತಿದ್ದಳು. ಗಮನಾರ್ಹ ವಿಚಾರವೆಂದರೆ, ಸಾವಿಗೂ ಕೆಲವೇ ದಿನಗಳ ಮುನ್ನ ನಂದಿನಿ (Rajkot Nandani Bosamiya Death case)  ತನಗೆ ಅಸ್ಲಂ ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಿದ್ದಳು ಎಂದು ಪೋಷಕರು ಮಾಹಿತಿ ನೀಡಿದ್ದಾರೆ.

ಕುಟುಂಬಸ್ಥರ ಗಂಭೀರ ಆರೋಪ: “ಇದು ಲವ್ ಜಿಹಾದ್ ಹಾಗೂ ಕೊಲೆ”

ನಂದಿನಿ ಸಾವು ಆತ್ಮಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಆಕೆಯ ಕುಟುಂಬಸ್ಥರು ನೇರವಾಗಿ ಆರೋಪಿಸಿದ್ದಾರೆ. ನಂದಿನಿ ತನ್ನ ಬದುಕನ್ನು ತಾನೇ ಅಂತ್ಯಗೊಳಿಸುವಂತಹ ಹೇಡಿ ಹೆಣ್ಣಲ್ಲ. ಇಷ್ಟು ದಿನ ಆತನ ದೈಹಿಕ ಹಲ್ಲೆ, ಮಾನಸಿಕ ನೋವನ್ನು ಸಹಿಸಿಕೊಂಡು ಬದುಕಿದ್ದಳು. ಇದೀಗ ಇದ್ದಕ್ಕಿದ್ದಂತೆ ಈ ರೀತಿ ಸಾವನ್ನಪ್ಪಲು ಸಾಧ್ಯವೇ ಇಲ್ಲ. ಇದು ಕೇವಲ ಲವ್ ಜಿಹಾದ್ ಮಾತ್ರವಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ನಂದಿನಿಯ ಸಹೋದರಿ ರೂಪಾಲ್ ಬೊಸಮಿಯಾ ಆರೋಪಿಸಿದ್ದಾರೆ.

Former AAP candidate Nandani Bosamiya found dead in a rented house in Rajkot as police investigate the case.

ಅಸ್ಲಂ ಮತ್ತು ಆತನ ಪೋಷಕರು ಸೇರಿ ನಂದಿನಿ ಮೇಲೆ (Rajkot Nandani Bosamiya Death case)  ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಆಕೆಯ ದೇಹದ ಮೇಲೆ ಹಲವು ಗಾಯದ ಗುರುತುಗಳು ಸ್ಪಷ್ಟವಾಗಿ ಕಾಣುತ್ತಿವೆ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಾ ದೂರಿದ್ದಾರೆ.

ಮುಂದೇನು? ಚುರುಕುಗೊಂಡ ಪೊಲೀಸ್ ತನಿಖೆ

ರಾಜ್‌ಕೋಟ್‌ನ ಬಾಡಿಗೆ ಮನೆಯಲ್ಲಿ ಅಸ್ಲಂ ಹಾಗೂ ನಂದಿನಿ ಒಟ್ಟಿಗೆ ವಾಸವಿದ್ದರು. ಇದೀಗ ಅದೇ ಮನೆಯಲ್ಲಿ ನಂದಿನಿ ಶವ ಪತ್ತೆಯಾಗಿದೆ. ಘಟನೆಯ ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, (Rajkot Nandani Bosamiya Death case)  ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ (Post-mortem) ಕಳುಹಿಸಿದ್ದಾರೆ. ಪೋಸ್ಟ್‌ಮಾರ್ಟಮ್ ವರದಿ ಬಂದ ಬಳಿಕವಷ್ಟೇ ನಂದಿನಿಯ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ನಿಖರ ಮಾಹಿತಿ ಹೊರಬೀಳಬೇಕಿದೆ. ಸದ್ಯ ಪೊಲೀಸರು ಅಸ್ಲಂ ಮತ್ತು ಆತನ ಕುಟುಂಬದ ವಿರುದ್ಧ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top