ಪುರಾಣಗಳ ಪ್ರಕಾರ ಗಣಪನಿಗೂ ಹಾಗೂ ಹಾವಿಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಕಥೆಗಳ ಪ್ರಕಾರ ಗಣೇಶ ಹಬ್ಬಕ್ಕೆ ಬಂದಾಗ ಅಜ್ಜಿ ಮನೆಯಲ್ಲಿ ಮೊಮ್ಮನಿಗೆ ಮಾಡಿದಂತಹ ಲಾಡು, ಕಡುಬು, ಕರ್ಜಿಕಾಯಿ ಸೇರಿದಂತೆ ವಿವಿಧ ಬಗೆಯ ತಿಂಡಿಗಳನ್ನು ತಿಂದು ಹೊಟ್ಟೆ ತುಂಬಿ ನಡೆಯಲಾಗದೆ ತನ್ನ ಹೊಟ್ಟೆಗೆ ಹಾವನ್ನು ಹಗ್ಗದಂತೆ ಕಟ್ಟಿ ನಡೆದಾಡಿದ ಎಂದು ಹೇಳಲಾಗಿದೆ. ಈ ಸಮಯದಲ್ಲಿ ನಡೆಯಲಾಗೆ ಕೆಳಗೆ ಬಿದ್ದ ಗಣಪನನ್ನು ಚಂದ್ರ ನೋಡಿ ನಕ್ಕಿದ ಎಂದು ಆತನಿಗೆ ಶಾಪ ಕೊಟ್ಟ ಎಂದೂ ಸಹ ಕಥೆಗಳಲ್ಲಿ ಕೇಳಬಹುದಾಗಿದೆ. ಇದೆಲ್ಲಾ ಇರಲಿ, ಇದೀಗ ನಾವು ಹೇಳೋಕೆ ಹೊರಟಿರೋದು ತಿರುಪತಿಯಲ್ಲಿ ನಡೆದ ಘಟನೆಯ ಬಗ್ಗೆ, ಅಷ್ಟಕ್ಕೂ ತಿರುಪತಿಯಲ್ಲಿ ನಡೆದಿದ್ದು ಏನು ಎಂಬ ವಿಚಾರಕ್ಕೆ ಬಂದರೇ,
ಆಂಧ್ರದ ತಿರುಪತಿಯಲ್ಲಿ ಗಣೇಶ ಚತುರ್ಥಿ (Ganesha Ustava) ಅಂಗವಾಗಿ ಗಣೇಶ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿತ್ತು. ಪೆಂಡಾಲ್ ಒಂದರ ಕೆಳಗೆ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿದ್ದು, ಅಲ್ಲಿಗೆ ನಾಗರ ಹಾವೊಂದು ಬಂದಿದೆ. ಗಣೇಶನ ದೇಹ ಮೇಲೆಲ್ಲಾ ಓಡಾಡಿದೆ. ಗಣೇಶನ ಕುತ್ತಿಗೆಯಿಂದ ಕೆಳಗೆ ಬಂದು, ಗಣೇಶ ಕತ್ತಿನ ಸುತ್ತಲೂ ಸುತ್ತಾಡಿ ಬಳಿಕ ಹೊಟ್ಟೆಯಿಂದ ಕೆಳಗೆ ಇಳಿದು ಓಡಾಡಿದೆ. ಈ ಅಪರೂಪದ ದೃಶ್ಯವನ್ನು ಅಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://www.instagram.com/reel/C_nJMDByEMD/
ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲಿ ವೈರಲ್ ಆಗಿದ್ದು, ಮೂರು ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ವಿಡಿಯೋದಲ್ಲಿ ನಾಗರಹಾವು ಗಣೇಶನ ಮೈಮೇಲೆ ಹೇಗೆಲ್ಲಾ ಓಡಾಡಿದೆ ಎಂಬುದನ್ನು ಕಾಣಬಹುದಾಗಿದೆ. ವಿಡಿಯೋ ನೋಡಿದ ಅನೇಕರು ಆಶ್ಚರ್ಯ ವ್ಯಕ್ತಪಡಿಸಿ ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ಪೈಕಿ ಓರ್ವ ನೆಟ್ಟಿಗ ಹಾವು ಹಾಗೂ ಗಣೇಶನ ನಡುವೆ ಇರುವಂತಹ ಆಧ್ಯಾತ್ಮಿಕ ಸಂಬಂಧದ ಕುರಿತು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅನೇಕರ ವಿವಿಧ ರೀತಿಯ ಎಮೋಜಿಗಳನ್ನು ಸಹ ಹಂಚಿಕೊಂಡು ವಿಡಿಯೋವನ್ನು ಮತಷ್ಟು ವೈರಲ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಗಣೇಶ ಕುತ್ತಿಗೆಯಲ್ಲಿ ನಾಗರ ಹಾವೊಂದು ಹೆಡೆ ಎತ್ತಿ ಶಿವನ ಕೊರಳಿನಲ್ಲಿರುವಂತೆ ಕಾಣಿಸಿಕೊಂಡಿತ್ತು. ಈ ವಿಡಿಯೋ ಸಹ ವೈರಲ್ ಆಗಿತ್ತು.