ಸಾಮಾನ್ಯವಾಗಿ ಹಾವು ಅಂದ್ರೆ ಸಾಕು, ಎಂಥವರಿಗಾದ್ರೂ ಎದೆ ಝಲ್ ಎನ್ನುತ್ತೆ. ಒಂದೇ ಒಂದು ಹಾವನ್ನು ಕಂಡರೆ ಸಾಕು ನಾವು ಮಾರುದ್ದ ಓಡ್ತೀವಿ. ಅಂತದ್ರಲ್ಲಿ ಈ ಮಹಿಳೆ ಏಕಕಾಲದಲ್ಲಿ ಮೂರು ಹಾವುಗಳನ್ನು ಅದೆಷ್ಟು ಸಲೀಸಾಗಿ ಹಿಡಿದಿದ್ದಾರೆ ಗೊತ್ತಾ? ಈ ವಿಡಿಯೋ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ!

ಮಳೆಗಾಲ ಮತ್ತು ಚಳಿಗಾಲ ಬಂತೆಂದರೆ ಸಾಕು, ಹಾವುಗಳು ಬೆಚ್ಚಗಿನ ಜಾಗ ಹುಡುಕಿಕೊಂಡು ಜನವಸತಿ ಪ್ರದೇಶಗಳಿಗೆ ಬರುವುದು ಸಾಮಾನ್ಯ. ಆದರೆ ಮಹಾರಾಷ್ಟ್ರದ ಘಟನೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಬನ್ನಿ ಏನದು ಘಟನೆ ಅಂತ ನೋಡೋಣ.
Video – ವರ್ಕ್‌ಶಾಪ್‌ನಲ್ಲಿ ಪ್ರತ್ಯಕ್ಷವಾಯ್ತು 3 ಹಾವುಗಳು!
ಮಹಾರಾಷ್ಟ್ರದ ವರ್ಕ್‌ಶಾಪ್ ಒಂದರಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಅಲ್ಲಿ ಹಾವುಗಳು ಕಾಣಿಸಿಕೊಂಡಿವೆ. ಒಂದು ಅಥವಾ ಎರಡು ಹಾವಾಗಿದ್ದರೆ ಪರವಾಗಿಲ್ಲ, ಆದರೆ ಅಲ್ಲಿ ಏಕಕಾಲದಲ್ಲಿ ಬರೋಬ್ಬರಿ ಮೂರು ಹಾವುಗಳು ಪ್ರತ್ಯಕ್ಷವಾಗಿವೆ! ಒಂದೇ ಕಡೆ ಮೂರು ಹಾವುಗಳನ್ನು ಕಂಡು ಬೆಚ್ಚಿಬಿದ್ದ ಕಾರ್ಮಿಕರು, ಪ್ರಾಣಭಯದಿಂದ ಅಲ್ಲಿಂದ ಕಾಲ್ಕಿತ್ತಿದ್ದಾರೆ. ತಕ್ಷಣವೇ ವರ್ಕ್‌ಶಾಪ್ ಮಾಲೀಕರಿಗೆ ವಿಷಯ ತಿಳಿಸಿ, ಸ್ಥಳೀಯ ‘ಸ್ನೇಕ್ ಕ್ಯಾಚರ್’ (ಹಾವು ಹಿಡಿಯುವವರು) ಶಿವಾನಿ ಅವರಿಗೆ ಮಾಹಿತಿ ನೀಡಿದ್ದಾರೆ.
Video – ಪಬ್ಲಿಕ್ ಫಿದಾ ಆದ ಸಾಹಸ
ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ದಾವಿಸಿದ ಶಿವಾನಿ, ಕಿಂಚಿತ್ತೂ ಭಯಪಡದೆ ಆ ಮೂರೂ ಹಾವುಗಳನ್ನು ಅತ್ಯಂತ ಚಾಕಚಕ್ಯತೆಯಿಂದ ಹಿಡಿದಿದ್ದಾರೆ. ಬಳಿಕ ಅವುಗಳನ್ನು ಸುರಕ್ಷಿತವಾಗಿ ಸಮೀಪದ ಕಾಡಿಗೆ ಬಿಟ್ಟಿದ್ದಾರೆ. ಶಿವಾನಿ ಅವರು ಹಾವುಗಳನ್ನು ಹಿಡಿಯುವ ದೃಶ್ಯವನ್ನು ಅಲ್ಲಿದ್ದ ಕಾರ್ಮಿಕರು ಮತ್ತು ಗ್ರಾಮಸ್ಥರು ಕುತೂಹಲದಿಂದ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಈ ರೋಚಕ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದ್ದು, “ಅಬ್ಬಬ್ಬಾ.. ಈ ಅಕ್ಕನ ಧೈರ್ಯಕ್ಕೆ ಮೆಚ್ಚಲೇಬೇಕು” ಎಂದು ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. Read this also : ವಿಷ ಸರ್ಪ ಕಚ್ಚಿದರೂ, ಭಯಪಡದೇ ಅದನ್ನೇ ಹಿಡಿದು ಹೋಗಿ ಪ್ರಾಣ ಉಳಿಸಿಕೊಂಡ ಭೂಪ…!

Video – ಒಂದೇ ಕಡೆ ಇಷ್ಟೊಂದು ಹಾವುಗಳು ಸೇರೋದು ಯಾಕೆ?
ಈ ಬಗ್ಗೆ ಸ್ವತಃ ಸ್ನೇಕ್ ಕ್ಯಾಚರ್ ಶಿವಾನಿ ಅವರೇ ಉತ್ತರಿಸಿದ್ದಾರೆ. “ಸಾಮಾನ್ಯವಾಗಿ ಅಕ್ಟೋಬರ್ ನಿಂದ ಫೆಬ್ರವರಿ ವರೆಗೆ ಹಾವುಗಳ ಮಿಲನ ಕಾಲ (Mating Season). ಈ ಸಮಯದಲ್ಲಿ ಹೆಣ್ಣು ಹಾವಿನ ವಾಸನೆಯನ್ನು ಅರಿತು ಗಂಡು ಹಾವುಗಳು ಹಿಂಬಾಲಿಸಿಕೊಂಡು ಬರುತ್ತವೆ. ಹೀಗಾಗಿ ಒಂದೇ ಕಡೆ ಹೆಚ್ಚು ಹಾವುಗಳು ಗುಂಪಾಗಿ ಕಾಣಿಸಿಕೊಳ್ಳುವುದು ಸಹಜ,” ಎಂದು ಅವರು ತಿಳಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಎಚ್ಚರಿಕೆ: ಇದು ಹಾವುಗಳು ಹೆಚ್ಚಾಗಿ ಓಡಾಡುವ ಸಮಯವಾಗಿರುವುದರಿಂದ, ಜನರು ಕತ್ತಲಾದ ಜಾಗಗಳಿಗೆ, ಗುಹೆಗಳಂತಹ ಪ್ರದೇಶಗಳಿಗೆ ಅಥವಾ ಪೊದೆಗಳ ಬಳಿ ಹೋಗುವಾಗ ತುಂಬಾ ಜಾಗರೂಕರಾಗಿರಬೇಕು ಎಂದು ಶಿವಾನಿ ಎಚ್ಚರಿಸಿದ್ದಾರೆ.
