Emotional Incident : ಮರಿಯನ್ನು ಕಳೆದುಕೊಂಡ ನೋವಿನಲ್ಲಿ ಮಗುವನ್ನೇ ಅಪ್ಪಿಕೊಂಡ ‘ತಾಯಿ’ ಮಂಗ! ಮುಜಾಫರ್‌ನಗರದ ಈ ಘಟನೆ ಕೇಳಿದ್ರೆ ಕಣ್ಣೀರು ಬರುತ್ತೆ

ತಾಯ್ತನಕ್ಕೆ ಮನುಷ್ಯ-ಪ್ರಾಣಿ ಎಂಬ ಭೇದವಿಲ್ಲ ಎಂಬ ಮಾತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಒಂದು ವಿಚಿತ್ರ ಹಾಗೂ ಮನಕಲಕುವ (Emotional Incident) ಘಟನೆ ನಡೆದಿದೆ. ತನ್ನ ಮರಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಹೆಣ್ಣು ಮಂಗವೊಂದು, ಮೂರು ತಿಂಗಳ ಮಗುವನ್ನು ಎತ್ತಿಕೊಂಡು ಸುಮಾರು ಎರಡು ಗಂಟೆಗಳ ಕಾಲ ತನ್ನ ಬಳಿಯೇ ಇಟ್ಟುಕೊಂಡ ಅಪರೂಪದ ದೃಶ್ಯ ಕಂಡುಬಂದಿದೆ.

Emotional incident where a monkey holds a human baby in Muzaffarnagar

Emotional Incident – ಏನಿದು ಘಟನೆ?

ಮುಜಾಫರ್‌ನಗರ ಜಿಲ್ಲಾ ಕೇಂದ್ರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಚಾರ್ತಾವಲ್ ಪಟ್ಟಣದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಗುಲಿಸ್ತಾ ಎಂಬುವವರ ಮೂರು ತಿಂಗಳ ಗಂಡು ಮಗು ಮನೆಯ ಕೋಣೆಯಲ್ಲಿ ಮಲಗಿತ್ತು. ಮನೆಯವರೆಲ್ಲಾ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ, ಮಧ್ಯಾಹ್ನ ಸುಮಾರು 2 ಗಂಟೆಗೆ ಛಾವಣಿಯ ಮೂಲಕ ಮನೆಯೊಳಗೆ (Emotional Incident) ನುಗ್ಗಿದ ಹೆಣ್ಣು ಮಂಗವೊಂದು ಮಗುವಿನ ಹತ್ತಿರ ಹೋಗಿ ಕುಳಿತಿದೆ. ಸಾಮಾನ್ಯವಾಗಿ ಕೋತಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಅಥವಾ ಆಹಾರಕ್ಕಾಗಿ ಕಿರಿಕಿರಿ ನೀಡುತ್ತವೆ. ಆದರೆ, ಇಲ್ಲಿ ನಡೆದಿದ್ದೇ ಬೇರೆ. ಆ ಮಂಗ ಮಗುವನ್ನು ಅಪ್ಪಿಕೊಂಡು, ಮುದ್ದಾಡಲು ಶುರುಮಾಡಿದೆ. ಮಗುವಿನ ಅಳು ಕೇಳಿ ತಾಯಿ ಗುಲಿಸ್ತಾ ಓಡಿ ಬಂದಾಗ, ಮಂಗವು ಮಗುವಿನ ಪಕ್ಕದಲ್ಲಿ ಕುಳಿತಿರುವುದನ್ನು ಕಂಡು ಆತಂಕಗೊಂಡಿದ್ದಾರೆ.

ರಕ್ಷಣೆಗೆ ಬಂದವರಿಗೆ ಮಂಗನ ಪ್ರತಿರೋಧ!

ಮನೆಯವರ ಕಿರುಚಾಟ ಕೇಳಿ ನೆರೆಹೊರೆಯವರು ಓಡಿ ಬಂದಿದ್ದಾರೆ. ಕೋಲನ್ನು ತೋರಿಸಿ ಅಥವಾ ಆಹಾರ ನೀಡಿ ಮಂಗನನ್ನು ಮಗುವಿನಿಂದ ದೂರ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, (Emotional Incident) ಮಂಗವು ಮಗುವನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಯಾರಾದರೂ ಹತ್ತಿರ ಬಂದರೆ ಅವರ ಮೇಲೆ ದಾಳಿ ಮಾಡಲು ಮುಂದಾಗುತ್ತಿತ್ತು. ಮಗು ಮಂಗನ ಬಳಿಯೇ ಇದ್ದಿದ್ದರಿಂದ ಜನರಿಗೂ ಏನು ಮಾಡಬೇಕೆಂದು ತೋಚದೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. Read this also : ಸಾಕ್ಷಾತ್ ಆಂಜನೇಯನೇ ಬಂದು ಕಾಪಾಡಿದನೇ? ಯುವಕನ ಪ್ರಾಣ ಉಳಿಸಿದ ವಾನರನ ಸಮಯಪ್ರಜ್ಞೆ!

ಮೊಬೈಲ್ ವಿಡಿಯೋ ತೋರಿಸಿ ಮಗುವಿನ ರಕ್ಷಣೆ

ಕೊನೆಗೆ ಪ್ರಾಣಿ ರಕ್ಷಕ ಸನ್ನಿ ಚೋಪ್ರಾ (Emotional Incident) ಅವರ ತಂಡ ಸ್ಥಳಕ್ಕೆ ಆಗಮಿಸಿತು. ಮಂಗನಿಗೆ ಆಹಾರ ತೋರಿಸಿದರೂ ಅದು ಮಗುವನ್ನು ಬಿಡಲಿಲ್ಲ. ಆಗ ಸನ್ನಿ ಚೋಪ್ರಾ ಅವರು ಒಂದು ಉಪಾಯ ಮಾಡಿದರು. ಮೊಬೈಲ್‌ನಲ್ಲಿ ವನ್ಯಜೀವಿಗಳ (Wildlife) ವಿಡಿಯೋಗಳನ್ನು ಪ್ಲೇ ಮಾಡಿ ಮಂಗನಿಗೆ ತೋರಿಸಿದರು. ವಿಡಿಯೋ ನೋಡುವ ಭರದಲ್ಲಿ ಮಂಗನ ಗಮನ ಬೇರೆಡೆಗೆ ಸರಿದಾಗ, ರಕ್ಷಣಾ ತಂಡದವರು ಅತ್ಯಂತ ಚಾಕಚಕ್ಯತೆಯಿಂದ ಮಗುವನ್ನು ಮಂಗನಿಂದ ದೂರ ಎಳೆದು ರಕ್ಷಿಸುವಲ್ಲಿ ಯಶಸ್ವಿಯಾದರು.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

Emotional incident where a monkey holds a human baby in Muzaffarnagar

ಮರಿಯನ್ನು ಕಳೆದುಕೊಂಡಿದ್ದೇ ಈ ವರ್ತನೆಗೆ ಕಾರಣವೇ?

ಮಗುವನ್ನು ರಕ್ಷಿಸಿದ ಬಳಿಕ ತಿಳಿದುಬಂದ ವಿಷಯವೇನೆಂದರೆ, ಆ ಹೆಣ್ಣು ಮಂಗ ಕೇವಲ ಆರು ದಿನಗಳ ಹಿಂದಷ್ಟೇ ತನ್ನ ಮರಿಯನ್ನು ಕಳೆದುಕೊಂಡಿತ್ತು. ತನ್ನ ಮರಿಯನ್ನು (Emotional Incident) ಕಳೆದುಕೊಂಡ ದುಃಖದಲ್ಲಿದ್ದ ಆ ಪ್ರಾಣಿ, ಮನುಷ್ಯನ ಮಗುವನ್ನೇ ತನ್ನ ಮರಿ ಎಂದು ಭಾವಿಸಿ ಪ್ರೀತಿಯಿಂದ ಅಪ್ಪಿಕೊಂಡಿತ್ತು ಎಂದು ಪ್ರಾಣಿ ರಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಅದೃಷ್ಟವಶಾತ್, ಎರಡು ಗಂಟೆಗಳ ಕಾಲ ಮಂಗನ ಬಳಿಯೇ ಇದ್ದರೂ ಮಗುವಿಗೆ ಯಾವುದೇ ಗಾಯಗಳಾಗಿಲ್ಲ.

ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಾಣಿಗಳಿಗೂ ಭಾವನೆ ಇರುತ್ತದೆ ಎಂಬುದಕ್ಕೆ ಇದೊಂದು ದೊಡ್ಡ ಉದಾಹರಣೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top