ಭಾರತದಲ್ಲಿ ಆಧಾರ್ ಕಾರ್ಡ್ ಎಷ್ಟು ಅಗತ್ಯವೋ ಅಷ್ಟೇ ಪ್ಯಾನ್ ಸಹ ಅಗತ್ಯವಾಗಿದೆ. ಅದರಲ್ಲೂ ಹಣಕಾಸು ಸಂಬಂಧಿತ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯವಾಗಿದೆ. ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ಹೂಡಿಕೆ, (E-PAN) ಹಣಕಾಸು ಸೇವೆಗಳಿಗೆ ಪ್ಯಾನ್ ಕಾರ್ಡ್ ಬೇಕಿದೆ. ಈ ಪ್ಯಾನ್ ಅಂದರೇ ಪರ್ಮನೆಂಟ್ ಅಕೌಂಟ್ ನಂಬರ್ ನಲ್ಲಿ ಅಕ್ಷರ ಹಾಗೂ ಸಂಖ್ಯೆಗಳ ಮಿಶ್ರಿತ 10 ಅಂಕಿಗಳಿರುತ್ತವೆ. ಆದಾಯ ತೆರಿಗೆಯನ್ನು ಸುಗಮಗೊಳಿಸಲು ಈ ಪ್ಯಾನ್ ರೂಪಿಸಲಾಗಿದೆ ಎಂದು ಹೇಳಬಹುದಾಗಿದೆ. ಇದೀಗ ಸುಲಭವಾಗಿ ಹಾಗೂ ಉಚಿತವಾಗಿ ಇ-ಪ್ಯಾನ್ (E-PAN) ಪಡೆದುಕೊಳ್ಳುವುದು ಹೇಗೆ ಎಂಬುದುನ್ನು ಮುಂದೆ ತಿಳಿಯೋಣ.

ಈ ಹಿಂದೆ ಪ್ಯಾನ್ ಕಾರ್ಡ್ ಮಾಡಿಸುವುದು ತುಂಬಾನೆ ಕಷ್ಟವಾಗಿತ್ತು. (E-PAN)ಗ್ರಾಮೀಣ ಭಾಗದ ಜನರಿಗಂತೂ ಮತಷ್ಟು ಕಠಿಣವಾಗಿತ್ತು ಎಂದೇ ಹೇಳಲಾಗಿತ್ತು. ಇದೀಗ ಸುಲಭವಾಗಿ ಪ್ಯಾನ್ ಕಾರ್ಡ್ ಮಾಡಿಸಬಹುದಾಗಿದೆ. ಸಾಮಾನ್ಯ ಪಾನ್ ಕಾರ್ಡ್ ಮಾಡಿಸಿದರೇ ಕೆಲವು ದಿನಗಳು ಕಾಯಬೇಕಾಗುತ್ತದೆ. ಆದರೆ ಶೀಘ್ರವಾಗಿ ಪ್ಯಾನ್ ಕಾರ್ಡ್ ಪಡೆಯಲು ಸರ್ಕಾರ ಇ-ಪ್ಯಾನ್ ವ್ಯವಸ್ಥೆಯನ್ನು ಜಾರಿಮಾಡಿದೆ. ಈ ಪ್ಯಾನ್ ಕಾರ್ಡ್ ಸಾಮಾನ್ಯ ಪ್ಯಾನ್ (E-PAN) ಕಾರ್ಡ್‌ನಂತೆಯೇ ಮೌಲ್ಯ ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಎಲ್ಲದಕ್ಕೂ ಪ್ಯಾನ್ ಕಾರ್ಡ್ (E-PAN) ಬಳಸಬಹುದಾಗಿದೆ.

ಇನ್ನೂ ತಾವು ಇ-ಪ್ಯಾನ್ (E-PAN) ಮಾಡಿಸಲು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಬಳಸಿ ತತ್ ಕ್ಷಣವೇ ಪ್ಯಾನ್ ನಂಬರ್ ದೊರೆಯುತ್ತದೆ. ಪಿಡಿಎಫ್ ರೂಪದಲ್ಲಿ ಪ್ಯಾನ್ ಕಾರ್ಡ್ (E-PAN)ದೊರೆಯುತ್ತದೆ. ಇದಕ್ಕೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ತಮ್ಮ ಆಧಾರ್ ಕಾರ್ಡ್‌ಗೆ (E-PAN)ಮೊಬೈಲ್ ನಂಬರ್ ಲಿಂಕ್ ಆಗಿದ್ದರೇ ಸಾಕು ತಾವು ಸುಲಭವಾಗಿ ಹಾಗೂ ಉಚಿತವಾಗಿ ಇ-ಪ್ಯಾನ್ ಪಡೆಯಬಹುದು. ಇನ್ನೂ ಪ್ಯಾನ್ ನಂಬರ್ ಕಳೆದುಕೊಂಡವರು (E-PAN) ಪ್ಯಾನ್ ಮರು ಮುದ್ರಣ ಪಡೆಯಬಹುದು. ಒಮ್ಮೆಯೂ ಪ್ಯಾನ್ ಕಾರ್ಡ್ ಮಾಡಿಸದೇ ಇರುವಂತವರು ಇ ಪ್ಯಾನ್ ಪಡೆಯಬಹುದು. ಇ-ಪ್ಯಾನ್ ಪಡೆಯುವಂತಹವರು ಒಮ್ಮೆ ಆದಾಯ ತೆರಿಗೆ ಇಲಾಖೆಯ ನಿಬಂಧನೆಗಳನ್ನು ಓದಿ ತಿಳಿದುಕೊಳ್ಳುವುದು ಸೂಕ್ತ.

ಇನ್ನೂ ಆನ್ ಲೈನ್ ನಲ್ಲಿ ಇ-ಪ್ಯಾನ್ (E-PAN) ಪಡೆಯಲು ಈ ಸುಲಭ ಮಾರ್ಗ ಅನುಸರಿಸಿ:
- ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ ಸೈಟ್ ಗೆ ಹೋಗಿ: incometax.gov.in/iec/foportal/
- ಈ ಪೋರ್ಟಲ್ನಲ್ಲಿ ಮುಖ್ಯಪುಟದಲ್ಲಿ ಕಾಣುವ ‘ಇನ್ಸ್ಟೆಂಟ್ ಇ-ಪ್ಯಾನ್’ ಆಯ್ಕೆ ಮಾಡಿ.
- ‘ಗೆಟ್ ನ್ಯೂ ಇ-ಪ್ಯಾನ್’ ಪೇಜ್ ಒಪೆನ್ ಆಗುತ್ತದೆ. ಅಲ್ಲಿ ನೀವು ನಿಮ್ಮ 12 ಅಂಕಿಗಳ ಆಧಾರ್ ನಂಬರ್ ಅನ್ನು ನಮೂದಿಸಿ.
- ಚೆಕ್ ಬಾಕ್ಸ್ ಟಿಕ್ ಮಾಡಿ, ಬಳಿಕ ‘ಕಂಟಿನ್ಯೂ’ ಕ್ಲಿಕ್ ಮಾಡಿರಿ.
- ಬಳಿಕ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಆ ಸಂಖ್ಯೆಯನ್ನು ನಮೂದಿಸಿ.
- ಈಗ ಯುಐಡಿಎಐನಲ್ಲಿ ನಿಮ್ಮ ಆಧಾರ್ ವಿವರವನ್ನು ಪರಾಮರ್ಶಿಸಲು ಅನುಮತಿ ಕೇಳುತ್ತದೆ. ಆ ಚೆಕ್ ಬಾಕ್ಸ್ ಟಿಕ್ ಮಾಡಿ. ‘ಕಂಟಿನ್ಯೂ’ ಕ್ಲಿಕ್ ಮಾಡಿ
- ಅಂತಿಮವಾಗಿ ನೀವು ಸಬ್ಮಿಟ್ ಮಾಡಿದಾಗ ಪ್ರಕ್ರಿಯೆ ಮುಕ್ತಾಯವಾದಂತೆ. ನಿಮಗೆ ಅಕ್ನಾಲೆಜ್ಮೆಂಟ್ ನಂಬರ್ ಬರುತ್ತದೆ. ಅದನ್ನು ಉಳಿಸಿಟ್ಟುಕೊಂಡಿರಿ. ನಿಮ್ಮ ಮೊಬೈಲ್ ನಂಬರ್ಗೆ ಕನ್ಫರ್ಮೆಸನ್ ಮೆಸೇಜ್ ಕೂಡ ಬರುತ್ತದೆ. ಬಳಿಕ ನಿಮ್ಮ ಇ-ಪ್ಯಾನ್ ಪಡೆದುಕೊಳ್ಳಬಹುದು.