ನಮಸ್ಕಾರ ದೇವ್ರೂ ಎಂದ ಕೂಡಲೇ ನೆನಪಿಗೆ ಬರೋದು ಕನ್ನಡದ ಖ್ಯಾತ ಯೂಟ್ಯೂಬರ್ (Dr Bro) ಡಾ.ಬ್ರೋ. ವಿಶ್ವದ ಅನೇಕ ದೇಶಗಳನ್ನು ಸುತ್ತಿ ಅಲ್ಲಿನ ವಿಚಾರಗಳು, ಪ್ರವಾಸಿ ತಾಣಗಳ ಬಗ್ಗೆ ಕನ್ನಡದಲ್ಲಿ ತಿಳಿಸಿಕೊಡುವಂತಹ ಡಾ.ಬ್ರೋ ಎಲ್ಲರ ಮನೆ ಮಾತಾಗಿದ್ದಾರೆ. ಇದೀಗ ಅವರು ನೈಜೀರಿಯಾ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ (Dr Bro) ಡಾ.ಬ್ರೋ ನೈಜೀರಿಯಾದ ಸ್ಲಂ ಮಕ್ಕಳಿಗೆ ಕನ್ನಡ ಭಾಷೆಯ ಪಾಠ ಮಾಡಿದ್ದಾರೆ. ಈ ಸಂಬಂಧ ವಿಡಿಯೋಗಳನ್ನು ಡಾ.ಬ್ರೋ ತಮ್ಮ ಸೋಷಿಯಲ್ ಮಿಡಿಯಾ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಡಾ. ಬ್ರೋ ವಿದೇಶದಲ್ಲಿ ಕನ್ನಡ ಪ್ರೇಮ ಸಾರಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ (Dr Bro) ಸದ್ಯ ನೈಜೀರಿಯಾ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಡಾ ಬ್ರೋ ನೈಜೀರಿಯಾದ ಅತಿ ದೊಡ್ಡ ಸ್ಲಂ ಪ್ರದೇಶಕ್ಕೆ ತೆರಳಿದಿದ್ದಾರೆ. ಅಲ್ಲಿನ ಶಾಲೆಯೊಂದಕ್ಕೆ ಭೇಟಿ ನೀಡಿ, ಅಲ್ಲಿದ್ದ ಮಕ್ಕಳಿಗೆ ನಮ್ಮ ದೇಶ ಹಾಗೂ ರಾಜ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ಸಮಯದಲ್ಲಿ ನೈಜೀರಿಯಾದ ಮಕ್ಕಳಿಗೆ (Dr Bro)ಕನ್ನಡ ಭಾಷೆಯನ್ನು ಭಾರತದ ರಾಷ್ಟ್ರ ಭಾಷೆಯೆಂದು ಹೇಳಿ, ಕನ್ನಡದಲ್ಲಿಯೇ ಪಾಠ ಮಾಡಿದ್ದಾರೆ. ಈ ವಿಡಿಯೋ ವಿವಿಧ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಡಿ ಬಾಸ್ ಎಂಬ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಒಂದು ನಿಮಿಷದಲ್ಲೇ ಶಾಕ್ ಕೊಟ್ರಲ್ಲಾ ದೇವ್ರು ಎಂದು ಟೈಟಲ್ ಹಾಕಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಡಾ ಬ್ರೋ ಎಂದೇ ಕರೆಯಲಾಗುವ ಗಗನ್ ಶ್ರೀನಿವಾಸ್ ನೈಜೀರಿಯಾದ ಶಾಲೆಗಳಿಗೆ ಭೇಟಿ ನೀಡಿರುವುದನ್ನು ಕಾಣಬಹುದು. ವಿಡಿಯೋದ ಆರಂಭದಲ್ಲಿ ನಮ್ಮ ದೇಶ ಹಾಗೂ ರಾಜ್ಯದ ಬಗ್ಗೆ ಮಾತನಾಡಿದ್ದಾರೆ. ಬಳಿಕ ನಮ್ಮ ಕನ್ನಡ ಭಾಷೆಯನ್ನೇ ಭಾರತದ ರಾಷ್ಟ್ರ ಭಾಷೆಯೆಂದು ಹೇಳುತ್ತಾರೆ. ಜೊತೆಗೆ ನಾನೀಗ ನಿಮಗೆ ಇಂಡಿಯಾದ ನ್ಯಾಷನಲ್ ಲಾಂಗ್ವೇಜ್ ಹೇಳಿಕೊಡುತ್ತೇನೆ ಎಂದು ಹೇಳಿದ್ದಾರೆ. ಬಳಿಕ ಮಕ್ಕಳಿಗೆ ಅ, ಆ, ಇ, ಈ ಎಂದು ಹೇಳಿ ಕನ್ನಡದ ಅಕ್ಷರ ಮಾಲೆ ಅಂ ಅಃ ವರೆಗೆ ಹೇಳಿಕೊಟ್ಟಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಹತ್ತಿರವಿದ್ದು, ಈ ಸಮಯದಲ್ಲಿ ವಿದೇಶದ ಮಕ್ಕಳಿಗೆ ಕನ್ನಡ ಭಾಷೆ ಹೇಳಿಕೊಟ್ಟು ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ ಡಾ.ಬ್ರೋ. ಅನೇಕರು ಕನ್ನಡವನ್ನು ಭಾರತದ ರಾಷ್ಟ್ರ ಭಾಷೆ ಅಂತಾ ಹೇಳಿಬಿಟ್ರಲ್ವಾ ದೇವ್ರು ಎಂದು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.