HomeNationalSabarimala temple : ಶಬರಿಮಲೆ ಭಕ್ತರಿಗೆ ಗುಡ್ ನ್ಯೂಸ್, ವಿಮಾನಗಳ ಕ್ಯಾಬಿನ್ ಬ್ಯಾಗ್ ನಲ್ಲಿ ಇರುಮುಡಿ...

Sabarimala temple : ಶಬರಿಮಲೆ ಭಕ್ತರಿಗೆ ಗುಡ್ ನ್ಯೂಸ್, ವಿಮಾನಗಳ ಕ್ಯಾಬಿನ್ ಬ್ಯಾಗ್ ನಲ್ಲಿ ಇರುಮುಡಿ ಸಾಗಿಸಲು ಅನುಮತಿ….!

ದೇಶದ ಖ್ಯಾತ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಕೇರಳದ ಶಬರಿಮಲೆ ದೇವಾಲಯಕ್ಕೆ ಲಕ್ಷಾಂತರ ಮಂದಿ ನವೆಂಬರ್‍ ಮಾಹೆಯಿಂದ ಜನವರಿ ಮಾಹೆಯ ನಡುವೆ ಭೇಟಿ ನೀಡುತ್ತಿರುತ್ತಾರೆ. ಅದರಲ್ಲೂ ಅಯ್ಯಪ್ಪ ಮಾಲೆ ಧರಿಸಿ ಧೀಕ್ಷೆ ತೊಟ್ಟು, ಇರುಮುಡಿ ಕಟ್ಟಿಕೊಂಡು ಅಯ್ಯಪ್ಪನ ದರ್ಶನಕ್ಕೆ ಹೋಗುತ್ತಾರೆ. ಇದೀಗ ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇರಳದ ಶಬರಿಮಲೆ ದೇವಾಲಯಕ್ಕೆ (Sabarimala temple) ತೆರಳುವ ಭಕ್ತರು ವಿಮಾನಗಳ ಕ್ಯಾಬಿನ್ ಬ್ಯಾಗ್ ನಲ್ಲಿ ಇರುಮುಡಿ ಯನ್ನು ಸಾಗಿಸಬಹುದು ಎಂದು ನಾಗರೀಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ತಿಳಿಸಿದ್ದಾರೆ.

good news for Shabarimala devotees 1

ಈ ಕುರಿತು ನಾಗರೀಕ ವಿಮಾನಯಾನದ ಸಚಿವ ಕೆ.ರಾಮಮೋಹನ್ ನಾಯ್ಡು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನವೆಂಬರ್‍ ಮಾಹೆಯಿಂದ ಜನವರಿ ಕೊನೆಯವರೆಗೂ ಶಬರಿಮಲೆಗೆ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. 2025ರ ಜನವರಿ 20ರವರೆಗೆ ಯತಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಪ್ರಯಾಣಿಸಬಹುದು ಹಾಗೂ ಈ ಸೀಮಿತ ಅವಧಿಯಲ್ಲಿ ಮಾತ್ರ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ. ಸದ್ಯದ ನಿಯಮಗಳಂತೆ ವಿಮಾನಗಳ ಕ್ಯಾಬಿನ್ ಬ್ಯಾಗ್ ಗಳಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ಅನುಮತಿಯಿಲ್ಲ. ಶಬರಿಮಲೆಗೆ ಹೋಗುವಂತಹ ಭಕ್ತರಿಗೆ ಈ ಯಾತ್ರೆ ಸುಲಭವಾಗಲಿ ಎಂಬ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ `ಇರುಮುಡಿ’ಯಲ್ಲಿ ತೆಂಗಿನಕಾಯಿಯನ್ನು ಸಾಗಿಸಲು ವಿನಾಯಿತಿ ನೀಡಲಾಗಿದೆ ಎಂದು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಇನ್ನೂ ಈ ಆದೇಶವು 2025 ಜನವರಿ 20 ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ ಹಾಗೂ ಅಗತ್ಯವಿರುವ ಎಕ್ಸ್-ರೇ, ಇಟಿಡಿ ಹಾಗೂ ಭೌತಿಕ ತಪಾಸಣೆ ಹೀಗೆ ಭದ್ರತಾ ತಪಾಸಣೆಗಳ ಬಳಿಕ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಪೋಸ್ಟ್ ಇಲ್ಲಿದೆ ನೋಡಿ: Click Here

ಪ್ರತಿ ವರ್ಷ ಕೇರಳದ ಶಬರಿಮಲೆಗೆ ನವೆಂಬರ್‍ ಮಾಹೆಯಿಂದ ಜನವರಿ ಅಂತ್ಯದವರೆಗೂ ಭೇಟಿ ನೀಡುತ್ತಾರೆ. ಈ ಸಮಯದಲ್ಲೇ ಅಯ್ಯಪ್ಪ ದೇವಾಲಯ ತೆಗೆದಿರುತ್ತದೆ. ಈ ಸಮಯದಲ್ಲಿ ಅಯ್ಯಪ್ಪನ ಭಕ್ತರು ಅಯ್ಯಪ್ಪ ಮಾಲೆ ಧರಿಸಿ ಧೀಕ್ಷೆ ತೆಗೆದುಕೊಳ್ಳುತ್ತಾರೆ. ಇರುಮುಡಿ ಕಟ್ಟಿಕೊಂಡು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಇಡುಮುಡಿಯಲ್ಲಿ ತೆಂಗಿನಕಾಯಿಯೊಳಗೆ ತುಪ್ಪ ತುಂಬಿಸಲಾಗುತ್ತದೆ. ಬಳಿಕ ಅದನ್ನು ಇತರೆ ನೈವೇದ್ಯಗಳೊಂದಿಗೆ ಚೀಲದಲ್ಲಿ ಇರಿಸಲಾಗುತ್ತದೆ. ಬಳಿಕ ಕೆಲವು ತೆಂಗಿನಕಾಯಿಗಳನ್ನು ಸಹ ವಿವಿಧ ಪವಿತ್ರ ಸ್ಥಳಗಳಲ್ಲಿ ಒಡೆಯಲು ಇರಿಸಲಾಗುತ್ತದೆ. ಇರುಮುಡಿ ತಲೆಯ ಮೇಲೆ ಹೊತ್ತ ಭಕ್ತರಿಗೆ ಮಾತ್ರ ದೇವಾಲಯದ ಗರ್ಭಗುಡಿಯನ್ನು ತಲುಪು ಇರುವಂತಹ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಲು ಅನುಮತಿ ನೀಡಲಾಗುತ್ತದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular