HomeStateCrime News: ತನ್ನ ಅತ್ತಿಗೆ ಮೇಲೆ ಕಣ್ಣಾಕಿದ ಸ್ನೇಹಿತ, ಎಚ್ಚರಿಕೆ ನೀಡಿದ್ದಕ್ಕೆ ಕೊಲೆ ಮಾಡಿಯೇ ಬಿಟ್ಟ…!

Crime News: ತನ್ನ ಅತ್ತಿಗೆ ಮೇಲೆ ಕಣ್ಣಾಕಿದ ಸ್ನೇಹಿತ, ಎಚ್ಚರಿಕೆ ನೀಡಿದ್ದಕ್ಕೆ ಕೊಲೆ ಮಾಡಿಯೇ ಬಿಟ್ಟ…!

ಕೋಲಾರದ ಜಮಾಲ್ ಷಾ ನಗರದಲ್ಲಿ ನಿನ್ನೆ ತಡರಾತ್ರಿ ಸುಲ್ತಾನ್ ಅಮ್ಜಾದ್ ಎಂಬಾತ ರೋಹಿದ್ (Crime News) ಎಂಬ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಜಮಾಲ್ ಷಾ ನಗರದಲ್ಲಿ ನಿನ್ನೆ ತಡರಾತ್ರಿ ಸುಲ್ತಾನ್​ ತಿಪ್ಪಸಂದ್ರದ ಅಮ್ಜಾದ್ ಎಂಬಾತ ರೋಹಿದ್​ ಅಲಿಯಾಸ್ ಅರ್ಬಾಜ್​ನನ್ನು ಕೊಲೆ‌ ಮಾಡಿದ್ದಾನೆ. ರೋಹಿದ್ ಅತ್ತಿಗೆಯ ಮೇಲೆ ಕಣ್ಣಾಕಿದ್ದ (Crime News) ಅಮ್ಜಾದ್ ಮೇಲೆ ರೋಹಿದ್ ಗಲಾಟೆ ಮಾಡಿದ್ದ. ಜೊತೆಗೆ ಸ್ನೇಹಿತ ಅಮ್ಜಾದ್ ಗೆ ರೋಹಿದ್ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಕೋಪಗೊಂಡ ಅಮ್ಜಾದ್ ರೋಹಿದ್ ಎದೆಗೆ ಚೂರಿ ಹಾಕಿ ಕೊಲೆ ಮಾಡಿದ್ದಾನೆ.

ರೋಹಿದ್ ಅಲಿಯಾಸ್ ಅರ್ಬಾಜ್ (26) ಕೊಲೆಯಾದ ವ್ಯಕ್ತಿ. ಅಮ್ಜಾದ್ ಎಂಬಾತ ರೋಹಿದ್ ನನ್ನು ಕೊಲೆ (Crime News) ಮಾಡಿದ್ದಾನೆ. ರೋಹಿದ್ ಹಾಗೂ ಅಮ್ಜಾದ್ ದೂರದ ಸಂಬಂಧಿಗಳು ಹಾಗೂ ಒಳ್ಳೆಯ ಸ್ನೇಹಿತರೂ ಆಗಿದ್ದರು. ಈ ಕಾರಣದಿಂದ ಆಗಾಗ ಅಮ್ಜಾದ್ ರೋಹಿದ್ ಮನೆಗೆ ಬರುತ್ತಿದ್ದ. ಆಗಾಗ ಮನೆಗೆ ಬರುತ್ತಿದ್ದ ಅಮ್ಜಾದ್ ಗೆ ರೋಹಿದ್ ಅಣ್ಣನ ಹೆಂಡತಿಯ ಮೇಲೆ (Crime News) ಕಣ್ಣು ಬಿದ್ದಿದೆ. ರೋಹಿದ್ ಗೆ ತಿಳಿಯದಂತೆ ಆತನ ಅತ್ತಿಗೆಯ ಮೊಬೈಲ್ ನಂಬರ್‍ ಪಡೆದುಕೊಂಡಿದ್ದಾನೆ. ಆಗಾಗ ಪೊನ್ ಹಾಗೂ ವಿಡಿಯೋ ಕಾಲ್ ಸಹ ಮಾಡಿ ರೋಹಿದ್ ಅತ್ತಿಗೆಗೆ ಪೀಡಿಸುತ್ತಿದ್ದನಂತೆ. ಇದನ್ನು ತಿಳಿದ ರೋಹಿದ್ ಹಾಗೂ ಸಂಬಂಧಿಕರು ಎರಡು ತಿಂಗಳ ಹಿಂದೆ ಅಮ್ಜಾದ್ ಮನೆಗೆ ಹೋಗಿ ಗಲಾಟೆ ಮಾಡಿ ಎಚ್ಚರಿಕೆ (Crime News) ಸಹ ಕೊಟ್ಟು ಬಂದಿದ್ದರು ಎನ್ನಲಾಗಿದೆ.

ಆದರೂ ಸಹ ಸುಮ್ಮನಾಗದ ಅಮ್ಜಾದ್ ಮಾತ್ರ ತನ್ನ ಬುದ್ದಿಯನ್ನು ಬಿಟ್ಟಿರಲಿಲ್ಲ. ಎರಡು ತಿಂಗಳು ಸುಮ್ಮನಿದ್ದ ಅಮ್ಜಾದ್ ಮತ್ತೆ ರೋಹಿದ್ ಅತ್ತಿಗೆಗೆ ಪೋನ್ ಮಾಡಲು ಶುರು ಮಾಡಿದ್ದಾನೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ರೋಹಿದ್ (Crime News) ಎದುರಿನಲ್ಲಿಯೇ ಆತನ ಅತ್ತಿಗೆಗೆ ವಿಡಿಯೋ ಕಾಲ್ ಮಾಡಿದ್ದಾನೆ. ಇದನ್ನು ನೋಡಿದ ರೋಹಿದ್ ಜೋರಾಗಿಯೇ ಗಲಾಟೆ ಮಾಡಿ ವಾರ್ನಿಂಗ್ ಮಾಡಿದ್ದನಂತೆ. ಈ ಕಾರಣದಿಂದ ಅಮ್ಜಾದ್ ಸಹ ಕಫ ಮಾಡಿಕೊಂಡಿದ್ದ ಎನ್ನಲಾಗಿದೆ. (Crime News) ನಿನ್ನೆಯಷ್ಟೆ ಬೆಂಗಳೂರಿಗೆ ಕೆಲಸ ಮೇಲೆ ಹೋಗಿದ್ದ ರೋಹಿದ್ ರಾತ್ರಿ ವಾಪಸ್ಸು ಬರುತ್ತಿದ್ದಾಗ ನಿನ್ನ ಜೊತೆಗೆ ಮಾತನಾಡಬೇಕು ಬಾ ಎಂದು ಅಮ್ಜಾದ್ ಹೇಳಿದ್ದಾನೆ. (Crime News) ಅಮ್ಜಾದ್  ಹೇಳಿದಂತೆ ಜಮಾಲ್ ಷಾ ನಗರದ ಹೊರವಲಯಕ್ಕೆ ರೋಹಿದ್ ಹೋಗಿದ್ದಾನೆ. ಈ ಸಮಯದಲ್ಲಿ ಜಗಳ ಮಾಡಿ ರೋಹಿದ್ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಅಮ್ಜಾದ್.

ಈ ಸುದ್ದಿ ತಿಳಿಯುತ್ತಿದ್ದಂತೆ (Crime News) ಕೋಲಾರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಅಮ್ಜದ್ ನನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ಹೆಚ್ಚಿನ ಮಾಹಿತಿಗಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular