Thursday, February 5, 2026
HomeNationalGovernment School: ಸರ್ಕಾರಿ ಶಾಲೆಯಲ್ಲಿ ಎಣ್ಣೆ ಹೊಡೆದು, ಬಾರ್ ಡ್ಯಾನ್ಸರ್ ಗಳಂದಿಗೆ ಅಸಭ್ಯಕರ ನೃತ್ಯ, ವಿಡಿಯೋ...

Government School: ಸರ್ಕಾರಿ ಶಾಲೆಯಲ್ಲಿ ಎಣ್ಣೆ ಹೊಡೆದು, ಬಾರ್ ಡ್ಯಾನ್ಸರ್ ಗಳಂದಿಗೆ ಅಸಭ್ಯಕರ ನೃತ್ಯ, ವಿಡಿಯೋ ವೈರಲ್….!

ಶಿಕ್ಷಣ ನೀಡುವಂತಹ ಶಾಲೆಯನ್ನು ಎಲ್ಲರೂ ಜ್ಞಾನ ದೇಗುಲ ಎಂದೇ ಕರೆಯುತ್ತಾರೆ. ಶಾಲೆಯನ್ನು ದೇವಾಲಯದಂತೆ ಪವಿತ್ರವಾದ ಸ್ಥಳ ಎಂದೇ ಕರೆಯಲಾಗುತ್ತದೆ. ಆದರೆ ಕೆಲವೊಂದು ಕಡೆ ಶಾಲೆಗಳಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಿ ಅದಕ್ಕೆ ಕಳಂಕ ತರುತ್ತಾರೆ. ಇದೀಗ ಶಾಲೆಯೊಂದರಲ್ಲಿ ಮದ್ಯ ಸೇವಿಸಿ (Government School), ಬಾರ್‍ ಡ್ಯಾನ್ಸರ್‍ ಗಳ ಜೊತೆಗೆ ಅಸಭ್ಯಕರವಾಗಿ ನೃತ್ಯ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಕುರಿತು ಆಕ್ರೋಷ ಹೊರಹಾಕುತ್ತಿದ್ದಾರೆ.

bad event in govt school in bihar

ಈ ಘಟನೆ ಬಿಹಾರದ ಸಹರ್ಸಾ ಎಂಬಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ ಕಳೆದ ಮಂಗಳವಾರ ಸಂಜೆ ನಡೆದಿದೆ ಎನ್ನಲಾಗಿದೆ. ಈ ಶಾಲೆಯಲ್ಲಿ ಮದುವೆ ಸಂಭ್ರಮದ ನಿಮಿತ್ತ ಕೆಲವರು ಬ್ಯಾಂಡ್ ಹಾಗೂ ನಾಲ್ಕು ಮಂದಿ ಬಾರ್‍ ಡ್ಯಾನ್ಸರ್‍ ಗಳೊಂದಿಗೆ ಬಂದಿದ್ದಾರೆ. ಶಾಲೆಗೆ ಬಂದು ಚೆನ್ನಾಗಿ ಮದ್ಯ ಸೇವನೆ ಮಾಡಿ ಡ್ಯಾನ್ಸ್ ಆಡಿದ್ದಾರೆ. ನಾಲ್ಕು ಮಂದಿ ಮಹಿಳೆಯರು ಭೋಜ್ ಪುರಿ ಹಾಡುಗಳಿಗೆ ಅಸಭ್ಯಕರವಾದ ನೃತ್ಯ ಮಾಡಿದ್ದಾರೆ. ಜೊತೆಗೆ ಮಹಿಳೆಯರ ಸುತ್ತಲೂ ಕೆಲವರು ಸೇರಿ ಮದ್ಯ ಸೇವನೆ ಮಾಡುತ್ತಾ ಮಹಿಳೆಯರೊಂದಿಗೆ ನೃತ್ಯವಾಡಿದ್ದಾರೆ. ಈ ದೃಶ್ಯಗಳನ್ನು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/RepublicanNews0/status/1839348955911782769

ಇನ್ನೂ ಈ ಘಟನೆ ಸೆ.24 ರಂದು ರಾತ್ರಿ ನಡೆದಿದ್ದು, ಈ ಘಟನೆಯ ಕುರಿತು ಸ್ಥಳೀಯರು ತೀವ್ರ ಆಕ್ರೋಷ ಹೊರಹಾಕುತ್ತಿದ್ದಾರೆ. ಮಕ್ಕಳಿಗೆ ವಿದ್ಯೆ ನೀಡುವ ಶಾಲೆಯ ಮೈದಾನದಲ್ಲಿ ಈ ರೀತಿಯ ಅನೈತಿಕ ಕಾರ್ಯಕ್ರಮಗಳು ಹೇಗೆ ನಿರ್ವಹಿಸುತ್ತೀರೀ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಶಾಲೆಯಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ಹೇಗೆ ಅನುಮತಿ ನೀಡಿದ್ದಿರಾ ಎಂದು ಸಂಬಂಧಪಟ್ಟ ಇಲಾಖೆಯವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇತ್ತ ಪೊಲೀಸರೂ ಸಹ ನಾವು ಯಾವುದೇ ರೀತಿಯ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಅಂತಾ ಹೇಳಿದ್ದಾರಂತೆ. ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ವಿಚಾರಣೆ ಮಾಡಲಾಗುತ್ತಿದೆ. ಆದಷ್ಟು ಶೀಘ್ರ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular