Friday, November 22, 2024

Cyber Scam Alert: ಕನ್ನಡದಲ್ಲಿ ಮಾತನಾಡಿ ಸೈಬರ್ ಸ್ಕ್ಯಾಮ್ ಗಳಿಂದ ಪಾರಾಗಿ, ಪೊಲೀಸ್ ಅಧಿಕಾರಿಯ ಸಲಹೆ…!

Cyber Scam Alert- ಇಂದಿನ ಕಾಲದಲ್ಲಿ ದಿನೇ ದಿನೇ ಹೊಸ ಹೊಸ ತಂತ್ರಜ್ಞಾನ ಪರಿಚಯವಾಗುತ್ತಿದೆ. ಜೊತೆಗೆ ಸೈಬರ್‍ ಕ್ರೈಂಗಳೂ ಸಹ ಹೆಚ್ಚಾಗುತ್ತಿದೆ. ಆಫರ್‍ ಬಂದಿದೆಯಂತಾ, ಕೆಲಸ ಕೊಡಿಸುವುದಾಗಿ, (Cyber Scam Alert) ಬ್ಯಾಂಕ್ ನಿಂದ ಕರೆ ಮಾಡಿರುವುದಾಗಿ, ಬ್ಯಾಂಕ್ ಲೋನ್ ಬಂದಿದೆಯಂತಾ ಹೀಗೆ ವಿವಿಧ ರೀತಿಯಲ್ಲಿ ಅಮಾಯಕರನ್ನು ಮೋಸ ಮಾಡುತ್ತಾರೆ. (Cyber Scam Alert) ಅಂತಹ ವಂಚಕ ಕರೆಗಳು ಬಂದರೇ ಕನ್ನಡದಲ್ಲಿ ಮಾತನಾಡಿದರೇ (Cyber Scam Alert) ಸ್ಕ್ಯಾಮ್ ಗಳಿಂದ ಪರಾಗಬಹುದೆಂದು ಪೊಲೀಸ್ ಅಧಿಕಾರಿ ಸಲಹೆ ನೀಡಿದ ವಿಡಿಯೋ ಒಂದು ವೈರಲ್ ಆಗಿದೆ.

Cyber Crime Awarness video viral 1

ತಂತ್ರಜ್ಞಾನವನ್ನು ಬಳಸಿಕೊಂಡು (Cyber Scam Alert) ಅನೇಕರು ಒಳ್ಳೆಯ ಕೆಲಸಗಳನ್ನು ಮಾಡಿದರೇ, ಮತ್ತೆ ಕೆಲವರು ಕೆಟ್ಟದಾಗಿ ಬಳಸಿಕೊಳ್ಳುತ್ತಾರೆ. ಕೆಲ ಸ್ಕಾಮರ್ಸ್‌ಗಳು ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಒಟಿಪಿ ಪಡೆದು ವಂಚನೆ ಮಾಡುತ್ತಾರೆ. (Cyber Scam Alert) ಅದೇ ರೀತಿ ನಿಮ್ಮ ಮೊಬೈಲ್ ನಂಬರ್‍ ಗೆ ಲಕ್ಕಿ ಆಫರ್‍ ಬಂದಿದೆ ಎಂದು ಮೋಸ ಮಾಡುತ್ತಾರೆ. ಈ ರೀತಿಯ ಸ್ಕ್ಯಾಮರ್‍ ಗಳು ಬಹುತೇಕ ಹಿಂದಿ ಭಾಷೆಯಲ್ಲಿಯೇ ಮಾತನಾಡುತ್ತಾರೆ (Cyber Scam Alert)  ಅಥವಾ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಾರೆ. ಹೀಗೆ ಸ್ಕ್ಯಾಮರ್‍ ಗಳು ನಿಮಗೆ ಕರೆ ಮಾಡಿದಾಗ ಅವರೊಂದಿಗೆ ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತನಾಡುವ ಬದಲಿಗೆ ಕನ್ನಡದಲ್ಲಿ ಮಾತನಾಡಿ, ಇದರಿಂದ ಸುಲಭವಾಗಿ ಸೈಬರ್‍ ವಂಚನೆಗಳಿಂದ (Cyber Scam Alert) ನೀವು ಪಾರಾಗಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ: https://x.com/sgowda79/status/1828824655354089819

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ (Cyber Scam Alert) ಸೈಬರ್‍ ಕ್ರೈಂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕನ್ನಡ ಭಾಷೆ ಬರದೇ ಇರುವಂತಹ ಸ್ಕ್ಯಾಮರ್‍ ಗಳೊಂದಿಗೆ ನೀವು ಕನ್ನಡದಲ್ಲಿಯೇ ವ್ಯವಹರಿಸುವ ಮೂಲಕ ವಂಚನೆಗಳಿಂದ ಪಾರಾಗಬಹುದು ಎಂದು ಹೇಳಿದ್ದು, (Cyber Scam Alert)  ಈ ಸಂಬಂಧ ಪೋಸ್ಟ್ ಒಂದನ್ನು ಕನ್ನಡಿಗ ದೇವರಾಜ್ (sgowda79) ಎಂಬುವವರು ತಮ್ಮ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ (Cyber Scam Alert) ಸೋಷಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು (Cyber Scam Alert) ಸೈಬರ್‍ ಕ್ರೈಂ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಗಳಿಗಿಂತ ಹೆಚ್ಚು ಸೈಬರ್‍ ಕ್ರೈಂಗಳು ಜಾಸ್ತಿಯಾಗಿದೆ. ಯಾರಾದರೂ ಸ್ಕ್ಯಾಮರ್ಸ್ ಗಳು ನಿಮಗೆ ಕರೆ ಮಾಡಿದರೇ ದಯವಿಟ್ಟು ಕನ್ನಡದಲ್ಲಿಯೇ ಮಾತನಾಡಿ, (Cyber Scam Alert) ಆಗ ನೀವು ವಂಚನೆಗಳಿಂದ ಪಾರಾಗುತ್ತೀರಿ. ಕನ್ನಡದವರು ಈ ರೀತಿಯಾಗಿ (Cyber Scam Alert) ನಿಮಗೆ ವಂಚನೆಯ ಕರೆ ಮಾಡಲ್ಲ. ನಾರ್ತ್ ಇಂಡಿಯಾದವರು ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಕರೆ ಮಾಡಿ ವಂಚನೆ ಮಾಡುತ್ತಾರೆ. ನೀವು ಅವರೊಂದಿಗೆ ಕನ್ನಡದಲ್ಲಿ ಮಾತನಾಡಿದರೇ ಅವರೇ ಪೋನ್ ಕಟ್ ಮಾಡುತ್ತಾರೆ. ಈ ರೀತಿ ಮಾಡಿ ಸೈಬರ್‍ ವಂಚನೆಗಳಿಂದ (Cyber Scam Alert)  ಪಾರಾಗಬಹುದು ಎಂದು ಹೇಳಿದ್ದಾರೆ. ಈ ವಿಡಿಯೋ ಕಳೆದ ಆ.28 ರಂದು ಹಂಚಿಕೊಂಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಜೊತೆಗೆ (Cyber Scam Alert) ಎಲ್ಲರಿಂದ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!