Crow Pulls Cobra Video : ರೊಮ್ಯಾನ್ಸ್ ಮೂಡ್‌ನಲ್ಲಿದ್ದ ನಾಗರಹಾವುಗಳ ಬಾಲ ಎಳೆದ ಕಾಗೆ! ಆಮೇಲೇನಾಯ್ತು ಗೊತ್ತಾ?

ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಒಂದಲ್ಲ ಒಂದು ಹಾವಿನ ವಿಡಿಯೋ ಕಣ್ಣಿಗೆ ಬಿದ್ದೇ ಬೀಳುತ್ತೆ. ಅದ್ರಲ್ಲೂ ನಾಗರಹಾವುಗಳ ವಿಡಿಯೋ ಅಂದ್ರೆ ನೆಟ್ಟಿಗರಿಗೆ ಎಲ್ಲಿಲ್ಲದ ಕ್ರೇಜ್. ಸದ್ಯ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿರೋ ಈ (Crow Pulls Cobra Video) ವಿಡಿಯೋ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ! ಎರಡು ನಾಗರಹಾವುಗಳು ಜಗತ್ತನ್ನೇ ಮರೆತು ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡ್ತಿರೋವಾಗ, ಎಂಟ್ರಿ ಕೊಟ್ಟ ಕಾಗೆಯೊಂದು ಮಾಡಿದ ಕಿಡಿಗೇಡಿ ಕೆಲಸ ಈಗ ಸಖತ್ ವೈರಲ್ ಆಗ್ತಿದೆ. ವಿಡಿಯೋ ನೋಡಿದವರೆಲ್ಲಾ “ಇದೇನಪ್ಪಾ ಕಾಗೆಗೆ ಇಷ್ಟೊಂದು ಧೈರ್ಯ!” ಅಂತ ಹುಬ್ಬೇರಿಸುತ್ತಿದ್ದಾರೆ.

Crow Pulls Cobra Video Goes Viral During Snake Courtship

Crow Pulls Cobra Video – ಮಳೆಗಾಲದಲ್ಲಿ ಹಾವುಗಳ ಪ್ರೇಮದಾಟ

ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಹಾವುಗಳು ಹೆಚ್ಚಾಗಿ ಹೊರಗಡೆ ಬರುತ್ತವೆ. ಕಪ್ಪೆ, ಇಲಿಗಳ ಬೇಟೆಗಾಗಿ ಹಾಗೂ ಸಂಗಾತಿಯ ಹುಡುಕಾಟಕ್ಕಾಗಿ ಜನಾವಾಸವಿರುವ ಪ್ರದೇಶಗಳು, ಗಿಡ-ಗಂಟೆಗಳ ನಡುವೆ ಇವುಗಳ ಸಂಚಾರ ಹೆಚ್ಚಿರುತ್ತದೆ. ಈ ಸಮಯದಲ್ಲಿ ಹೆಣ್ಣು ಹಾವುಗಳು ತಮ್ಮ ಸಂಗಾತಿಯನ್ನು ಆಕರ್ಷಿಸಲು ದೇಹದಿಂದ ಒಂದುವಿಶೇಷ ರಾಸಾಯನಿಕದ ವಾಸನೆಯನ್ನು ಬಿಡುಗಡೆ ಮಾಡುತ್ತವೆ. ಇದನ್ನು ಗ್ರಹಿಸಿ ಬರುವ ಗಂಡು ಹಾವುಗಳು, ಹೆಣ್ಣು ಹಾವಿನೊಂದಿಗೆ ಸರಸವಾಡುತ್ತಾ ನೃತ್ಯ ಮಾಡಲು ಆರಂಭಿಸುತ್ತವೆ.

ರೊಮ್ಯಾನ್ಸ್ ಮಾಡ್ತಿದ್ದ ಹಾವುಗಳ ಬಾಲ ಎಳೆದ ಕಾಗೆ!

ಇತ್ತೀಚಿನ ದಿನಗಳಲ್ಲಿ ಎಲ್ಲಿ ಹಾವು ಕಂಡರೂ ಜನ ಮೊಬೈಲ್ ಹಿಡಿದು ವಿಡಿಯೋ ಮಾಡುವುದು ಕಾಮನ್ ಆಗಿದೆ. ಅದೇ ರೀತಿ ಇಲ್ಲೂ ಕೂಡ ಎರಡು ನಾಗರಹಾವುಗಳು ಒಂದಕ್ಕೊಂದು ಹೆಣೆದುಕೊಂಡು, ಮೈಮರೆತು ನೃತ್ಯ ಮಾಡುತ್ತಿದ್ದವು. ಆದರೆ, ಈ ಸುಂದರ ಕ್ಷಣಕ್ಕೆ ವಿಲನ್ ತರಹ ಅಲ್ಲಿಗೆ ಒಂದು ಕಾಗೆ ಎಂಟ್ರಿ ಕೊಟ್ಟಿದೆ.  ಆ ಕಾಗೆಗೆ ಏನನಿಸಿತೋ ಏನೋ.. ಪ್ರೇಮದಾಟದಲ್ಲಿದ್ದ ಹಾವುಗಳ ಬಾಲವನ್ನು ತನ್ನ ಕೊಕ್ಕಿನಿಂದ ಜೋರಾಗಿ ಎಳೆಯಲು ಶುರು ಮಾಡಿದೆ! ಒಂದಲ್ಲ, ಎರಡಲ್ಲ.. ಹಲವು ಬಾರಿ (Crow Pulls Cobra Video) ಹಾವುಗಳ ಬಾಲದ ತುದಿಯನ್ನು ಹಿಡಿದು ಜಗ್ಗಾಡುತ್ತಾ ವಿಚಿತ್ರವಾಗಿ ವರ್ತಿಸಿದೆ. Read this also : ಸತ್ತ ಹಾವನ್ನು ಬಾಯಿಗೆ ಹಾಕಿ ರೀಲ್ಸ್ ಮಾಡಿದ ಯುವಕ! ಆಮೇಲೇನಾಯ್ತು ಗೊತ್ತಾ? ಜೀವವೇ ಹೋಗೋ ಪರಿಸ್ಥಿತಿ!

ಹಾವುಗಳಿಗೆ ‘ಡೋಂಟ್ ಕೇರ್’, ನೆಟ್ಟಿಗರು ಶಾಕ್!

ಅಲ್ಲಿದ್ದ ಕೆಲವರು ಕಾಗೆಯ ಈ ವಿಚಿತ್ರ ಸಾಹಸವನ್ನು ತಕ್ಷಣವೇ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿದ್ದ ಅಸಲಿ ಟ್ವಿಸ್ಟ್ ಏನೆಂದರೆ, ಕಾಗೆ ಅಷ್ಟೊಂದು ಕಾಟ ಕೊಟ್ಟರೂ ಆ ನಾಗರಹಾವುಗಳು ಮಾತ್ರ ಅದಕ್ಕೆ ಕ್ಯಾರೇ ಎನ್ನದೆ ತಮ್ಮ ನೃತ್ಯದಲ್ಲಿ ತಲ್ಲೀನವಾಗಿದ್ದವು. ಕಾಗೆಯ ಡಿಸ್ಟರ್ಬೆನ್ಸ್ ಅನ್ನು ಸಂಪೂರ್ಣವಾಗಿ ಇಗ್ನೋರ್ ಮಾಡಿ ತಮ್ಮದೇ ಲೋಕದಲ್ಲಿದ್ದವು.

Crow Pulls Cobra Video Goes Viral During Snake Courtship

ನೆಟ್ಟಿಗರ ರಿಯಾಕ್ಷನ್

ಸದ್ಯ ಈ ಫನ್ನಿ ವಿಡಿಯೋ (Viral Video Link Here) ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು “ಇದೇನಪ್ಪಾ.. ಇಂತಾ ಮಾಸ್ ಸಾಹಸ!” ಎಂದು ಕಮೆಂಟ್ ಮಾಡುತ್ತಿದ್ದಾರೆ. (Crow Pulls Cobra Video) ಇನ್ನು ಕೆಲವರು, “ಒಂದು ವೇಳೆ ಹಾವು ತಿರುಗಿ ಕಚ್ಚಿದ್ದರೆ ಕಾಗೆಯ ಪ್ರಾಣ ಗಾಳಿಯಲ್ಲಿ ತೇಲುತ್ತಿತ್ತು, ಕಾಗೆಗೆ ಧೈರ್ಯ ಜಾಸ್ತಿ” ಎಂದು ತಮಾಷೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಮಾತ್ರ ನೆಟ್ಟಿಗರಿಗೆ ಭರಪೂರ ಮನರಂಜನೆ ನೀಡುತ್ತಿದೆ.

Leave a Comment

Your email address will not be published. Required fields are marked *

Scroll to Top