Crime News – ಮದುವೆಯ ಹೆಸರಲ್ಲಿ ಇತ್ತಿಚಿಗೆ ಭಾರಿ ಮೋಸಗಳು ನಡೆಯುತ್ತಿವೆ. ಅದರಲ್ಲೂ ಕೆಲವೊಂದು ಮ್ಯಾಟ್ರಿಮೊನಿ ಸೈಟ್ ಗಳ ಮೂಲಕ ವಂಚನೆಯ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ ಎನ್ನಬಹುದು. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮ್ಯಾಟ್ರಿಮೋನಿ ತಾಣಗಳಲ್ಲಿ ಶ್ರೀಮಂತ ಹುಡುಗರನ್ನು ನೋಡಿ ಅವರಿಗೆ ಗಾಳ ಹಾಕಿ ಕೋಟಿ ಕೋಟಿ ವಂಚನೆ ಮಾಡಿದ ಕಿಲಾಡಿ ಲೇಡಿಯೊಬ್ಬಳನ್ನು (Crime News) ಪೊಲೀಸರು ಬಂಧನ ಮಾಡಿದ್ದಾರೆ. ಈ ಕಿಲಾಡಿ ಮಹಿಳೆಯನ್ನು ಉತ್ತರಾಖಂಡ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೀಮಾ ಎಂದು ಗುರ್ತಿಸಲಾಗಿದ್ದು, ಆಕೆ 10 ವರ್ಷದಲ್ಲಿ ಮೂರು ಮದುವೆಯಾಗಿ ಇಲ್ಲಿಯವರೆಗೂ 1.25 ಕೋಟಿ ಲೂಟಿ ಮಾಡಿದ್ದಾಳೆ ಎಂದು ಹೇಳಲಾಗಿದೆ.
ಬಂಧಿತ ಮಹಿಳೆ ಸೀಮಾ ಮ್ಯಾಟ್ರಿಮೋನಿ ವೆಬ್ ಸೈಟ್ ಗಳಲ್ಲಿ ನೊಂದಾಯಿಸಿಕೊಂಡಿರುವ ಶ್ರೀಮಂತರನ್ನು ಹುಡುಕಿ ಮದುವೆಯಾಗುತ್ತಿದ್ದಳಂತೆ. ಗಂಡನ ಮನೆಯವರ ನಂಬಿಕೆ, ವಿಶ್ವಾಸ ಗಳಿಸಿಕೊಂಡು, ಮೂರು ನಾಲ್ಕು ತಿಂಗಳಲ್ಲೇ ಗಂಡನ ಮನೆ ಲೂಟಿ ಮಾಡಿ ಪರಾರಿಯಾಗುವುದು ಈ ಕಿಲಾಡಿಯ ಪ್ಲಾನ್ ಆಗಿತ್ತಂತೆ. ಕಳೆದ 2013 ರಲ್ಲಿ ಆಗ್ರಾದ ಓರ್ವ ಬ್ಯುಸಿನೆಸ್ ಮೆನ್ ನನ್ನು ಮದುವೆಯಾಗಿದ್ದಳು. ಬಳಿಕ ಗಂಡನ ಮನೆಯವರ ವಿರುದ್ದ ಕಾನೂನು ದುರ್ಬಳಕೆ ಮಾಡಿಕೊಂಡು ದೂರು ದಾಖಲಿಸಿದ್ದಳು. ಬಳಿಕ ಕೇಸ್ ರಾಜಿ ಮಾಡಿಕೊಳ್ಳಲು ಆಕೆ ಬರೊಬ್ಬರಿ 75 ಲಕ್ಷ ರೂಪಾಯಿ ಪಡೆದಿದ್ದಳು ಎಂದು ಹೇಳಲಾಗಿದೆ.
ಬಳಿಕ 2017 ರಲ್ಲಿ ಗುರುಗ್ರಾಮ ಮೂಲದ ಸಾಫ್ಟ್ ವೇರ್ ಇಂಜನಿಯರ್ ಜೊತೆ ಮದುವೆಯಾದರು. ಬಳಿಕ ಆತನ ಮೇಲೂ ಕೇಸ್ ಹಾಕಿ ರಾಜಿ ಮಾಡಿಕೊಳ್ಳಲು ಹತ್ತು ಲಕ್ಷ ರೂಪಾಯಿ ದೋಚಿದ್ದಳು. ನಂತರ 2023 ರಲ್ಲಿ ಜೈಪುರದ ವ್ಯಕ್ತಿಯನ್ನು ಮೂರನೇ ಮದುವೆಯಾದರು. ಮೂರನೇ ಗಂಡನ ಮೇಲೆ ಯಾವುದೇ ಕೇಸ್ ಹಾಕದೇ ಮನೆಯಲ್ಲಿದ್ದ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣ ಲೂಟಿ ಮಾಡಿ ಪರಾರಿಯಾಗಿದ್ದಳು. ಈ ಘಟನೆಯ ಸಂಬಂಧ ಜೈಪುರದ ಮೂರನೇ ಪತಿ ನೀಡಿದ ದೂರಿನ ಮೇರೆಗೆ ಸೀಮಾಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಈ ಕಿಲಾಡಿ ಮಹಿಳೆ 10 ವರ್ಷದಲ್ಲಿ ಮೂರು ಮದುವೆಯಾಗಿ ಒಟ್ಟು 1.25 ರೂಪಾಯಿಗಳಿಗೂ ಹೆಚ್ಚು ದೋಚಿದ್ದಾಳೆ ಎನ್ನಲಾಗಿದೆ. ಶ್ರೀಮಂತರನ್ನು ಅದರಲ್ಲೂ ವಿಚ್ಚೇದನ ಪಡೆದುಕೊಂಡ ಹಣವಂತರೇ ಆಕೆಯ ಟಾರ್ಗೆಟ್ ಆಗಿದ್ದರಂತೆ. ಇದೀಗ ಈ ಕಿಲಾಡಿ ಮಹಿಳೆಯನ್ನು ಆಕೆಯ ಮೂರನೇ ಗಂಡ ನೀಡಿದ ದೂರಿನ ಮೇರೆಗೆ ಬಂಧಿಸಿದ್ದಾರೆ. ಈ ಕಿಲಾಡಿ ಸೀಮಾಳಿಂದ ಯಾರಾದರೂ ವಂಚನೆಯಾಗಿದ್ದವರು ಇದ್ದರೇ ದೂರು ನೀಡಬಹುದು ಎಂದು ತಿಳಿಸಿದ್ದಾರೆ.