Crime News – ಹಾಡಹಗಲೇ ಯುವತಿಯೊಬ್ಬಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆಯ ಎಂ.ಎನ್.ಸಿ ಬಿಪಿಒ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನೇ ಕೊಲೆ ಮಾಡಲಾಗಿದೆ. ಮೃತಳ ಸಹುದ್ಯೋಗಿಯಿಂದಲೇ ಕಂಪನಿಯ ಪಾರ್ಕಿಂಗ್ ಸ್ಥಳದಲ್ಲಿ ಕೊಲೆಯಾಗಿದ್ದಾಳೆ. ಮೃತ ದುರ್ದೈವಿಯನ್ನು ಕತ್ರಜ್ ನಿವಾಸಿ ಶುಭದಾ ಶಂಕರ್ (28) ಎಂದು ಗುರ್ತಿಸಲಾಗಿದೆ.
ಮಹಾರಾಷ್ಟ್ರದ ಯೆರವಡಾದ ಬಿಪಿಒ ಕಂಪನಿಯ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದೆ. ಕತ್ರಜ್ ನಿವಾಸಿ ಶುಭದಾ ಶಂಕರ್ ಎಂಬ ಯುವತಿಯನ್ನು ಶಿವಾಜಿನಗರದ ನಿವಾಸಿ ಕೃಷ್ಣ ಸತ್ಯನಾರಾಯಣ್ ಕನೋಜ (30) ಎಂಬಾತನೆ ಕೊಲೆ ಮಾಡಿದ್ದಾನೆ. ಪುಣೆಯಲ್ಲಿನ ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಶುಭದಾ ಶಂಕರ್ ಎಂಬ ಯುವತಿಯನ್ನು ಕಳೆದ ಮಂಗಳವಾರ ಸಂಜೆ ಯೆರವಾಡದಲ್ಲಿರುವ ಅವರ ಕಂಪನಿಯ ಪಾರ್ಕಿಂಗ್ ಸ್ಥಳದಲ್ಲಿಯೇ ಆಕೆಯ ಸಹುದ್ಯೋಗಿ ಕೃಷ್ಣ ಸತ್ಯನಾರಾಯಣ್ ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಹರಿತವಾದ ಆಯುಧದಿಂದ ಯುವತಿಯ ಮೇಲೆ ಹಲ್ಲೆ ನಡೆಸಿದಾಗ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಕೊಲೆಯಾದ ಯುವತಿ ಹಾಗೂ ಕೊಲೆ ಮಾಡಿದ ಆರೋಪಿ ಇಬ್ಬರೂ ಒಂದೇ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಡಬ್ಲ್ಯೂಎನ್ಎಸ್ ಗ್ಲೋಬಲ್ ಎಂಬ ಕಂಪನಿಯಲ್ಲಿ ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಮಂಗಳವಾರ ಯುವತಿಯ ಮೇಲೆ ಕೃಷ್ಣ ನಾರಾಯಣ್ ಕನೋಜ್ ಎಂಬ ಯುವಕ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ. ಈ ಹಲ್ಲೆಯಿಂದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ. ಇನ್ನೂ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮೃತ ಯುವತಿಗೆ ಹಣ ನೀಡಿದ್ದನಂತೆ, ಆಕೆ ಅದನ್ನು ವಾಪಸ್ಸು ಕೊಟ್ಟಿರಲಿಲ್ಲ ಈ ಕಾರಣದಿಂದಲೇ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.