Crime News – ಕೆಲವು ದಿನಗಳ ಹಿಂದೆಯಷ್ಟೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಿಂದಲೂ ಈ ಸಾವನ್ನು ಆತ್ಮಹತ್ಯೆ ಎಂದೇ ನಂಬಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆ ಮಹಿಳೆಯ ಮಗು ತನಗೆ ತೋಚಿದ ರೀತಿಯಲ್ಲಿ ಚಿತ್ರವೊಂದನ್ನು ಬಿಡಿಸಿದ್ದರು. ಇದೇ ಚಿತ್ರ ಇದೀಗ ತನ್ನ ತಾಯಿಯ ಸಾವಿಗೆ ರೋಚಕ ಟ್ವಿಸ್ಟ್ ಕೊಟ್ಟಿದೆ. ಏನು ಅರಿಯದ ಮಗು ಬಿಡಿಸಿದ ಚಿತ್ರದಲ್ಲಿ ಇದು ಕೊಲೆ ಎಂದು ಪರಿಗಣಿಸಲಾಗಿದೆ. ಸದ್ಯ ಈ ಸುದ್ದಿ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ.

ಉತ್ತರಪ್ರದೇಶದ ಝಾನ್ಸಿಯ ಕೋಟ್ವಾಲಿ ಎಂಬ ಪ್ರದೇಶದ ಪಂಚವಟಿ ಎಂಬಲ್ಲಿನ ಶಿವ ಪರಿವಾರ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು. ಇಲ್ಲಿನ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವುದಾಗಿ ಮಹಿಳೆಯ ಪತಿಯ ಸೋದರ ಸಂಬಂಧಿಗಳು ಮಹಿಳೆಯ ಮೃತಳ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಆದರೆ ಮೃತಳ ಪುಟ್ಟ ಮಗುವಿನ ಒಂದು ಸಣ್ಣ ಡ್ರಾಯಿಂಗ್ ಹಾಗೂ ಪುಟಾಣಿಯ ಹೇಳಿಕೆಯಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿಲ್ಲ, ಪತಿಯೇ ತನ್ನ ಪತ್ನಿಯನ್ನು ಸಾಯಿಸಿ ಬಳಿಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲಾಗಿದ್ದಾನೆ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.
ಇನ್ನೂ ಮೃತಪಟ್ಟ ಮಹಿಳೆಯನ್ನು ಸೋನಾಲಿ ಬುಢೋಲಿಯಾ ಎಂದು ಗುರ್ತಿಸಲಾಗಿದ್ದು, ಆಕೆಯ ಪತಿ ಸಂದೀಪ್ ಬುಢೋಲಿಯಾ ಎಂದು ಗುರ್ತಿಸಲಾಗಿದೆ. ಸಂದೀಪ್ ಮೆಡಿಕಲ್ ರೆಪ್ರೆಸೆಂಟೇಟೀವ್ ಆಗಿ ಕೆಲಸ ಮಾಡುತ್ತಿದ್ದ. ಈ ದಂಪತಿಯ ಮಗು ದರ್ಶೀತಾ ಗೀಚಿದ ಡ್ರಾಯಿಂಗ್ ನಿಂದ ತನ್ನ ತಂದೆ ತಾಯಿಯನ್ನು ಕೊಲೆ ಮಾಡಿದ ರಹಸ್ಯ ಹೊರಬಂದಂತಾಗಿದೆ. ಅಪ್ಪ ಅಮ್ಮನಿಗೆ ಹೊಡೆದಿದ್ದ, ಆತನೇ ನೇಣು ಹಾಕಿದ್ದಾನೆ, ಆಕೆಯ ತಲೆಗೆ ಕಲ್ಲಿನಿಂತ ಹೊಡೆದಿದ್ದ. ನಂತರ ಚೀಲದಲ್ಲಿ ತುಂಬಿದ್ದ , ನೀನು ಅಮ್ಮನನ್ನು ಹೊಡೆದರೆ ನಾನು ನಿನ್ನ ಕೈ ಮುರಿಯುತ್ತೇನೆ ಎಂದು ಹೇಳಿದ್ದಾಗಿ ಮಗು ಹೇಳಿದೆ. ನನಗೂ ಕೂಡ ಹೊಡೆಯುತ್ತಿದ್ದ ಎಂದು ಹೇಳಿದ್ದಾಳೆ. ತಾನು ಕಂಡ ಭೀಕರ ಘಟನೆಯನ್ನು ತನ್ನದೇ ಆದ ಶೈಲಿಯಲ್ಲಿ ಚಿತ್ರ ಬಿಡಿಸಿ ಈ ಶಾಕಿಂಗ್ ಮಾಹಿತಿಯನ್ನು ಹೊರಹಾಕಿದ್ದಾಳೆ ಈ ಪುಟ್ಟ ಮಗು.
ಇನ್ನೂ ಮೃತಳ ತಂದೆ ಮಹಿಳೆಯ ತಂದೆ ಸಂಜೀವ್ ತ್ರಿಪಾಠಿ ಹೇಳುವಂತೆ ತಮ್ಮ ಕುಟುಂಬವು ವರದಕ್ಷಿಣೆಯಾಗಿ ಆತನಿಗೆ 20 ಲಕ್ಷ ರೂಪಾಯಿ ನಗದು ಮತ್ತು ಇತರೆ ಉಡುಗೊರೆ ನೀಡಿದ್ದೆವು. ಆದರೆ ಮದುವೆಯಾದ ಕೂಡಲೇ ಹೆಚ್ಚುವರಿ ವರದಕ್ಷಿಣೆ ಹಾಗೂ ಕಾರಿಗಾಗಿ ಬೇಡಿಕೆ ಇಟ್ಟಿದ್ದರು. ಬೇಡಿಕೆ ಈಡೇರದಿದ್ದಾಗ ಆಕೆಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡಲು ಶುರು ಮಾಡಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಬಳಿಕ ಪೊಲೀಸರು ಮಾತುಕತೆ ನಡೆಸಿ ಸಂಧಾನ ನಡೆಸಿದ್ದರು.
ಆದರೆ ಮಗು ಹುಟ್ಟಿದ ಬಳಿಕ ಅವರಿಬ್ಬರ ನಡುವೆ ಮತ್ತಷ್ಟು ಮನಸ್ತಾಪ ಬೆಳೆಯಿತು. ಸಂದೀಪ್ ಗಂಡು ಮಗು ಬೇಕು ಎಂದುಕೊಂಡಿದ್ದ. ಹೆಣ್ಣು ಮಗು ಜನಿಸಿದ ಕಾರಣ ಮಗು ಹಾಗೂ ಸೋನಾಲಿಯನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದರಿಂದ ನಾನೇ ಆಸ್ಪತ್ರೆಯ ಬಿಲ್ ಪಾವತಿಸಿ ಅವರನ್ನು ನನ್ನ ಮನೆಗೆ ಕರೆದುಕೊಂಡು ಬಂದಿದ್ದೆ ಎಂದು ಮೃತಳ ತಂದೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.