HomeStateCrime News: ಲೇಡಿಸ್ ಪಿಜಿಗೆ ಎಂಟ್ರಿ ಕೊಟ್ಟು, ಯುವತಿಯೊಬ್ಬಳ ಕತ್ತು ಕೊಯ್ದು ಕೊಲೆ, ಪ್ರಿಯಕರನೇ ಕೊಲೆ...

Crime News: ಲೇಡಿಸ್ ಪಿಜಿಗೆ ಎಂಟ್ರಿ ಕೊಟ್ಟು, ಯುವತಿಯೊಬ್ಬಳ ಕತ್ತು ಕೊಯ್ದು ಕೊಲೆ, ಪ್ರಿಯಕರನೇ ಕೊಲೆ ಮಾಡಿರುವ ಶಂಕೆ…!

ಲೇಡಿಸ್ ಪಿಜಿಯಲ್ಲಿದ್ದ ಬಿಹಾರ ಮೂಲದ ಯುವತಿಯೊಬ್ಬಳ ಕತ್ತು ಕೊಯ್ದು ಬರ್ಬರವಾಗಿ ಕೊಲೆ (Crime News) ಮಾಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ. ಮೃತ ಯುವತಿಯನ್ನು ಬಿಹಾರ ಮೂಲದ 24 ವರ್ಷದ ಕೃತಿ ಕುಮಾರಿ ಎಂದು ಗುರ್ತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ ಕೋರಮಂಗಲದ ವಿ.ಆರ್‍. ಲೇಔಟ್ ಪಿಜಿಯಲ್ಲಿದ್ದಳು. ನಿನ್ನೆ ರಾತ್ರಿ 11 ಗಂಟೆಯ ಸುಮಾರಿನಲ್ಲಿ ಆಕೆಯನ್ನು ಕೊಲೆ (Crime News) ಮಾಡಲಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಕೋರಮಂಗಲದ ವಿ.ಆರ್‍. ಲೇಔಟ್ ಪಿಜಿ ಕಟ್ಟಡದ ಮೂರನೇ ಮಹಡಿಯ ರೂಮ್ ನಲ್ಲಿದ್ದ ಮೃತ ಕೃತಿ ಕುಮಾರಿಯನ್ನು ಭೇಟಿಯಾಗಲು ಯುವಕನೋರ್ವ ಬಂದಿದ್ದ, ಆತ ಚಾಕು ಹಿಡಿದು ಎಂಟ್ರಿ ಕೊಟ್ಟಿದ್ದ ಎನ್ನಲಾಗಿದೆ. ರೂಮ್ ಸಮೀಪವೇ ಆಕೆಯ ಕತ್ತು ಕೊಯ್ಡು ಕೊಲೆ ಮಾಡಿದ್ದಾನೆ(Crime News)  ಎನ್ನಲಾಗಿದೆ. ಇನ್ನೂ ಸ್ಥಳದಲ್ಲಿಯೇ ಮೃತ ಯುವತಿ ಸಾವನ್ನಪ್ಪಿದ್ದಾಳೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿದ ಆರೋಪಿ ಆಕೆಗೆ ಪರಿಚಯಸ್ಥ ಎಂಬ ಅನುಮಾನ ಸಹ (Crime News) ವ್ಯಕ್ತವಾಗಿದೆ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bihar women murdered in bangalore 0

ಈ ಸಂಬಂಧ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಮಾಹಿತಿ ನೀಡಿದ್ದಾರೆ. ಕೋರಮಂಗಲದಲ್ಲಿ ರಾತ್ರಿ ಯುವತಿಯೊಬ್ಬಳನ್ನು ಪಿಜಿಯಲ್ಲಿ ಕೊಲೆ (Crime News) ಮಾಡಲಾಗಿದೆ. ಕೊಲೆ ಮಾಡಿದ ಆರೋಪಿ ಪರಾರಿಯಾಗಿದ್ದಾನೆ, ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ. ಬಿಹಾರ ಮೂಲದ ಈ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಕೊಲೆ (Crime News) ಮಾಡಲು ಕಾರಣ, ಮಾಡಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇನ್ನೂ ಕೃತಿ ಕುಮಾರಿ ಮೊಬೈಲ್ ಪರಿಶೀಲನೆ ನಡೆಸಲಾಗುತ್ತಿದೆ. ಆಕೆಯ ಕಾಲ್ ಡಿಟೈಸ್ ಹಾಆಗೂ ಸಿಡಿಆರ್‍ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಕೊನೆಯದಾಗಿ ಆಕೆ ಯಾರಿಗೆ ಕಾಲ್ ಮಾಡಿದ್ದಾರೆ. ಕೊನೆಯದಾಗಿ ಆಕೆಗೆ ಯಾವ ಯಾವ ನಂಬರ್‍ ನಿಂದ ಕರೆ ಬಂದಿದೆ ಎಂದು ಪರಿಶೀಲನೆ ಮಾಡಲಾಗುತ್ತಿದ್ದೆ. ಜೊತೆಗೆ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೂ ಕೃತಿ ಕುಮಾರಿ ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆ (Crime News) ನಡೆದಿದೆ ಎಂಬ ಅನುಮಾನ ಸಹ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular