ಭಜನೆ ಮಾಡುತ್ತಿದ್ದ ಮಹಿಳೆಯರ ಮುಂದೆ ಅರೆನಗ್ನವಾಗಿ ಕುಳಿತ ಸಬ್ ಇನ್ಸ್ ಪೆಕ್ಟರ್, ವೈರಲ್ ಆದ ವಿಡಿಯೋ….!

ಅನೇಕ ಮಹಿಳೆಯರು ಭಜನೆ ಮಾಡುತ್ತಾ ಕುಳಿತಿದ್ದ ಸಮಯದಲ್ಲಿ ಓರ್ವ ವ್ಯಕ್ತಿ ಅರೆನಗ್ನವಾಗಿ ಕುಳಿತುಕೊಂಡಿರುವ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಪೊಲೀಸ್ ಪೇದೆಯೋರ್ವ ಭಜನೆ ಮಾಡುತ್ತಿದ್ದ ಮಹಿಳೆಯರ ಮುಂದೆ ಕೇವಲ ಅಂಡರ್‍ ವೇರ್‍ ಧರಿಸಿ ಕುಳಿತುಕೊಂಡಿದ್ದಾನೆ. ಆತನ ವಿರುದ್ದ ಇದೀಗ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

police half nude near womens 1

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಅಚಲ್ ಗಂಜ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಹಿಳೆಯರು ದೇವಾಲಯದ ಮುಂಭಾಗದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿರುತ್ತಾರೆ. ಮಹಿಳೆಯರು ತಲೆಗೆ ಸೆರಗನ್ನು ಧರಿಸಿದ್ದಾರೆ. ಅವರ ಸರಿ ವಿರುದ್ದ ದಿಕ್ಕಿನಲ್ಲಿ ಈ ಪೋಲಿಸಪ್ಪ ಅಂಡರ್‍ ವೇರ್‍ ಮಾತ್ರ ಧರಿಸಿ ಚೇರಿನ ಮೇಲೆ ಕುಳಿತು ಟೇಬಲ್ ಮೇಲಿದ್ದ ಏನೋ ಪದಾರ್ಥವನ್ನು ತಿನ್ನುತ್ತಿರುತ್ತಾನೆ. ಆತನನ್ನು ಸ್ಥಳೀಯ ಪೊಲೀಸ್ ಠಾಣೆಯೊಂದರ ಸಬ್ ಇನ್ಸ್ ಪೆಕ್ಟರ್‍ ಎಂದು ಗುರ್ತಿಸಲಾಗಿದೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಆತನ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಒಪೆನ್ ನೋಡಿ : https://x.com/MohtaPraveenn/status/1794607381000966214

ಇನ್ನೂ ಈ ವಿಡಿಯೋ ವೈರಲ್ ಮಾಡಿ ಉನ್ನಾವೋ ಪೊಲೀಸರನ್ನು ಟ್ವಿಟರ್‍ ನಲ್ಲಿ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಭಿಘಾಪುರದ ಸ್ಟೇಷನ್ ಅಧಿಕಾರಿಗೆ ಈ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಟ್ವಿಟರ್‍  ನಲ್ಲಿ ಮಾಹಿತಿ ನೀಡಲಾಗಿದೆ. ಈ ಕುರಿತು ಅರೆಬೆತ್ತಲೆಯಾಗಿ ಕುಳಿತ ಪೊಲೀಸ್ ಅಧಿಕಾರಿ ತಾನು ಉಟ್ಟಿದ ವೇಸ್ಟಿ ಹಾಗೂ ಟವಲ್ ತೊಳೆದು ಹಾಕಲಾಗಿತ್ತು. ಆ ಸಮಯದಲ್ಲಿ ಕರೆಂಟ್ ಹೋಗಿತ್ತು. ನಾನು ಸ್ನಾನ ಮಾಡುವ ಪ್ರದೇಶ ಸಹ ಅದೇ ತೆರೆದ ಪ್ರದೇಶದಲ್ಲಿರುವ ಕಾರಣ ಎರಡು ನಿಮಿಷ ನಾನು ಹಾಗೆಯೇ ಕುಳಿತಿದ್ದೆ. ಈ ವಿಡಿಯೋ ತೆಗೆದು ವೈರಲ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

Next Post

ಶಾಲಾ ಶಿಕ್ಷನಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, 7ನೇ ತರಗತಿ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಕಾಮುಕ….!

Tue May 28 , 2024
ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಕಠಿಣ ಕಾನೂನು ಇದ್ದರೂ, ಅದು ಕಾಮುಕರ ಕಣ್ಣಿಗೆ ಏನು ಅಲ್ಲ ಎಂಬಂತೆ ನೀಚ ಕೃತ್ಯಗಳಿಗೆ ಒಳಗಾಗುತ್ತಿರುತ್ತಾರೆ. ಗುರುವನ್ನು ಮೊದಲ ಸ್ಥಾನದಲ್ಲಿಡಲಾಗುತ್ತದೆ. ಆದರೆ ಅದೇ ಗುರು ಇದೀಗ ನೀಚ ಕೆಲಸ ಮಾಡಿ ಶಿಕ್ಷಕ ಎಂಬ ಪದಕ್ಕೆ ಕಳಂಕ ತಂದಿದ್ದಾನೆ. ಚಿಕ್ಕಬಳ್ಳಾಪುರದ ಶಿಕ್ಷಕನೋರ್ವ ಶಾಲೆಯಲ್ಲಿಯೇ 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆ ಇದೀಗ ಮೂರು ತಿಂಗಳ ಗರ್ಭಿಣಿಯಾಗಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಗ್ರಾಮಾಂತರ ಠಾಣಾ […]
school girl rapped in chikkaballapura
error: Content is protected !!