CM Siddaramaiah: ಡಿಕೆಶಿ ಪಕ್ಕದಲ್ಲಿರುವಾಗಲೇ ಅರ್ಹತೆ ಇರೋರು ಸಿಎಎಂ ಕುರ್ಚಿಗೆ ಟವೆಲ್ ಹಾಕ್ತಾರೆ ಎಂದ ಸಿಎಂ ಸಿದ್ದು….!

ಕರ್ನಾಟಕದ ವಿರೋಧ ಪಕ್ಷಗಳು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನವರ ಭಾಗಿಯಾಗಿದ್ದಾರೆ ಎಂದು ಅವರು ರಾಜಿನಾಮೆ ನೀಡಬೇಕೇಂದು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಮುಡಾ ಹಗರಣ (MUDA Scam) ಬಯಲು ಆಗಿರೋದು ಸಿಎಂ (CM Siddaramaiah) ಕುರ್ಚಿಗೆ ಟವೆಲ್ ಹಾಕಿದವರಿಂದ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ರಿಯಾಕ್ಟ್ ಆಗಿದ್ದಾರೆ. ನಮ್ಮಲ್ಲಿ ಅರ್ಹತೆ ಇರೋರು ತುಂಬಾ ಮಂದಿ ಇದ್ದಾರೆ. ಅರ್ಹತೆ ಇರೋರು ಸಿಎಂ ಆಗಲು ಟವಲ್ ಹಾಕುತ್ತಾರೆ ಎಂದಿದ್ದಾರೆ. ಈ ಸಮಯದಲ್ಲಿ ಸಿದ್ದರಾಮಯ್ಯನವರ ಪಕ್ಕ ಡಿಕೆಶಿ ಇದ್ದರು.

CM Siddaramaiah counter to HDK statement 1

ಮೈಸೂರು ಅಭಿವೃದ್ದ ಪ್ರಾಧಿಕಾರ (MUDA Scam) ಮುಡಾ ಹಗರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ರಾಜಿನಾಮೆ ನೀಡಬೇಕೆಂದು ವಿರೋಧ ಪಕ್ಷಗಳು ಜೋರು ಹೋರಾಟ ನಡೆಸುತ್ತಿವೆ. ಈ ನಡುವೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮುಡಾ ಹಗರಣ ಬಯಲಾಗಿರುವುದು ಮುಖ್ಯಮಂತ್ರಿಗಳ ಕುರ್ಚಿಗೆ ಟವೆಲ್​​ ಹಾಕಿದವರಿಂದಲೇ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಅಧಿಕಾರದಲ್ಲಿರುವ ಯಾರೂ ಬೇಕಾದರೂ ಟವೆಲ್ ಹಾಕಬಹುದು. ನಮ್ಮಲ್ಲಿ (CM Siddaramaiah)  ಸಿಎಂ ಸ್ಥಾನಕ್ಕೆ ಅರ್ಹತೆ ಇರುವವರು ತುಂಬಾ ಮಂದಿಯಿದ್ದಾರೆ. ಅರ್ಹತೆ ಇರೋರು ಸಿಎಂ ಆಗಲು ಟವೆಲ್ ಹಾಕುತ್ತಾರೆ. ಟವೆಲ್ ಹಾಕಿದವರು ಯಾರು ಅಂತಾ ಹೆಚ್.ಡಿ.ಕುಮಾರಸ್ವಾಮಿಯವರನ್ನೇ ಕೇಳಿ ಎಂದು ಟಾಂಗ್ ನೀಡಿದ್ದಾರೆ. ಈ ಸಮಯದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‍ (D K Shivakumar) ಸಿದ್ದರಾಮಯ್ಯನವರ ಪಕ್ಕದಲ್ಲೇ ಕುಳಿತಿದ್ದರು.

Siddarmaaiah comments about budget 0

ಇನ್ನೂ ಮುಡಾ ಹಗರಣದ ಬಗ್ಗೆ ರಾಜ್ಯಪಾಲರು ವರದಿ ಕೇಳಿದ್ದಾರೆ. ಎಲ್ಲವೂ ಕಾನೂನಿನ ಪ್ರಕಾರವೇ ನಡೆದಿದೆ ಅಂತಾ ವರದಿ ನೀಡುತ್ತೇವೆ. ನಮ್ಮ ಜಮೀನು ಮುಡಾ ಅಕ್ರಮವಾಗಿ ಬಳಸಿಕೊಂಡಿರುವುದೇ ತಪ್ಪು, ವಿಜಯನಗರ ಬಡಾವಣೆಯಲ್ಲಿ 125 ಸೈಟ್ ಗಳನ್ನು ಹಂಚಿದ್ದಾರೆ. ಅದರಲ್ಲಿ ನನ್ನದಾಗಲೀ ಅಥವಾ ನನ್ನ ಪತ್ನಿಯದ್ದಾಗಲೀ ಅಥವಾ ಬಾಮೈದನ ಪಾತ್ರ ಇದೆಯೇ, 2014 ರಲ್ಲಿ ನನ್ನ ಬಾಮೈದ ಜಮೀನು ಖರೀದಿ ಮಾಡಿದ್ದಾನೆ. ಸೈಟ್ ಗಳ ಹಂಚಿಕೆ ಸಂಪೂರ್ಣವಾಗಿ ಕಾನೂನಿನ ಪ್ರಕಾರವೇ ನಡೆದಿದೆ ಎಂದರು. ಆದರೆ ನನ್ನ ಬಗ್ಗೆ ಅಪಪ್ರಚಾರ ಮಾಡಿ ತೇಜೋವಧೆ ಮಾಡಲು ಹಾಗೂ ನಾನು ಎರಡನೇ ಬಾರಿ ಸಿಎಂ (CM Siddaramaiah)  ಆಗಿದ್ದನ್ನು ಸಹಿಸಕೊಳ್ಳಲು ಆಗದೆ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

Next Post

Viral News: ಮದುವೆಯಾದ 3 ನಿಮಿಷಕ್ಕೆ ವಿಚ್ಚೇದನ ಪಡೆದುಕೊಂಡ ಜೋಡಿ, ಕಾರಣ ಏನು ಗೊತ್ತಾ?

Fri Jul 26 , 2024
Viral News, ಇಂದಿನ ಕಾಲದಲ್ಲಿ ಮದುವೆ, ವಿಚ್ಚೇದನಗಳು ತುಂಬಾನೆ ನಡೆಯುತ್ತಿರುತ್ತವೆ. ಕೆಲವು ಪ್ರಕರಣಗಳಲ್ಲಿ ಮದುವೆಯಾದ ಕೆಲವು ತಿಂಗಳು, ವರ್ಷಗಳ ಬಳಿಕ ವಿಚ್ಚೇದನ ಪಡೆದುಕೊಳ್ಳುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಮದುವೆಯಾದ ಮೂರೇ ನಿಮಿಷಗಳಲ್ಲಿ ಜೋಡಿಯೊಂದು ವಿಚ್ಚೇದನ ಪಡೆದುಕೊಂಡಿದೆ. ಈ ಜೋಡಿ ವಿಚ್ಚೇದನ ಪಡೆದುಕೊಂಡಿದ್ದು ಏಕೆ ಎಂಬುದನ್ನು ತಿಳಿದರೇ ನೀವು ಸಹ ಶಾಕ್ ಆಗುತ್ತೀರಾ… ಅಂದಹಾಗೆ ಈ ಘಟನೆ ನಡೆದಿರೋದು ಕಳೆದ 2019ರಲ್ಲಿ, ಆದರೆ ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ […]
Divorce in 3 min
error: Content is protected !!