Chikkaballapura – ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ಪ್ರೀತಿಸಿದ ಮಾವನ ಮಗಳೊಂದಿಗೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಮೃತ ಯುವಕನನ್ನು ಮಂಜುನಾಥ್ (27) ಎಂದು ಗುರುತಿಸಲಾಗಿದೆ. ಮಂಜುನಾಥ್, ಅಪ್ರಾಪ್ತ ವಯಸ್ಸಿನ ತನ್ನ ಸೋದರ ಮಾವನ ಮಗಳನ್ನು ಪ್ರೀತಿಸುತ್ತಿದ್ದ. ಅಷ್ಟೇ ಅಲ್ಲದೆ, ಅವಳನ್ನೇ ಮದುವೆಯಾಗಬೇಕೆಂದು ಕನಸು ಕಂಡಿದ್ದ. ಆದರೆ, ಈ ಪ್ರೀತಿಗೆ ಹುಡುಗಿಯ ತಂದೆ (ಮಂಜುನಾಥ್ ನ ಮಾವ) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಮಂಜುನಾಥ್, ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
Chikkaballapura – ಘಟನೆಯ ವಿವರ
ಅಜ್ಜವಾರ ಗ್ರಾಮದ ನಿವಾಸಿಯಾದ ಮಂಜುನಾಥ್, ಶಿಡ್ಲಘಟ್ಟ ತಾಲೂಕಿನಲ್ಲಿ ವಾಸಿಸುತ್ತಿದ್ದ ತನ್ನ ಸೋದರ ಮಾವನ ಅಪ್ರಾಪ್ತ ಮಗಳನ್ನು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ. ಇತ್ತೀಚೆಗೆ ಬಾಲಕಿಯ ಹುಟ್ಟುಹಬ್ಬವಿದ್ದುದರಿಂದ, ಮಂಜುನಾಥ್ ಆಕೆಯ ಮನೆಗೆ ಹೋಗಿ ಶುಭ ಕೋರಿದ್ದ. ಆದರೆ, ಅಲ್ಲಿ ಏನಾಯಿತೋ ಏನೋ, ಮಂಜುನಾಥ್ ಅಲ್ಲಿಂದ ವಾಪಸ್ ಮನೆಗೆ ಬಂದವನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಜುನಾಥ್‌ಗೆ ಕೇವಲ ಮೂರು ತಿಂಗಳಿರುವಾಗಲೇ ತಾಯಿ ನಾರಾಯಣಮ್ಮ ಮೃತಪಟ್ಟಿದ್ದರು. ಇದರಿಂದ ನಾರಾಯಣಮ್ಮನ ತವರು ಮನೆಯವರು, ಅಜ್ಜವಾರದ ಜಯಮ್ಮ ಎಂಬುವವರು ಮಂಜುನಾಥ್‌ನನ್ನು ಸಾಕಿದ್ದರು. ಈ ತಿಂಗಳ ಮೇ 20 ರಂದು ಮಂಜುನಾಥ್ ತನ್ನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದ. ಆದರೆ, ಇದಾಗಿ ನಾಲ್ಕು ದಿನಗಳಲ್ಲೇ ಆತ ದುರಂತ ಸಾವನ್ನಪ್ಪಿದ್ದಾನೆ.
ಮಂಜುನಾಥ್‌ನ ಮಾವನ ಮಗಳಿಗೆ ಇನ್ನೂ ಮದುವೆಯ ವಯಸ್ಸು ಆಗಿಲ್ಲ. ಮತ್ತೊಂದೆಡೆ ಮಂಜುನಾಥ್‌ಗೆ ಮದುವೆ ಮಾಡುವ ವಯಸ್ಸಾಗಿತ್ತು. ಹೀಗಾಗಿ ಬೇರೆ ಹುಡುಗಿಯನ್ನು ನೋಡಿ ಮದುವೆ ಮಾಡುತ್ತೇವೆಂದು ಮಾವನ ಮನೆ ಕಡೆಯವರು ಹೇಳಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೈಸೂರು: ಪ್ರೀತಿಸಿದವನೊಂದಿಗೆ ಮಗಳು ಮನೆಬಿಟ್ಟು ಹೋದಳು – ಮನನೊಂದು ಒಂದೇ ಕುಟುಂಬದ ಮೂವರ ಆತ್ಮಹತ್ಯೆ!
ಮೈಸೂರು (Mysuru) ಜಿಲ್ಲೆಯ ಹೆಚ್.ಡಿ. ಕೋಟೆ (HD Kote) ತಾಲೂಕಿನ ಬಂದನೂರಿನಲ್ಲಿ ಪ್ರೀತಿಸಿದ ಯುವಕನೊಂದಿಗೆ ಮಗಳು ಮನೆಬಿಟ್ಟು ಹೋಗಿದ್ದರಿಂದ ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
Read this also : ಚಿಕ್ಕಬಳ್ಳಾಪುರದಲ್ಲಿ ನಡೆದ ಮುಸ್ಲಿಂ ಯುವತಿ ಹಿಂದೂ ಯುವಕನ ಪ್ರೇಮ ವಿವಾಹ, ಪೊಲೀಸರ ಭದ್ರತೆ ಕೋರಿದ ನವಜೋಡಿ….!
ಮೃತಪಟ್ಟವರನ್ನು ಮಹದೇವಸ್ವಾಮಿ, ಅವರ ಪತ್ನಿ ಮಂಜುಳಾ ಹಾಗೂ ಮಗಳು ಹರ್ಷಿತಾ ಎಂದು ಗುರುತಿಸಲಾಗಿದೆ. ಈ ಮೂವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹದೇವಸ್ವಾಮಿ ಅವರ ಹಿರಿಯ ಪುತ್ರಿ ಅರ್ಪಿತಾ ಪ್ರೀತಿಸಿದ ಯುವಕನೊಂದಿಗೆ ಮನೆಬಿಟ್ಟು ಹೋಗಿದ್ದಳು. ಈ ಹಿನ್ನೆಲೆ ಮನನೊಂದ ಕುಟುಂಬ ಇಂತಹ ದುರದೃಷ್ಟಕರ ನಿರ್ಧಾರವನ್ನು ತೆಗೆದುಕೊಂಡಿದೆ.
ಏನಿದು ಘಟನೆ?
ಬೂದನೂರು ಕೆರೆಯ ಏರಿ ಮೇಲೆ ಬೈಕ್ ಹಾಗೂ ಮೂವರ ಚಪ್ಪಲಿಗಳು ಪತ್ತೆಯಾಗಿವೆ. ಈ ಹಿನ್ನೆಲೆ ಪೊಲೀಸರು ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಸದ್ಯ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಕೆರೆಯಿಂದ ಹೊರತೆಗೆಯಲಾಗಿದೆ. ಈ ದುರ್ಘಟನೆ ಹೆಚ್.ಡಿ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.