Love Marriage : ಚಿಕ್ಕಬಳ್ಳಾಪುರದಲ್ಲಿ ನಡೆದ ಮುಸ್ಲಿಂ ಯುವತಿ ಹಿಂದೂ ಯುವಕನ ಪ್ರೇಮ ವಿವಾಹ, ಪೊಲೀಸರ ಭದ್ರತೆ ಕೋರಿದ ನವಜೋಡಿ….!

Love Marriage – ಪ್ರೀತಿಯ ಬಂಧನಕ್ಕೆ ಜಾತಿ, ಧರ್ಮದ ಬೇಲಿ ಇಲ್ಲ ಎಂಬುದನ್ನು ನಿಜವಾಗಿಸಿದೆ ಚಿಕ್ಕಬಳ್ಳಾಪುರದ ಈ ಜೋಡಿ. ಇಲ್ಲೊಬ್ಬ ಮುಸ್ಲಿಂ ಯುವತಿ, ಹಿಂದೂ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಅಂತರ್‌ಧರ್ಮೀಯ ವಿವಾಹಕ್ಕೆ ಕುಟುಂಬದವರಿಂದ ವಿರೋಧ ವ್ಯಕ್ತವಾಗಿದೆ. ಹೀಗಾಗಿ, ನವವಿವಾಹಿತರು ರಕ್ಷಣೆ ಕೋರಿ ಪೊಲೀಸರ ಸಹಾಯ ಯಾಚಿಸಿದ್ದಾರೆ.

Interfaith Love Marriage in Chikkaballapur – Muslim Girl and Hindu Boy Seek Police Protection

Love Marriage – ನಾಲ್ಕು ವರ್ಷಗಳ ಪ್ರೇಮಕ್ಕೆ ಸಿಕ್ಕಿತು ಮದುವೆಯ ಬಂಧನ!

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ನಜ್ಮಾ ಮತ್ತು ಚಿಕ್ಕಬಳ್ಳಾಪುರ ತಾಲೂಕಿನ ಯಾಪಲಹಳ್ಳಿ ಗ್ರಾಮದ ಹರೀಶ್ ಬಾಬು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಚಿಕ್ಕಬಳ್ಳಾಪುರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಮನೆಯವರ ವಿರೋಧದ ನಡುವೆಯೂ ತಮ್ಮ ಪ್ರೀತಿಯನ್ನು ಮುಂದುವರೆಸಿಕೊಂಡು ಬಂದ ಈ ಜೋಡಿ, ಕೊನೆಗೂ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. Read this also : ಪೋಷಕರ ವಿರೋಧದ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿಕ್ಕಬಳ್ಳಾಪುರದ ಹಿಂದೂ-ಮುಸ್ಲಿಂ ಜೋಡಿ….!

Interfaith Love Marriage in Chikkaballapur – Muslim Girl and Hindu Boy Seek Police Protection

Love Marriage – ಮನೆಯವರ ವಿರೋಧ, ಪೊಲೀಸ್ ರಕ್ಷಣೆ ಕೋರಿದ ಜೋಡಿ!

ಹಿಂದೂ ಯುವಕನೊಂದಿಗೆ ಮದುವೆಯಾಗುವುದನ್ನು ನಜ್ಮಾ ಅವರ ಮನೆಯವರು ತೀವ್ರವಾಗಿ ವಿರೋಧಿಸಿದ್ದರು ಎನ್ನಲಾಗಿದೆ. ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗುವ ಮುನ್ನವೇ ನಜ್ಮಾ, ತನ್ನ ಪ್ರಿಯಕರ ಹರೀಶ್ ಬಾಬು ಜೊತೆ ಹಸೆಮಣೆ ಏರಿದ್ದಾರೆ. ಪೋಶೆಟ್ಟಿಹಳ್ಳಿ ಬಳಿಯ ದೇವಸ್ಥಾನದಲ್ಲಿ ನಡೆದ ಈ ಸರಳ ವಿವಾಹದಲ್ಲಿ ಹರೀಶ್ ಸಂತಸದಿಂದ ತಮ್ಮ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಅನ್ಯ ಧರ್ಮದ ವಿವಾಹವಾದ ಕಾರಣಕ್ಕೆ ಹುಡುಗಿಯ ಮನೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ರಕ್ಷಣೆ ಕೋರಿ ನವವಿವಾಹಿತ ಜೋಡಿ ಪೊಲೀಸರ ಮೊರೆ ಹೋಗಿದೆ.

Leave a Comment

Your email address will not be published. Required fields are marked *

Scroll to Top