ಕಾಡಿನ ರಾಜನಾದ ಸಿಂಹ ಅಥವಾ ಹುಲಿಗಳ ನಂತರ ಅಷ್ಟೇ ವೇಗವಾಗಿ ಬೇಟೆಯಾಡುವ ಪ್ರಾಣಿ ಎಂದರೆ ಅದು ಚಿರತೆ. ಚಿರತೆ ಕಣ್ಣಿಗೆ ನಾಯಿ ಬಿದ್ದರೆ ಸಾಕು, ಕ್ಷಣಾರ್ಧದಲ್ಲಿ ಅದರ ಕಥೆ ಮುಗಿದೇ ಹೋಗುತ್ತದೆ. ಆದರೆ, ಇಲ್ಲೊಂದು ಕಡೆ ಕಥೆ ಉಲ್ಟಾ ಆಗಿದೆ. ಬೇಟೆಯಾಡಲು ಬಂದ ಚಿರತೆಯನ್ನೇ ನಾಯಿಯೊಂದು ಅಟ್ಟಾಡಿಸಿ ಓಡಿಸಿದ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

CCTV Video – ಘಟನೆ ನಡೆದಿದ್ದು ಎಲ್ಲಿ?
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ್ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಡಿಸೆಂಬರ್ 15ರ ಮುಂಜಾನೆ ಸುಮಾರು 4:50ರ ಸಮಯದಲ್ಲಿ ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಕಾಣುವಂತೆ, ಮುಂಜಾನೆಯ ನೀರವ ಮೌನದಲ್ಲಿ ಮನೆಯೊಂದರ ಕಾಂಪೌಂಡ್ ಒಳಗೆ ಚಿರತೆಯೊಂದು ಸದ್ದಿಲ್ಲದೆ ಪ್ರವೇಶಿಸುತ್ತದೆ. ಅಲ್ಲಿಯೇ ನಿಂತಿದ್ದ ನಾಯಿಯನ್ನು ಗುರಿಯಾಗಿಸಿಕೊಂಡು, ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ, ಅತಿ ಜಾಗರೂಕತೆಯಿಂದ ಚಿರತೆ ಮುನ್ನಡೆಯುವುದನ್ನು ಕಾಣಬಹುದು. ಚಿರತೆಯ ಬಾಡಿ ಲಾಂಗ್ವೇಜ್ ನೋಡಿದರೆ, ಅದು ಪಕ್ಕಾ ಪ್ಲಾನ್ ಮಾಡಿಕೊಂಡೇ ಬೇಟೆಗೆ ಇಳಿದಿತ್ತು ಎಂಬುದು ಸ್ಪಷ್ಟವಾಗುತ್ತದೆ. Read this also : ಕಾಡಿನಿಂದ ನಾಡಿಗೆ ಬಂದ ಚಿರತೆ (Leopard) ಮರಿ, ಭಯಬೀತರಾದ ಗುಡಿಬಂಡೆ ಜನತೆ, ಕಾರಿನ ಸೀಟಿನಡಿ ಕುಳಿತಿದ್ದ ಚಿರತೆ ಸುರಕ್ಷಿತವಾಗಿ ಸೆರೆ…!
CCTV Video – ಸೀನ್ ಉಲ್ಟಾ ಆಗಿದ್ದು ಹೇಗೆ?
ಚಿರತೆ ಇನ್ನೇನು ನಾಯಿಯ ಮೇಲೆರಗಬೇಕು ಎನ್ನುವಷ್ಟರಲ್ಲಿ, ನಾಯಿ ಎಚ್ಚೆತ್ತುಕೊಂಡಿದೆ. ಸಾಮಾನ್ಯವಾಗಿ ಚಿರತೆಯನ್ನು ಕಂಡರೆ ಪ್ರಾಣಿಗಳು ಪ್ರಾಣಭಯದಿಂದ ಓಡಿಹೋಗುತ್ತವೆ. ಆದರೆ ಈ ನಾಯಿ ಹಾಗೆ ಮಾಡಲಿಲ್ಲ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು “ಮಾಡು ಇಲ್ಲವೇ ಮಡಿ” ಎಂಬಂತೆ ಚಿರತೆಯ ಮೇಲೆಯೇ ಪ್ರತ್ಯಾಕ್ರಮಣ ಮಾಡಿದೆ! ನಾಯಿಯ ಈ ಅನಿರೀಕ್ಷಿತ ಮತ್ತು ರೌದ್ರಾವತಾರವನ್ನು ಕಂಡ ಚಿರತೆ ಒಂದು ಕ್ಷಣ ಕಂಗಾಲಾಗಿದೆ. ನಾಯಿಯ ಬೊಗಳುವಿಕೆ ಮತ್ತು ಧೈರ್ಯಕ್ಕೆ ಹೆದರಿ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
CCTV Video – ನೆಟ್ಟಿಗರ ಪ್ರತಿಕ್ರಿಯೆ ಏನು?
‘@nextminutenews7’ ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. “ಇದು ನಿಜವಾದ ಧೈರ್ಯ,” ಎಂದು ಕೆಲವರು ಕಮೆಂಟ್ ಮಾಡಿದರೆ, “ತನ್ನ ಪ್ರಾಣದ ಮೇಲೆ ಆಸೆ ಇದ್ದರೆ ಎಂಥವರೂ ಹೋರಾಡುತ್ತಾರೆ ಎಂಬುದಕ್ಕೆ ಈ ನಾಯಿಯೇ ಸಾಕ್ಷಿ,” ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಬಲಿಷ್ಠನಾದವನು ಯಾವಾಗಲೂ ಗೆಲ್ಲುವುದಿಲ್ಲ, ಧೈರ್ಯವಿದ್ದವನು ಗೆಲ್ಲುತ್ತಾನೆ ಎಂಬುದನ್ನು ಈ ನಾಯಿ ಸಾಬೀತುಪಡಿಸಿದೆ.
