ಲೋಕಸಭಾ ಚುನಾವಣೆ 2024 ರ ನಿಮಿತ್ತ ಮೇ.13 ರಂದು ಮತದಾನ ನಡೆದಿದೆ. ಈ ಬಾರಿ ಹೈದರಾಬಾದ್ ಲೋಕಸಭಾ ಕ್ಷೇತ್ರ ಹೈ ವೋಲ್ಟೇಜ್ ಕದನವಾಗಿದೆ ಎಂದು ಹೇಳಬಹುದಾಗಿದೆ. AIMIM ಪಕ್ಷದಿಂದ ಅಸಾದುದ್ದೀನ್ ಓವೈಸಿ ಹೈದರಾಬಾದ್ ನಿಂದ ಕಣಕ್ಕಿಳಿದಿದ್ದಾರೆ. ಅವರ ವಿರುದ್ದವಾಗಿ ಬಿಜೆಪಿಯಿಂದ ಕೆ.ಮಾಧವಿ ಲತಾ ಸ್ಪರ್ಧೆ ಮಾಡಿದ್ದಾರೆ. ಇದೀಗ ಅಭ್ಯರ್ಥಿ ಮಾದವಿ ಲತಾ ಮತಗಟ್ಟೆಯೊಂದರಲ್ಲಿ ಬುರ್ಖಾ ಧರಿಸಿದ ಮುಸ್ಲೀಂ ಮಹಿಳೆಯರ ನಿಖಾಬ್ ತೆಗೆಯುವಂತೆ ಹೇಳಿ ಗುರುತಿನ ಚೀಟಿಗಳನ್ನು ಪರಿಶೀಲನೆ ಮಾಡಿದ್ದು ವಿವಾದವಾಗಿದ್ದು. ಆಕೆಯ ವಿರುದ್ದ ದೂರು ಸಹ ನೀಡಲಾಗಿದೆ.
ಮೇ.13 ಸೋಮವಾರದಂದು ಹೈದರಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕೆ.ಮಾಧವಿ ಲತಾ ಸ್ಫರ್ಧೆ ಮಾಡಿದ್ದಾರೆ. ಅಮೃತ ವಿದ್ಯಾಲಯದಲ್ಲಿ ಮತದಾನ ಮಾಡಿದ ಬಳಿಕ ಆಕೆ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿದ್ದರು. ಆಜಂಪುರದಲ್ಲಿ ಮತದಾನ ಮಾಡಲು ಕಾಯುತ್ತಿರುವ ಮಹಿಳೆಯರ ಗುರುತಿಮ ಚೀಟಿ ಪರಿಶೀಲನೆ ಮಾಡಿದ್ದಾರೆ. ಅವರ ಗುರುತಿನ ಚೀಟಿಗಳನ್ನು ಪರಿಶೀಲನೆ ಮಾಡಿದ ಬಳಕ ಮತದಾನ ಮಾಡಬೇಕೆಂದು ಮತಗಟ್ಟೆ ಅಧಿಕಾರಿಗಳನ್ನು ಕೇಳಿದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಈ ಸಂಬಂಧ ಹೈದರಾಬಾದ್ ಕ್ಷೇತ್ರದ ಹಾಲಿ ಸಂಸದ ಅಸಾದುದ್ದೀನ್ ಓವೈಸಿ ಅವರ AIMIM ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು ಮಾಧವಿ ಲತಾ ರವರ ವಿರುದ್ದ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಈ ಕುರಿತು ಮಾಧವಿ ಲತಾ ರಿಯಾಕ್ಟ್ ಆಗಿದ್ದು, ನಾನು ಅಭ್ಯರ್ಥಿಯಾಗಿದ್ದು, ಕಾನೂನಿನ ಪ್ರಕಾರ ಫೇಸ್ ಮಾಸ್ಕ್ ಇಲ್ಲದೇ ಗುರುತಿನ ಚೀಟಿಗಳನ್ನು ಪರಿಶೀಲನೆ ಮಾಡುವ ಹಕ್ಕು ಹೊಂದಿರುತ್ತೇನೆ. ನಾನು ಪುರುಷ ಅಲ್ಲ, ಮಹಿಳೆಯಾಗಿದ್ದೇನೆ. ತುಂಬಾ ವಿನಮ್ರತೆಯಿಂದ ನಾನು ಅವರ ಐಡಿ ಕಾರ್ಡ್‌ಗಳನ್ನು ತೋರಿಸಿ, ನಾನು ಪರಿಶೀಲನೆ ನಡೆಸಬಹುದೇ ಎಂದು ಕೇಳಿದ್ದೇನೆ. ಮತದಾರರ ಪಟ್ಟಿಯಲ್ಲಿ ಹಲವು ವ್ಯತ್ಯಾಸಗಳಿದ್ದು, ನಾನು ಪರಿಶೀಲನೆ ಮಾಡಿದ್ದೇನೆ. ಪೊಲೀಸ್ ಸಿಬ್ಬಂದಿ ತುಂಬಾ ದಡ್ಡರಂತೆ ಕಾಣುತ್ತಾರೆ. ಅವರು ಸಕ್ರಿಯರಾಗಿಲ್ಲ. ಏನೂ ಪರಿಶೀಲನೆ ಮಾಡುತ್ತಿಲ್ಲ. ಸೀನಿಯರ್ ವೋಟರ್ಸ್ ಬಂದರೂ ಅವರ ಹೆಸರನ್ನು ಪಟ್ಟಿಯಿಂದ ಅಳಿಸಲಾಗಿದೆ. ಅವರಲ್ಲಿ ಕೆಲವರು ಗೋಶಾಮಹಲ್ ನಿವಾಸಿಗಳು ಆದರೆ ಅವರ ಹೆಸರುಗಳು ರಂಗಾರೆಡ್ಡಿ ಪಟ್ಟಿಯಲ್ಲಿವೆ ಎಂದು ಎ.ಎನ್.ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುವಾಗ ಹೇಳಿದ್ದಾರೆ.