ವಿದ್ಯಾರ್ಥಿಗಳ ಮೇಲೆ 4 ವರ್ಷಗಳಿಂದ ಲೈಂಗಿಕ ದೌರ್ಜನ್ಯವೆಸಗಿದ ಮೌಲ್ವಿ, ಮಕ್ಕಳು ಮಾಡಿದ್ದೇನು ಗೊತ್ತಾ?

ಪ್ರತಿನಿತ್ಯ ಒಂದಲ್ಲ ಒಂದು ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಕೇಳುತ್ತಲೇ ಇರುತ್ತೇವೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನಿದ್ದರೂ ಸಹ ದೌರ್ಜನ್ಯಗಳು ಮಾತ್ರ ನಿಲ್ಲುತ್ತಿಲ್ಲ ಎಂಬುದು ಬೇಸರದ ಸಂಗತಿ ಎನ್ನಬಹುದು. ಇದೀಗ ಮಸೀದಿಯ ಮೌಲ್ವಿಯೊಬ್ಬರು ಮಕ್ಕಳ ಮೇಲೆ ನಿರಂತರವಾಗಿ ನಾಲ್ಕು ವರ್ಷಗಳಿಂದ ಲೈಂಗಿಕ ದೌರ್ಜನ್ಯವೆಸಗುತ್ತಿದ್ದರಂತೆ. ಇದರಿಂದ ಬೇಸತ್ತ ಮಕ್ಕಳು ಮೌಲ್ವಿಗೆ ಸರಿಯಾದ ಪಾಠವನ್ನೇ ಕಲಿಸಿದ್ದಾರೆ. ಅಷ್ಟಕ್ಕೂ ಮಕ್ಕಳು ಮಾಡಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ರಾಜಸ್ಥಾನದ ಅಜ್ಮೀರದ ಮೊಹಮದಿ ಮದೀನಾ ಮಸೀದಿಯ ಮೌಲ್ವಿ ಮೊಹಮದ್ ತಾಹಿರ್‍ ಎಂಬಾತ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದನಂತೆ. ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅತ್ಯಾಚಾರವೆಸಗುತ್ತಿದ್ದನಂತೆ. ಇದರಿಂದ ಬೇಸರಗೊಂಡ ಮಕ್ಕಳು ದೊಡ್ಡ ನಿಧಾರ ತೆಗೆದುಕೊಂಡಿದ್ದಾರೆ. ಈ ಘಟನೆ ಕಳೆದ ಏಪ್ರಿಲ್ 26 ರಂದು ನಡೆದಿದೆ ಎಂದು ತಿಳಿದುಬಂದಿದೆ. ಲೈಂಗಿಕ ಕಿರುಕುಳ ತಾಳಲಾರದೇ ವಿದ್ಯಾರ್ಥಿಗಳು ಮೂವತ್ತು ವರ್ಷದ ಮೌಲಾನಾ ಮೊಹಮದ್ ತಾಹಿರ್‍ ಎಂಬಾತನನ್ನು ಕೊಲೆ ಮಾಡಿದ್ದಾರೆ. ಮೌಲ್ವಿಯನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

sexual harassment madrasa students 2

ಇನ್ನೂ ಮೌಲಾನಾ ಮಕ್ಕಳಿಗೆ ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳನ್ನು ತೋರಿಸಿ ಅತ್ಯಾಚಾರ ಮಾಡುತ್ತಿದ್ದನಂತೆ. ಕಳೆದ ನಾಲ್ಕು ವರ್ಷಗಳಿಂದ ಇದೇ ಚಾಳಿಯನ್ನು ಮುಂದುವರೆಸುಕೊಂಡು ಬರುತ್ತಿದ್ದನಂತೆ. ಇದರಿಂದ ಮನನೊಂದ ಸಂತ್ರಸ್ತ ಬಾಲಕರು ರಾಯತಾದಲ್ಲಿ ನಿದ್ರೆ ಮಾತ್ರ ಬೆರೆಸಿ ಮೌಲಾನಾಗೆ ನೀಡಿದ್ದಾರೆ. ಅದನ್ನು ಕುಡಿದ ಮೌಲಾನಾ ನಿದ್ದೆಗೆ ಜಾರಿದ್ದಾನೆ. ಬಳಿಕ ದೊಣ್ಣೆಯಿಂದ ಮೌಲ್ವಿಯ ತಲೆಗೆ ಹೊಡೆದಿದ್ದಾರೆ. ಬಳಿಕ ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇನ್ನೂ ಈ ಮೌಲ್ವಿ ಅಜ್ಮೀರ್‍ ನ ಕಾಂಚನ್ ನಗರದಲ್ಲಿರುವ ಮೊಹಮದಿ ಮದೀನಾ ಮಸೀದಿಗೆ ಸೇರಿದಂತವರು. ಇನ್ನೂ ವಿಚಾರಣೆಯ ವೇಳೆ ಮೌಲ್ವಿ ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಕಾರಣದಿಂದ ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಮೌಲಾನಾ ಜೊತೆಗೆ 15 ಮಕ್ಕಳು ವಾಸ ಮಾಡುತ್ತಿದ್ದರು. ಮೌಲ್ವಿ ಕೊಲೆಯಾದ ದಿನ 10 ಮಂದಿ ಮಕ್ಕಳು ಮನೆಗೆ ಹೋಗಿದ್ದರು. ಕೇವಲ ಐದು ಮಕ್ಕಳು ಮಾತ್ರ ಇದ್ದರು ಎನ್ನಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಬಾಲಕರನ್ನು ಬಂಧನ ಮಾಡಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

Scroll to Top