Teacher Kidnap – ಶಿಕ್ಷಕರೊಬ್ಬರನ್ನು ಕಿಡ್ನಾಪ್ ಮಾಡಿ ಯುವತಿಯೊಂದಿಗೆ ಮದುವೆ ಮಾಡಿಸಿದ ಘಟನೆಯೊಂದು ಬಿಹಾರದಲ್ಲಿ ನಡೆದಿದೆ ಎನ್ನಲಾಗಿದೆ. ಕಳೆದ ಶುಕ್ರವಾರ (ಡಿ.13) ಬೆಳಿಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಿಕ್ಷಕ ತಾನು ಕೆಲಸ ಮಾಡುವಂತಹ ಶಾಲೆಗೆ ಹೋಗುವಾಗ ಇಬ್ಬರು ವ್ಯಕ್ತಿಗಳು ಸ್ಕಾರ್ಪಿಯೋ ಕಾರಿನಲ್ಲಿ ಬಂದು (Teacher Kidnap) ಶಿಕ್ಷಕನಿಗೆ ಬಂದೂಕನ್ನು ತೋರಿಸಿ ಅಪಹರಣ ಮಾಡಿದ್ದಾರೆ. ಬಳಿಕ ಆತನನ್ನು ಹೊಡೆದು ಬಡೆದು ನಾಲ್ಕು ವರ್ಷಗಳ ಕಾಲ ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಆಕೆಯೊಂದಿಗೆ ಬಲವಂತದ ಮದುವೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಹಾರದ ಬೇಗುರ್ಸರಾಯ್ ಜಿಲ್ಲೆಯ ರಾಜೌರಾ ನಿವಾಸಿಯಾದ ಸುಧಾರಕ್ ರೈ ಎಂಬುವವರ ಪುತ್ರ ಅವ್ನೀಶ್ ಕುಮಾರ್ ರವರೇ ಅಪಹರಣಗೊಂಡ ಶಿಕ್ಷಕ. (Teacher Kidnap) ಈ ಶಿಕ್ಷಕನನ್ನು ಲಿಖಿಸರಾಯ್ ಜಿಲ್ಲೆಯ ಯುವತಿ ಗುಂಜನ್ ಎಂಬುವವರ ಸಂಬಂಧಿಕರು ಅಪಹರಿಸಿದ್ದರು. ಸುಮಾರು ನಾಲ್ಕು ವರ್ಷಗಳಿಂದ ಅಶ್ವಿನ್ ಹಾಗೂ ಗುಂಜನ್ ಸಂಬಂಧ ಹೊಂದಿದ್ದರಂತೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಅವ್ನೀಶ್ ಕತಿಹಾರ್ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Teacher Kidnap) ಶಿಕ್ಷಕನಾಗಿ ನೇಮಕಗೊಂಡಿದ್ದ. ಬಳಿಕ ಗುಂಜನ್ ಳನ್ನು ಮದುವೆಯಾಗಲು ನಿರಾಕರಿಸಿದ್ದರಂತೆ. ಈ ಕಾರಣದಿಂದ ಶಿಕ್ಷಕ ಅವ್ನೀಶ್ ನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಸಂಬಂಧಪಟ್ಟ ವಿಡಿಯೋ ಇಲ್ಲಿದೆ ನೋಡಿ: Click Here
ಕೆಲವೊಂದು ವರದಿಗಳ ಪ್ರಕಾರ ಯುವತಿಯ ಹೇಳಿಕೆಯಂತೆ, (Teacher Kidnap) ನಾವಿಬ್ಬರು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಆದರೆ ಇತ್ತೀಚಿಗೆ ನನ್ನಿಂದ ಆತ ದೂರವಾಗಿದ್ದ. ನಾನು ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಮೊದಲಿಗೆ ಇಬ್ಬರೂ ಜೊತೆಯಾಗಿ ಎಲ್ಲಾ ಕಡೆ ತಿರುಗಾಡುತ್ತಿದ್ದೆವು. ನನ್ನನ್ನು ಮದುವೆಯಾಗಿ ಸಂಸಾರ ನಡೆಸುವುದಾಗಿ ಭರವಸೆ ಸಹ ನೀಡಿದ್ದ. ನಾನು ಅವರ ಶಾಲೆಗೂ ಸಹ ಹೋಗಿದ್ದೇನೆ. ಈಗ ಆತ ನನ್ನನ್ನು ದೂರ ಮಾಡಿದ್ದಾಳೆ ಎಂದು ಯುವತಿ ಆರೋಪಿಸಿದ್ದಾಳೆ. (Teacher Kidnap) ಶಿಕ್ಷಕ ಅವ್ನೀಶ್ ಯುವತಿಯ ಆರೋಪವನ್ನು ತಳ್ಳಿಹಾಕಿದ್ದಾನೆ. ಆಕೆ ನನ್ನ ಮೊಬೈಲ್ ನಂಬರ್ ಪಡೆದುಕೊಂಡು ನನಗೆ ಬೆದರಿಕೆ ಹಾಕುತ್ತಿದ್ದಳು. ಆದ್ದರಿಂದ ಆಕೆಯ ಕರೆಯನ್ನು ನಾನು ಸ್ವೀಕರಿಸುತ್ತಿರಲಿಲ್ಲ. (Teacher Kidnap) ಆದರೂ ಆಕೆ ಬೇರೆ ನಂಬರ್ ನಿಂದ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಳು ಎಂದು ಶಿಕ್ಷಕ ಸಹ ಆರೋಪಿಸಿದ್ದಾನೆ.
ಇನ್ನೂ ಅವ್ನೀಶ್ ಆ ಯುವತಿಯನ್ನು ಮದುವೆಯಾಗಲು (Teacher Kidnap) ನಿರಾಕರಿಸಿದ ಹಿನ್ನೆಲೆಯಲ್ಲಿ ಅವ್ನೀಶ್ ಶಾಲೆಗೆ ಹೋಗುವಾಗ ಕಾರಿನಲ್ಲಿ ಬಂದ ಗುಂಪೊಂದು ಬಂದೂಕು ತೋರಿಸಿ ಅಪಹರಣ ಮಾಡಿದ್ದಾರೆ. ನಂತರ ಅಲ್ಲಿಯೇ ಹತ್ತಿರವಿದ್ದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಯುವತಿಯೊಂದಿಗೆ ಬಲವಂತವಾಗಿ ವಿವಾಹ (Teacher Kidnap) ಮಾಡಿಸಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.