ಬಹು ನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada Season 12) ಕಾರ್ಯಕ್ರಮಕ್ಕೆ ತೆರೆ ಎಳೆದಿದ್ದು, ಕಾರ್ಯಕ್ರಮದ ಆರಂಭಕ್ಕೆ ದಿನಾಂಕ ಘೋಷಣೆ ಆಗಿದೆ. ನಟ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಸೀಸನ್, ಸೆಪ್ಟೆಂಬರ್ 28 ರಂದು ಗ್ರ್ಯಾಂಡ್ ಓಪನಿಂಗ್ ಹಮ್ಮಿಕೊಂಡಿದೆ. ಈ ಬಾರಿಯ ಸ್ಪರ್ಧಿಗಳ ಪಟ್ಟಿ ಅಂತಿಮಗೊಂಡಿದ್ದು, ಬಿಗ್ ಬಾಸ್ ಮನೆಗೆ ಸಾಮಾನ್ಯರಿಗೂ ಪ್ರವೇಶ ನೀಡುವ ಹೊಸ ಅವಕಾಶವನ್ನು ಆಯೋಜಕರು ಕಲ್ಪಿಸಿದ್ದಾರೆ.

Bigg Boss Kannada – ಸಾಮಾನ್ಯರಿಗೆ ಬಿಗ್ ಬಾಸ್ ಮನೆ ಪ್ರವೇಶಿಸುವ ಅವಕಾಶ
ಹೌದು, ಈ ಹಿಂದೆ ಸಾಮಾನ್ಯರು ಸ್ಪರ್ಧಿಗಳಾಗಿ ಭಾಗವಹಿಸಿದ್ದುಂಟು. ಆದರೆ ಈ ಬಾರಿ ಸ್ಪರ್ಧಿಯಾಗಿ ಮಾತ್ರವಲ್ಲ, ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಡುವ ಅವಕಾಶ ನೀಡಲಾಗಿದೆ. ಆದರೆ ಈ ಅವಕಾಶ ಪಡೆಯಲು ವೀಕ್ಷಕರು ಒಂದು ಸಣ್ಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ, ಸ್ವತಃ ಕಿಚ್ಚ ಸುದೀಪ್ ಅವರು ವೀಕ್ಷಕರನ್ನು ಬಿಗ್ ಬಾಸ್ ಮನೆಗೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
Bigg Boss Kannada – ಅತಿಥಿಯಾಗಿ ಆಯ್ಕೆಯಾಗುವುದು ಹೇಗೆ?
ಈ ವಿಶೇಷ ಅವಕಾಶ ಪಡೆಯಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕೆಲವು ಜನಪ್ರಿಯ ಧಾರಾವಾಹಿಗಳಾದ ‘ದೃಷ್ಟಿಬೊಟ್ಟು’, ‘ಪ್ರೇಮಕಾವ್ಯ’, ‘ಭಾಗ್ಯಲಕ್ಷ್ಮಿ’, ‘ಮುದ್ದುಸೊಸೆ’, ‘ನಿನಗಾಗಿ’, ‘ಭಾರ್ಗವಿ’, ‘ನಂದಗೋಕುಲ’, ‘ಯಜಮಾನ’, ‘ರಾಮಚಾರಿ’ ಗಳನ್ನು ಪ್ರತಿದಿನ ವೀಕ್ಷಿಸಬೇಕು. ಪ್ರತಿ ಎಪಿಸೋಡ್ ಮುಗಿದ ನಂತರ ಆ ಧಾರಾವಾಹಿಗೆ ಸಂಬಂಧಿಸಿದಂತೆ ಕೇಳಲಾಗುವ ಪ್ರಶ್ನೆಗಳಿಗೆ ಜಿಯೋ ಹಾಟ್‌ಸ್ಟಾರ್ (Jio Hotstar) ಮೂಲಕ ಸರಿಯಾದ ಉತ್ತರ ನೀಡಬೇಕು. ಈ ರೀತಿ ಸರಿಯಾದ ಉತ್ತರ ನೀಡಿ ಆಯ್ಕೆಯಾದ ಅದೃಷ್ಟಶಾಲಿಗಳನ್ನು ಬಿಗ್ ಬಾಸ್ ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ.

ಸಂಬಂಧಪಟ್ಟ ಪೋಸ್ಟ್ ಇಲ್ಲಿದೆ ನೋಡಿ : Click Here
ಅತಿಥಿಗಳಾಗಿ ಒಬ್ಬರನ್ನು ಮಾತ್ರವಲ್ಲದೆ, ಹಲವು ಜನರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಸೆಪ್ಟೆಂಬರ್ 28 ರಂದು ನಡೆಯಲಿರುವ ಈ ಭರ್ಜರಿ ಕಾರ್ಯಕ್ರಮದಲ್ಲಿ ಆಯ್ಕೆಯಾದ ಅತಿಥಿಗಳು ನೇರವಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿ, ಉದ್ಘಾಟನಾ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ಅವಕಾಶ ಪಡೆಯಲಿದ್ದಾರೆ. Read this also : ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿಗಳ ಸಂಭಾವ್ಯ ಪಟ್ಟಿ: ಈ ಬಾರಿ ದೊಡ್ಮನೆಗೆ ಯಾರು ಹೋಗ್ತಾರೆ?
Bigg Boss Kannada : ಬಿಗ್ ಬಾಸ್ ಮನೆಯ ಹೊಸ ವಿಳಾಸ
ಕಳೆದ ಬಾರಿ ಬೆಂಗಳೂರಿನ ಹೊರವಲಯದಲ್ಲಿ ನಿರ್ಮಾಣಗೊಂಡಿದ್ದ ಬಿಗ್ ಬಾಸ್ ಮನೆ ವಿವಾದಕ್ಕೀಡಾಗಿತ್ತು. ಈ ಕಾರಣದಿಂದ, ಈ ಬಾರಿ ಬಿಗ್ ಬಾಸ್ ಮನೆಯನ್ನು ಇನ್ನೋವೇಟಿವ್ ಫಿಲಂ ಸಿಟಿ (Innovative Film City) ಯಲ್ಲಿ ನಿರ್ಮಿಸಲಾಗಿದೆ. ಈ ಸೀಸನ್ ಹಲವು ಹೊಸತನ ಮತ್ತು ವಿಶೇಷತೆಗಳನ್ನು ಒಳಗೊಂಡಿರುತ್ತದೆ ಎಂದು ಆಯೋಜಕರು ಈಗಾಗಲೇ ತಿಳಿಸಿದ್ದಾರೆ.

I am interested bigg boss 12
Nanu 2011 rindda nodthidini nannge big boss andre pancha parnna. Nanage Sudeep sir nodbeku antha thumbba esta. Avaru nedsi kododu . xsalent super .