Uber Driver : ಹಸಿದ ಹೊಟ್ಟೆಗೆ ಅನ್ನ ನೀಡಿದ ಬೆಂಗಳೂರಿನ ಉಬರ್ ಚಾಲಕ! ಮುಂಬೈ ಮಹಿಳೆಯ ಮನ ಗೆದ್ದ ಕನ್ನಡಿಗನ ವಿಡಿಯೋ ವೈರಲ್..!

“ಕೆಟ್ಟವರೇ ತುಂಬಿರೋ ಈ ಕಾಲದಲ್ಲಿ ಒಳ್ಳೆಯವರು ಸಿಗೋದು ಕಷ್ಟ” ಅನ್ನೋ ಮಾತು ಆಗಾಗ ನಮ್ಮ ಕಿವಿಗೆ ಬೀಳ್ತಾ ಇರುತ್ತೆ. ಆದ್ರೆ ಬೆಂಗಳೂರಿನ ನಮ್ಮ ಉಬರ್ (Uber) ಚಾಲಕರೊಬ್ಬರು ಆ ಮಾತನ್ನ ಸುಳ್ಳು ಮಾಡಿದ್ದಾರೆ. ಹಸಿವಿನಿಂದ ಬಳಲುತ್ತಿದ್ದ ಪ್ರಯಾಣಿಕರೊಬ್ಬರಿಗೆ ತಾವೇ ಹೋಗಿ ಊಟ ತಂದುಕೊಡುವ ಮೂಲಕ, ಬೆಂಗಳೂರಿಗರು ಹೃದಯ ಶ್ರೀಮಂತರು ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಚಾಲಕನ ಕಾರ್ಯಕ್ಕೆ ಫಿದಾ ಆಗಿದ್ದಾರೆ.

Uber driver from Bengaluru brings food for hungry passenger; viral heartwarming video

Uber Driver – ಅಷ್ಟಕ್ಕೂ ನಡೆದಿದ್ದೇನು?

ಮುಂಬೈ ಮೂಲದ ಯೋಗಿತಾ ರಾಥೋಡ್ (Yogita Rathore) ಎಂಬುವರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ವಾಪಸ್ ಊರಿಗೆ ಹೋಗಲು ಕ್ಯಾಬ್ ಬುಕ್ ಮಾಡಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ರಾತ್ರಿ 2 ಗಂಟೆಗೆ ಫ್ಲೈಟ್ ಇದ್ದಿದ್ದರಿಂದ, ಅವರಿಗೆ ವಿಪರೀತ ಹಸಿವಾಗಿತ್ತು ಜೊತೆಗೆ ಹೊಟ್ಟೆನೋವು ಕೂಡ ಕಾಣಿಸಿಕೊಂಡಿತ್ತು. ಕ್ಯಾಬ್‌ನಲ್ಲಿ ಕುಳಿತಿದ್ದ ಯೋಗಿತಾ, ತಮ್ಮ ಗೆಳತಿಗೆ ಫೋನ್ ಮಾಡಿ “ನನಗೆ ಸಿಕ್ಕಾಪಟ್ಟೆ ಹಸಿವಾಗ್ತಿದೆ, ಏರ್‌ಪೋರ್ಟ್ ಇನ್ನು ಎಷ್ಟು ದೂರ ಇದೆ ಅಂತ ನಿನಗೆ ಗೊತ್ತಲ್ಲ” ಎಂದು ಸಂಕಟದಿಂದ ಹೇಳಿಕೊಂಡಿದ್ದರು.

Uber Driver – ಹಸಿವು ನೀಗಿಸಿದ ಅನ್ನದಾತ

ಯೋಗಿತಾ ಅವರು ಫೋನ್‌ನಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಂಡ ಆ ಉಬರ್ ಚಾಲಕ ಸುಮ್ಮನೆ ಕೂರಲಿಲ್ಲ. ಮಾರ್ಗಮಧ್ಯೆ ಕಾರನ್ನು ನಿಲ್ಲಿಸಿ ಕೆಳಗಿಳಿದು ಹೋದರು. ಸ್ವಲ್ಪ ಸಮಯದ ನಂತರ ವಾಪಸ್ ಬರುವಾಗ ಕೈಯಲ್ಲಿ ಸ್ಯಾಂಡ್‌ವಿಚ್ ಹಿಡಿದುಕೊಂಡು ಬಂದರು! ಆಗ ಆ ಚಾಲಕ ಆಡಿದ ಮಾತು ನಿಜಕ್ಕೂ ಎಲ್ಲರ ಕಣ್ಣಾಲಿ ಒದ್ದೆ ಮಾಡುವಂತಿತ್ತು. Read this also : ಚಿಲ್ಲರೆ ಇಲ್ಲವೆಂದಾಗ ‘ಪರವಾಗಿಲ್ಲ’ ಎಂದ ಆಟೋ ಡ್ರೈವರ್; ಆತನ ದೊಡ್ಡ ಮನಸ್ಸಿಗೆ ವಿದೇಶಿ ಮಹಿಳೆ ಕೊಟ್ಟ ಸ್ಪೆಷಲ್ ಸರ್ಪ್ರೈಸ್..!

“ಮೇಡಂ, ನೀವು ಫೋನ್‌ನಲ್ಲಿ ಮಾತಾಡುವಾಗ ಸಸ್ಯಾಹಾರಿ ಊಟ ಬೇಕು ಅಂತ ಹೇಳಿದ್ರಿ, ಅದಕ್ಕೆ ಹುಡುಕಿ ವೆಜ್ ಸ್ಯಾಂಡ್‌ವಿಚ್ ತಂದೆ. ಒಂದು ವೇಳೆ ಈ ಜಾಗದಲ್ಲಿ ನನ್ನ ತಂಗಿ ಇದ್ದು, ಅವಳಿಗೆ ಹಸಿವಾಗಿದ್ರೆ ನನಗೂ ಇದೇ ರೀತಿ ಅನ್ನಿಸ್ತಿತ್ತು” ಎಂದು ಹೇಳಿ ಮಾನವೀಯತೆ ಮೆರೆದಿದ್ದಾರೆ.

Uber driver from Bengaluru brings food for hungry passenger; viral heartwarming video

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here 

Uber Driver – ನೆಟ್ಟಿಗರ ಮೆಚ್ಚುಗೆಯ ಸುರಿಮಳೆ

ಈ ಘಟನೆಯಿಂದ ಭಾವುಕರಾದ ಯೋಗಿತಾ, “ಬೆಂಗಳೂರಿನಲ್ಲಿ ನಡೆದ ಈ ಘಟನೆಯನ್ನು ನಾನೆಂದೂ ಮರೆಯಲ್ಲ, ನಿಮಗೆ ತುಂಬು ಹೃದಯದ ಧನ್ಯವಾದಗಳು” ಎಂದು ಹೇಳಿ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಬರೋಬ್ಬರಿ 24 ಲಕ್ಷಕ್ಕೂ ಅಧಿಕ ವೀಕ್ಷಣೆ (Views) ಕಂಡಿದೆ. ವಿಡಿಯೋ ನೋಡಿದ ಜನ, “ಇಂಥ ಒಳ್ಳೆಯವರು ಇರೋದ್ರಿಂದಲೇ ಇನ್ನೂ ಭೂಮಿ ಮೇಲೆ ಮಳೆ ಬೆಳೆ ಆಗ್ತಾ ಇದೆ”, “ಮುಖ ತೋರಿಸಿದ್ರೆ ಈ ಡ್ರೈವರ್ ಅಣ್ಣ ಫೇಮಸ್ ಆಗ್ತಿದ್ರು”, “ಒಳ್ಳೆಯತನಕ್ಕೆ ಸಾವಿಲ್ಲ” ಅಂತೆಲ್ಲಾ ಕಮೆಂಟ್ ಮಾಡಿ ಚಾಲಕನಿಗೆ ಹ್ಯಾಟ್ಸಾಫ್ ಹೇಳಿದ್ದಾರೆ.

Leave a Comment

Your email address will not be published. Required fields are marked *

Scroll to Top