Bengaluru – ಸಾರ್ವಜನಿಕ ಪ್ರದೇಶಗಳಲ್ಲಿ ಕೆಲ ಪ್ರೇಮ ಜೋಡಿಗಳು ಮಾಡುವಂತಹ ಕೆಲಸಗಳಿಂದ ಸಾರ್ವಜನಿಕರಿಗೆ ಕಿರಿಕಿರಿ, ಬೇಸರ ಉಂಟು ಮಾಡುತ್ತಿರುತ್ತದೆ. ಇದೀಗ ಅಂತಹ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಸರ್ಜಾಪುರ ರಸ್ತೆಯಲ್ಲಿ (Sarjapur Road) ನಡೆದ ಒಂದು ಘಟನೆಯಲ್ಲಿ ಯುವ ಜೋಡಿಯೊಂದು ಮೈಮರೆತು ಅಪಾಯಕಾರಿ ರೀತಿಯಲ್ಲಿ ಬೈಕ್ (Bike) ಸವಾರಿ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಆಕ್ರೋಷಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಯುವ ಜೋಡಿಯೊಂದು ಮಾಡಿದ ಅಪಾಯಕಾರಿ ಸ್ಟಂಟ್ ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ. ಕೆಲ ಪುಂಡರು ಮಾಡುವ ವೀಲಿಂಗ್ ಗಳಿಂದ ಅನೇಕ ಅಪಾಯಗಳು ನಡೆದರೇ, ಇದೀಗ ಜೋಡಿಯೊಂದು ಮಾಡಿರುವ ಕೆಲಸ ಆಕ್ರೋಷಕ್ಕೆ ಕಾರಣವಾಗಿದೆ. ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಹುಡಿಗಿಯನ್ನು ಕೂರಿಸಿಕೊಂಡು ರೋಮ್ಯಾನ್ಸ್ ಮಾಡುತ್ತಾ ಬೈಕ್ ಚಲಾಯಿಸಿಕೊಂಡು ಹೋಗಿದ್ದಾರೆ. ತಮಿಳುನಾಡು ನಂಬರ್ ಪ್ಲೇಟ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ನ ಇಂಧನ ಟ್ಯಾಂಕ್‌ನ ಮೇಲೆ ಮಹಿಳೆಯನ್ನು ವ್ಯಕ್ತಿಯೊಬ್ಬ ಕೂರಿಸಿಕೊಂಡಿದ್ದಾನೆ. ಇನ್ನು ಕೂತಿರುವ ಮಹಿಳೆ ಕೂಡ ಸುಮ್ಮನೆ ಇಲ್ಲ. ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡುತ್ತಾ, ಯುವಕನನ್ನು ತಬ್ಬಿಕೊಂಡ ಯುವತಿ ಜಗತ್ತನ್ನೆ ಮೈಮರೆತಂತೆ ವರ್ತನೆ ಮಾಡಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಟ್ರಾಫಿಕ್ ನಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವ ಯುವ ಜೋಡಿ ಮೈಮರೆತು ರೊಮ್ಯಾನ್ಸ್ ಮಾಡುತ್ತಾ ಸಾಗುತ್ತಿರುತ್ತಾರೆ. ಈ ವಿಡಿಯೋವನ್ನು ಬೆಂಗಳೂರು ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈ ರೀತಿಯ ಅಪಾಯಕಾರಿ ಬೈಕ್ ಸವಾರಿಯಿಂದಾಗಿ ಇತರೆ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಇಂತಹ ಅಜಾಗರೂಕತೆ ಮತ್ತು ಅಪಾಯಕಾರಿ ವರ್ತನೆ ಸರಿಯಲ್ಲ. ಅವರ ವಿರುದ್ದ ಕೂಡಲೇ ಕಾನೂನಿನಂತೆ ಕ್ರಮ ತೆಗೆದುಕೊಳ್ಳಬೇಕೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಂಡು ತಮ್ಮ ಆಕ್ರೋಷ ಹೊರಹಾಕುತ್ತಿದ್ದಾರೆ. ಈ ರೀತಿಯ ವರ್ತನೆ ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು. ಅವರನ್ನು ಜೈಲಿಗೆ ಕಳುಹಿಸಬೇಕು. ಈ ರೀತಿಯ ವರ್ತನೆಯಿಂದ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಒಂದು ವೇಳೆ ಅಪಘಾತವಾದರೇ ಅವರಿಬ್ಬರಿಂದ ಅನೇಕರಿಗೆ ಸಮಸ್ಯೆಯಾಗಲಿದೆ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಾ ಆಕ್ರೋಷ ಹೊರಹಾಕಿದ್ದಾರೆ.