Saturday, August 30, 2025
HomeStateಬೆಂಗಳೂರಿನಲ್ಲಿ ರೇವ್ ಪಾರ್ಟಿಯಲ್ಲಿ ಇದ್ರಾ ತೆಲುಗು ನಟಿ ಹೇಮಾ? ನಟಿಯ ಸ್ಪಷ್ಟನೆ ಏನು?

ಬೆಂಗಳೂರಿನಲ್ಲಿ ರೇವ್ ಪಾರ್ಟಿಯಲ್ಲಿ ಇದ್ರಾ ತೆಲುಗು ನಟಿ ಹೇಮಾ? ನಟಿಯ ಸ್ಪಷ್ಟನೆ ಏನು?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ನಟ-ನಟಿಯರು ಸೇರಿದಂತೆ ಹಲವರನ್ನು ಸಿಸಿಬಿ ಪೊಲೀಸರು 50 ಮಂದಿಯನ್ನು ವಶಕ್ಕೆ ಪಡೆದಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬಳಿಯಿರುವ ಜಿ.ಆರ್‍.ಫಾರ್ಮ್ ಹೌಸ್ ನಲ್ಲಿ ಆಯೋಜಿಸಿದ್ದ ಪಾರ್ಟಿಯ ತಡರಾತ್ರಿಯವರೆಗೂ ನಡೆದಿದ್ದು, ಸಿಸಿಬಿ ಪೊಲೀಸರು ಧಾಳಿ ನಡೆಸಿ ಡ್ರಗ್ಸ್ ಸಹ ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಈ ಪಾರ್ಟಿಯಲ್ಲಿ ತೆಲುಗು ಸಿನಿರಂಗದ ಪೋಷಕ ನಟಿ ಹೇಮಾ ಎಂಬುವವರು ಸಹ ಇದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ನಟಿ ಸಹ ಸ್ಪಷ್ಟನೆ ಕೊಟ್ಟಿದ್ದಾರೆ.

Rave party hema gave clarity 0

ಇಂದು ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ಸಿಸಿಬಿ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯಿರುವ ಕಾನ್ ಕಾರ್ಡ್ ಮಾಲೀಕ ಗೋಪಾಲರೆಡ್ಡಿ ಎಂಬುವವರ ಮಾಲೀಕತ್ವದ ಜಿ.ಆರ್‍.ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತಂತೆ. ಈ ಪಾರ್ಟಿಯನ್ನು ಹೈದರಾಬಾದ್ ಮೂಲದ ವಾಸು ಎಂಬಾತನ ಆಯೋಜಿಸಿದ್ದ ಎನ್ನಲಾಗಿದೆ. ಹುಟ್ಟುಹಬ್ಬದ ಹೆಸರಿನಲ್ಲಿ ನಡೆಯುತ್ತಿದ್ದ ಈ ಪಾರ್ಟಿ ತಡರಾತ್ರಿ 2 ಗಂಟೆಯಾದರೂ ಸಹ ಮುಗಿದಿರಲಿಲ್ಲವಂತೆ. ಅವಧಿ ಮೀರಿ ಪಾರ್ಟಿ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 17MDMA ಮಾತ್ರೆಗಳು ಹಾಗೂ ಕೊಕೇನ್ ಸಿಕ್ಕಿದೆ. ಈ ಕುರಿತು ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿ.ಆರ್‍. ಫಾರ್ಮ್ ಹೌಸ್ ಯಾರಿಗೆ ಸೇರಿದ್ದು ಎಂದು ತಿಳಿದು ಬರಬೇಕಿದೆ.

ನಟಿ ಹೇಮಾ ಸ್ಪಷ್ಟನೆಯ ವಿಡಿಯೋ : https://x.com/CinemaPosts/status/1792432642152857885

ಇನ್ನೂ ಈ ಪಾರ್ಟಿಗೆ ಸನ್ ಸೆಟ್ ಟು ಸನ್ ರೈಸ್ ಎಂದು ಹೆಸರಿಡಲಾಗಿದೆ ಎಂದು ಹೇಳಲಾಗಿದೆ. ಬರ್ತ್‌ಡೇ ಹೆಸರಿನಲ್ಲಿ ಆಯೋಜಿಸಿದ್ದ ಈ ರೇವ್ ಪಾರ್ಟಿಯಲ್ಲಿ ಹೈದರಾಬಾದ್ ಹಾಗೂ ಬೆಂಗಳೂರಿನ ನೂರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರಂತೆ. ಕೆಲವು ತೆಲುಗು ನಟಿಯರು, ಸೀರಿಯಲ್ ನಟಿಯರು ಹಾಗೂ ಮಾಡೆಲ್ ಗಳು ಸಹ ಭಾಗಿಯಾಗಿದ್ದರು ಎನ್ನಲಾಗಿದೆ. ದಾಳಿಯ ವೇಳೆ 25 ಕ್ಕೂ ಹೆಚ್ಚು ಯುವತಿಯರು ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗಿಯಾಗಿದ್ದರು ಎಂಬ ಸುದ್ದಿಗಳು ಜೋರಾಗಿ ಹರಿದಾಡಿದೆ. ಇದಕ್ಕೆ ನಟಿ ಹೇಮಾ ಸ್ಪಷ್ಟನೆ ನೀಡಿದ್ದಾರೆ. ನಾನು ಹೈದರಾಬಾದ್ ನಲ್ಲಿದ್ದೇನೆ. ನನ್ನ ವಿರುದ್ದ ಬರುತ್ತಿರುವ ಸುದ್ದಿ ಸುಳ್ಳು ಸುದ್ದಿ. ನಾನು ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular