Author: by Admin
ಮೇ.21 ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ವೀಕ್ಷಣೆ ಮಾಡಲು ಬಂದಿದ್ದ ಬಾಲಿವುಡ್ ನಟ ಶಾರುಖ್ ಖಾನ್ ರವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಹಮದಾಬಾದ್ ನ ಕೆಡಿ ಆಸ್ಪತ್ರೆಗೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೇ.21 ಮಂಗಳವಾರ ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ IPL 2024ರ ಮೊದಲ ಕ್ವಾಲಿಫೈಯರ್ ಪಂದ್ಯ ನಡೆದಿತ್ತು. ಹೈದರಾಬಾದ್ ತಂಡವನ್ನು (SRH) ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ್ತ ತಂಡ (KKR) ಸೋಲಿಸಿ ಫೈನಲ್ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯವನ್ನು ವೀಕ್ಷಣೆ ಮಾಡಲು ನಟ ಶಾರುಖ್ ಖಾನ್ ಆಗಮಿಸಿದ್ದರು. ಈ ಪಂದ್ಯವನ್ನು ತಾವು ಓರ್ವ ಸಾಮಾನ್ಯರಂತೆ ಖುಷಿಯಿಂದ ವೀಕ್ಷಣೆ ಮಾಡಿದ್ದರು. ಪಂದ್ಯ ಮುಗಿದ ಬಳಿಕ ಮೈದಾನದ ಸುತ್ತಾ ಓಡಾಡುತ್ತಾ ಅಲ್ಲಿದ್ದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದರು. ಈ ವೇಳೆ ಅವರು ಹೀಟ್ ಸ್ಟ್ರೋಕ್ ನಿಂದ ದಿಢೀರ್ ನೇ ಆಸ್ಪತ್ರೆಗೆ ದಾಖಲಾಗಿ…
ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಮದುವೆಗೆ ಸಂಬಂಧಿಸಿದ ಕೆಲವೊಂದು ಫನ್ನಿ ವಿಡಿಯೋಗಳು, ನೃತ್ಯದ ವಿಡಿಯೋಗಳು ಸೇರಿದಂತೆ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಮದುವೆಯೊಂದರಲ್ಲಿ ಯುವಕನೋರ್ವ ಬಂದು ವಧುವಿಗೆ ಗಿಫ್ಟ್ ಕೊಟ್ಟು ವರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಯುವಕ ವರನ ಮೇಲೆ ಹಲ್ಲೆ ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ, ರಾಜಸ್ಥಾನದ ಬಿಲ್ವಾರದಲ್ಲಿ ನಡೆದ ಮದುವೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮದುವೆಯಲ್ಲಿ ವಧು ವರರು ನಿಂತಿದ್ದು, ಅಲ್ಲಿಗೆ ತೆರಳಿದ ಯುವಕ ಮೊದಲಿಗೆ ವಧುವಿಗೆ ಗಿಫ್ಟ್ ಕೊಟ್ಟಿದ್ದಾನೆ. ಬಳಿಕ ವರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇನ್ನೂ ಮಧುಮಗನ ಜೀವ ಉಳಿದಿದೆ. ಗಂಭೀರ ಗಾಯಗಳಿಂದ ಮಧುಮಗ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನೂ ವರನ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಬೇರೆಯಾರು ಅಲ್ಲ ವಧುವಿನ ಎಕ್ಸ್ ಬಾಯ್ ಫ್ರೆಂಡ್ ಅಂತೆ. ಹೌದು ವಧುವಿನ ಮಾಜಿ ಗೆಳೆಯ…
ಸಿಲಿಕಾನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್.ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿಯಲ್ಲಿ ಭಾಗಿಯಾದವರ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಈ ಪಾರ್ಟಿಯಲ್ಲಿ ಮಾದಕ ವಸ್ತುಗಳನ್ನು ಬಳಸಿ ಮೋಜು ಮಸ್ತಿ ಮಾಡಿದವರು ಮುಖ ಮುಚ್ಚಿಕೊಂಡು ಕ್ಯಾಮೆರಾ ಕಣ್ಣುಗಳಿಗೆ ಬೀಳದಂತೆ ಓಡಿದ್ದಾರೆ. ಜೊತೆಗೆ ಪಾರ್ಟಿಯಲ್ಲಿ ನಟ-ನಟಿಯರು, ಮಾಡೆಲ್ ಗಳು, ಆರ್.ಜೆಗಳು ಸೇರಿದಂತೆ ಹಲವು ಗಣ್ಯರು ಸಿಕ್ಕಿಬಿದ್ದಿದ್ದಾರೆ. ಸದ್ಯ ಈ ಪಾರ್ಟಿಯಲ್ಲಿ ಭಾಗಿಯಾದವರು ಹೆಸರುಗಳು ಒಂದೊಂದಾಗಿ ಹೊರಬರುತ್ತಿದೆ. ಈ ಸಾಲಿಗೆ ಇದೀಗ ಮತ್ತೋರ್ವ ತೆಲುಗು ನಟಿ ಆಶಿರಾಯ್ ಹೆಸರು ಕೇಳಿಬರುತ್ತಿದೆ. ಅದಕ್ಕೆ ಆಕೆ ಸ್ಪಷ್ಟನೆ ಸಹ ನೀಡಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್.ಫಾರ್ಮ್ ಹೌಸ್ ನಲ್ಲಿ ನಡೆದಂತಹ ರೇವ್ ಪಾರ್ಟಿಯಲ್ಲಿ ಸಿನಿರಂಗದ ನಟ-ನಟಿಯರು ಸೇರಿದಂತೆ ಮಾಡಲ್ ಗಳು, ರಾಜಕಾರಣಿಗಳು ಸಹ ಭಾಗಿಯಾಗಿದ್ದರು ಎನ್ನಲಾಗಿದೆ. ಈ ಪಾರ್ಟಿಯ ಮೇಲೆ ಧಾಳಿ ಮಾಡಿದ ಪೊಲೀಸರು ಮಾದಕ ವಸ್ತುಗಳನ್ನು ಸಹ ವಶಪಡಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಹೆಸರುಗಳು ಒಂದೊಂದಾಗಿ ಹೊರಬರುತ್ತಿದೆ. ಮೊದಲಿಗೆ ತೆಲುಗು…
ಭಾರತ ದೇಶ ಸಾವಿರಾರು ವರ್ಷಗಳ ಹಿಂದೆ ಸಂಪತ್ತಭರಿತವಾದ ದೇಶವಾಗಿತ್ತು. ರಸ್ತೆಯಲ್ಲಿಯೇ ಬಂಗಾರ, ವಜ್ರ, ವೈಡೂರ್ಯಗಳನ್ನು ಮಾರಾಟ ಮಾಡಿದಂತಹ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಹ ನಾವು ಕೇಳಿದ್ದೇವೆ. ಇದೀಗ ರಾಯಲಸೀಮೆ ಭಾಗದ ಕರ್ನೂಲು ಜಿಲ್ಲೆಯ ಭಾಗದಲ್ಲಿ ವಜ್ರ ಬೇಟೆ ಶುರುವಾಗಿದೆ. ಈ ಭಾಗದ ಜಮೀನಿನಲ್ಲಿ ವಜ್ರಗಳು ದೊರೆಯುತ್ತಿದ್ದು, ಸ್ಥಳೀಯರು ವಜ್ರ ಬೇಟೆಗೆ ಮುಗಿಬಿದಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಮಳೆ ಬಂದರೇ ಸಾಕು ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗುತ್ತಾರೆ. ಕರ್ನೂಲು ಜಿಲ್ಲೆಯ ಈ ಭಾಗದಲ್ಲಿ ಮಾತ್ರ ಮಳೆ ಬಿದ್ದ ಕೂಡಲೇ ವಜ್ರಬೇಟೆ ಶುರುವಾಗುತ್ತದೆ. ಜಿಲ್ಲೆಯ ಜೊನ್ನಗಿರಿ, ತುಗ್ಗಲಿ ಸೇರಿದಂತೆ ಹಲವು ಕಡೆ ಮಳೆಯಾದರೇ ಸಾಕು ಹೊಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರ ಬದಲಿಗೆ ಜಮೀನುಗಳಲ್ಲಿ ವಜ್ರಗಳ ಹುಡುಕಾಟ ಶುರು ಮಾಡುತ್ತಾರೆ. ಬೆಳಿಗಿನಿಂದ ಸಂಜೆಯವರೆಗೂ ಹೊಲಗಳಲ್ಲಿಯೇ ಇದ್ದು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ವಜ್ರಗಳ ಹುಡುಕಾಟ ನಡೆಸುತ್ತಾರೆ. ಕರ್ನೂಲು ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಸುರಿದ್ದು, ನೂರಾರು ಮಂದಿ ವಜ್ರಗಳ ಹುಡುಕಾಟ ಶುರು ಮಾಡಿದ್ದಾರೆ. ಎರಡೂ ತೆಲುಗು…
IPL 2024ರ ಎಲಿಮಿನೇಟರ್ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ತಾನ್ ರಾಯಲ್ಸ್ (RR) ನಡುವೆ ನಡೆಯಲಿದೆ. ಈ ಪಂದ್ಯಾವಳಿ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ರಾತ್ರಿ 7.30 ರಿಂದ ಈ ಪಂದ್ಯಾವಳಿ ಆರಂಭವಾಗಲಿದ್ದು, ಕೋಟ್ಯಂತರ ಅಭಿಮಾನಿಗಳು ಈ ಪಂದ್ಯ ವೀಕ್ಷಣೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿಗೆ ಬೆದರಿಕೆ ಬಂದಿದ್ದು, ಅವರ ಸುರಕ್ಷತೆ ಇದೀಗ ಆರ್.ಸಿ.ಬಿ ಗೆ ದೊಡ್ಡ ಆಂತಕ ತಂದುಕೊಟ್ಟಿದೆ. ಆದ್ದರಿಂದಲೇ ಪ್ರಾಕ್ಟೀಸ್ ಮ್ಯಾಚ್ ಸಹ ಆಡಿಲ್ಲ. ಜೊತೆಗೆ ಪತ್ರಿಕಾ ಗೊಷ್ಟಿಯನ್ನು ಸಹ ನಡೆಸಿಲ್ಲ. ಈ ಹಿನ್ನೆಯಲ್ಲಿ ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳು ಮೂಡಿದೆ. ವಿರಾಟ್ ಕೊಹ್ಲಿ (Virat Kohli) ರವರ ಸುರಕ್ಷತೆ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ತಾನ್ ರಾಯಲ್ಸ್ (RR) ಎರಡೂ ತಂಡಗಳಿಂದ ಪತ್ರಿಕಾ ಗೋಷ್ಟಿಯನ್ನು ರದ್ದು ಮಾಡಲಾಗಿದೆ. ಎರಡೂ ತಂಡಗಳು ಕಳೆದ ಸೋಮವಾರ ಅಹಮದಾಬಾದ್ ಗೆ ತಲುಪಿದ್ದವು. RCB ಕಳೆದ ಶನಿವಾರ ಚೆನೈ…
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊಸ ಸಾರಿಗೆ ನಿಯಮಾವಳಿ ರೂಪಿಸಿದೆ. ಅದರಲ್ಲೂ ಪ್ರಮುಖವಾಗಿ ಚಾಲನಾ ಪರವಾನಿಗೆ ಪಡೆಯುವ ವಿಧಾನವನ್ನು ಬದಲಿಸಿದೆ. ಈ ಹೊಸ ನಿಯಮ ಜೂನ್ 1 ರಿಂದ ಜಾರಿಯಾಗಲಿದೆ ಎಂದು ತಿಳಿದುಬಂದಿದೆ. ಈ ಹೊಸ ನಿಯಮದಂತೆ ಇನ್ನು ಮುಂದೆ ಚಾಲನಾ ಪರವಾನಿಗೆ ಪಡೆಯಲು ಆರ್.ಟಿ.ಒ ಎದುರು ಪರೀಕ್ಷೆ ಪಾಸ್ ಮಾಡಬೇಕಿಲ್ಲ. ಆರ್.ಟಿ.ಒ ಎದುರು ಡ್ರೈವಿಂಗ್ ಟೆಸ್ಟ್ ಪಾಸ್ ಮಾಡದೆ ಲೈಸೆನ್ಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೊಸ ಸಾರಿಗೆ ನಿಯಮಗಳ ಬಗ್ಗೆ ತಿಳಿಯಲು ಮುಂದೆ ಓದಿ… ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಜಾರಿಗೊಳಿಸಿದ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಡ್ರೈವಿಂಗ್ ಪರೀಕ್ಷೆಯನ್ನು ಖಾಸಗಿ ಸಂಸ್ಥೆಗಳು ಮಾಡಲಿದೆ. ಸರ್ಕಾರದಿಂದ ಅಧಿಕೃತ ಪರವಾನಿಗೆ ಪಡೆದ ಖಾಸಗಿ ಸಂಸ್ಥೆಗಳಲ್ಲಿ ಚಾಲನಾ ಪರವಾನಿಗೆ ಪಡೆಯಬಹುದಾಗಿದೆ. ಈ ಹೊಸ ನಿಯಮ ಜೂ.1, 2024 ರಿಂದ ಜಾರಿಯಾಗಲಿದೆ. ಖಾಸಗಿ ಸಂಸ್ಥೆಗಳಲ್ಲಿ ಕಾರು, ದ್ವಿಚಕ್ರ ವಾಹನ ಅಥವಾ ಇತರ ವಾಹನಗಳನ್ನು ಕಲಿತು ಅದೇ ಸಂಸ್ಥೆಯ ಅಧಿಕಾರಿಗಳ…
ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರು ಇಲ್ಲದೇ ಇದಿದ್ದರೇ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಕ್ಕೆ ಮೀಸಲಾತಿಯನ್ನು ನೀಡುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ನೆಹರೂ ಮಾತ್ರವಲ್ಲದೇ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಸಹ ಮೀಸಲಾತಿಯ ವಿರುದ್ದವಾಗಿದ್ದರು ಎಂದು ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪೂರ್ವ ಚಂಪಾರಣ್ಯ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಚುನಾವಣಾ ರಾಲಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಮೋದಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಸಮಾನತೆಯ ದೃಷ್ಟಿಯಿಂದ ಶೋಷಿತ ವರ್ಗಗಳಾದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಸಂವಿಧಾನದಲ್ಲಿ ಮೀಸಲು ಕಲ್ಪಿಸಿದ್ದರು. ಒಂದು ವೇಳೆ ಅವರು ಇಲ್ಲದೇ ಇದಿದ್ದರೇ ಶೋಷಿತ ವರ್ಗಕ್ಕೆ ಮೀಸಲು ನೀಡುವ ಬದಲು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲು ನೀಡುತ್ತಿದ್ದರು. ತಾವು ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯದ ಮೀಸಲಿಗೆ ವಿರೋಧ ಹೊಂದಿರುವ ವಿಚಾರವನ್ನು ಸ್ವತಃ ನೆಹರೂ ರವರೇ ಅಂದಿನ…
ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳ ಭೀತಿ ಸಹ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಕಡೆ ಡೆಂಘಿ ಜೊತೆಗೆ ಹಲವು ಸಾಂಕ್ರಾಮಿಕ ರೋಗಗಳ ಭೀತಿ ಜನರಲ್ಲಿ ಕಾಡುತ್ತಿದೆ. ಇದೀಗ ಡೆಂಘಿ ಜೊತೆಗೆ ವೆಸ್ಟ್ ನೈಲ್ ಜ್ವರದ (West Nile Fever) ಆತಂಕ ಹೆಚ್ಚಾಗಿದೆ. ಈಗಾಗಲೇ ಕೇರಳ ಹಾಗೂ ತಮಿಳುನಾಡಿನಲ್ಲಿ ಈ ಜ್ವರ ವರದಿಯಾಗಿದ್ದು, ಬೆಂಗಳೂರಿನಲ್ಲಿ ವಕ್ಕರಿಸುವಂತಹ ಆತಂಕ ಶುರುವಾಗಿದ್ದು, ಆರಂಭದಲ್ಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎನ್ನಲಾಗಿದೆ. ದೇಶದಲ್ಲಿ ಬೇಸಿಗೆ ಮಳೆಯ ಬೆನ್ನಲ್ಲೆ ಡೆಂಘಿ ಜ್ವರದ ಕಾಟ ಶುರುವಾಗಿತ್ತು. ಇದೀಗ ಅದರ ಜೊತೆಗೆ ಕ್ಯೂಲೆಕ್ಸ್ ಎಂಬ ಸೊಳ್ಳೆಗಳಿಂದ ಬರುವಂತಹ ವೆಸ್ಟ್ ನೈಲ್ ಎಂಬ ಜ್ವರ (West Nile Fever) ಶುರುವಾಗಿದೆ. ಕಾಲರಾ, ಡೆಂಘಿ ಜ್ವರ, ನಿಫಾ, ಹಕ್ಕಿಜ್ವರ, ಹಂದಿ ಜ್ವರ ಇದೀಗ ವೆಸ್ಟ್ ನೈಲ್ ಜ್ವರದ ಸರದಿಯಾಗಿದೆ. ಕರ್ನಾಟಕದ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲಿ ಈ ಜ್ವರ ಕಾಣಿಸಿಕೊಂಡಿರುವುದು ಮತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಜ್ವರ ಸಾಮಾನ್ಯ ಜ್ವರಕ್ಕಿಂದ ವಿಭಿನ್ನವಾಗಿರುವ ಕಾರಣದಿಂಧ ತೀವ್ರ ಅನಾರೋಗ್ಯಕ್ಕೆ…
ಕರ್ನಾಟಕದ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದಲ್ಲಿರುವ ರಾಮಭಕ್ತ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ತುಂಬಾನೆ ಪ್ರಸಿದ್ದಿ ಪಡೆದುಕೊಂಡಿದೆ. ಪ್ರತಿನಿತ್ಯ ನೂರಾರು ಸಂಖ್ಯೆಯ ಹನುಮ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವಂತಹ ಈ ದೇವಾಲಯದ ಹುಂಡಿ ಎಣಿಕೆಯ ವೇಳೆ ಮೊದಲ ಬಾರಿಗೆ ಪಾಕಿಸ್ತಾನದ ನಾಣ್ಯ ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ರಾಮಭಕ್ತ ಹನುಮದ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ದೇವಾಸ್ಥಾನದ ಹುಂಡಿಯಲ್ಲಿನ ಕಾಣಿಕೆಗಳನ್ನು ಪ್ರತಿ ತಿಂಗಳು ಎಣಿಕೆ ಮಾಡಲಾಗುತ್ತದೆ. ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಹಂಪಿ ಕಡೆ ಪ್ರವಾಸಕ್ಕೆ ಬರುವಂತಹ ವಿದೇಶಿಗರೂ ಸಹ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತಿರುತ್ತಾರೆ. ದೇವಾಲಯಕ್ಕೆ ಭೇಟಿ ನೀಡುವಂತಹ ವಿದೇಶಿಗರೂ ಸಹ ತಮ್ಮ ದೇಶದ ನಾಣ್ಯ, ನೋಟುಗಳನ್ನು ಹುಂಡಿಯಲ್ಲಿ ಹಾಕುವುದು ಸಾಮಾನ್ಯ. ಈ ಬಾರಿ ಹುಂಡಿ ಎಣಿಕೆ ಸಮಯದಲ್ಲಿ ಮೊದಲ ಬಾರಿ ಪಾಕಿಸ್ತಾನದ ನಾಣ್ಯವೊಂದು ಪತ್ತೆಯಾಗಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಐದು ವಿದೇಶಿ ನಾಣ್ಯ ಸೇರಿ ಹುಂಡಿಯಲ್ಲಿ…
ಜಗತ್ ಪ್ರಸಿದ್ದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಅದರಲ್ಲೂ ಕಾಲುನಡಿಗೆಯ ಮೂಲಕ ಸಹ ಅನೇಕರು ಹೋಗುತ್ತಿರುತ್ತಾರೆ. ಈ ಹಿಂದೆ ಪುಟಾಣಿ ಬಾಲಕಿಯೊಬ್ಬಳನ್ನು ಚಿರತೆಯೊಂದು ಕೊಂದುಹಾಕಿತ್ತು. ಬಳಿಕ ತಿರುಮಲದಲ್ಲಿ ಚಿರುತೆಯನ್ನು ಹಿಡಿಯಲಾಗಿತ್ತು. ಸುಮಾರು ದಿನಗಳ ಬಳಿಕ ಮತ್ತೆ ಚಿರತೆಗಳು ಕಾಣಿಸಿಕೊಂಡಿದ್ದು, ಭಕ್ತರು ಭಯಭೀತರಾಗಿದ್ದಾರೆ. ಕಲಿಯುಗ ದೈವ ತಿರುಮಲದಲ್ಲಿ ನೆಲೆಸಿರುವ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುತ್ತಾರೆ. ಬಹುತೇಕ ಭಕ್ತರು ಕಾಲ್ನಡಿಗೆಯ ಮೂಲಕ ದರ್ಶನಕ್ಕೆ ಹೋಗುತ್ತಿರುತ್ತಾರೆ. ಅಲಿಪಿರಿ ಕಾಲು ದಾರಿಯ ಕೊನೆಯ ಮಟ್ಟಿಲುಗಳ ಬಳಿ ಎರಡು ಚಿರತೆಗಳು ಕಾಣಿಸಿಕೊಂಡು ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಭಕ್ತರು ಚಿರತೆಗಳನ್ನು ಕಂಡ ಕೂಡಲೇ ಜೋರಾಗಿ ಕಿರುಚಾಡಿದ್ದಾರೆ. ಭಕ್ತರ ಕಿರುಚಾಟಕ್ಕೆ ಚಿರತೆಗಳು ಅಲ್ಲಿಂದ ಕಾಡಿನೊಳಗೆ ಓಡಿಹೋಗಿವೆ. ಇನ್ನೂ ಸ್ಥಳಕ್ಕೆ ವಿಜಿಲೆನ್ಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ಸಹ ನಡೆಸುತ್ತಿದ್ದಾರೆ. ಜೊತೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯ ಜಾಡು ಹುಡುಕಲು ಕಾಡಿನೊಳಗೆ ತೆರಳಿದ್ದಾರೆ. ಈ ಘಟನೆಯಿಂದ ಎಚ್ಚೆತ್ತ ಭದ್ರತಾ ಸಿಬ್ಬಂದಿ ಭಕ್ತರನ್ನು ಗುಂಪು-ಗುಂಪಾಗಿ…